Sign In

By signing in or creating an account, you agree with Associated Broadcasting Company's Terms & Conditions and Privacy Policy.

PAN-Aadhaar Linking: ಆಧಾರ್​​-ಪಾನ್​ ಲಿಂಕ್​ಗೆ ನಾಳೆಯೇ ಕೊನೇ ದಿನ; ಆನ್​ಲೈನ್ ಮೂಲಕ ಸುಲಭವಾಗಿ ಮಾಡಿಕೊಳ್ಳುವ ವಿಧಾನ ಇಲ್ಲಿದೆ ನೋಡಿ..

ಮೊಬೈಲ್​ನಲ್ಲಿ ಕೂಡ ಸಿಂಪಲ್ ಆಗಿ ಆಧಾರ್​ ಮತ್ತು ಪಾನ್ ಕಾರ್ಡ್​ ಲಿಂಕ್​ ಮಾಡಿಕೊಳ್ಳಬಹುದಾಗಿದೆ. UIDPAN< ಆಧಾರ್​ ಕಾರ್ಡ್​ನ 12 ಸಂಖ್ಯೆಗಳು >< ಪಾನ್​ ಕಾರ್ಡ್​ನ 10 ಡಿಜಿಟ್​ಗಳು> ಈ ಫಾರ್ಮೇಟ್​ನಲ್ಲಿ ಬರೆದು, 567678 ಅಥವಾ 56161ಕ್ಕೆ ಎಸ್​ಎಂಎಸ್ ಮಾಡಿದರೆ ಆಯಿತು.

PAN-Aadhaar Linking: ಆಧಾರ್​​-ಪಾನ್​ ಲಿಂಕ್​ಗೆ ನಾಳೆಯೇ ಕೊನೇ ದಿನ; ಆನ್​ಲೈನ್ ಮೂಲಕ ಸುಲಭವಾಗಿ ಮಾಡಿಕೊಳ್ಳುವ ವಿಧಾನ ಇಲ್ಲಿದೆ ನೋಡಿ..
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Mar 30, 2021 | 1:19 PM

ಆಧಾರ್​ ಕಾರ್ಡ್​ನೊಂದಿಗೆ ಪಾನ್​ ಕಾರ್ಡ್​ ಲಿಂಕ್​ ಮಾಡುವುದು ಕಡ್ಡಾಯ ಎಂದು ಕೇಂದ್ರಸರ್ಕಾರ ಸೂಚಿಸಿದೆ. ನಿಮ್ಮ ಆಧಾರ್ ಹಾಗೂ ಪಾನ್​ ಕಾರ್ಡ್​ಗಳು ಲಿಂಕ್​ ಆಗದೆ ಇದ್ದರೆ ಬೇಗ ಮಾಡಿಕೊಂಡುಬಿಡಿ, ಯಾಕೆಂದರೆ ನಾಳೆ (ಮಾರ್ಚ್​ 31) ಯೇ ಕೊನೇ ದಿನ. ಮಾರ್ಚ್​ 31ರೊಳಗೆ ಆಧಾರ್​-ಪಾನ್​ ಲಿಂಕ್ ಆಗದೆ ಇದ್ದರೆ ನಿಮ್ಮ ಪಾನ್​ ಕಾರ್ಡ್​ ನಿಷ್ಕ್ರಿಯಗೊಳ್ಳಲಿದೆ. 10,000 ರೂ.ದಂಡವನ್ನೂ ತುಂಬಬೇಕಾಗುತ್ತದೆ.

ಪ್ರಸ್ತುತ ಇರುವ ಕಾನೂನಿನ ಅಡಿ ಆದಾಯ ತೆರಿಗೆ ಸಲ್ಲಿಸಲು (ITR) ಆಧಾರ್ ಕಾರ್ಡ್ ಹಾಗೂ ಪಾನ್​ ಕಾರ್ಡ್​ಗಳು ಲಿಂಕ್ ಆಗಿರುವುದು ಕಡ್ಡಾಯ. ಆದರೆ ಅವರಷ್ಟೇ ಅಲ್ಲದೆ, ಭಾರತದ ಪ್ರತಿ ನಾಗರಿಕನೂ ಕೊಟ್ಟ ಅವಧಿಯ ಒಳಗೆ ಆಧಾರ್​-ಪಾನ್​ನ್ನು ಕಡ್ಡಾಯವಾಗಿ ಲಿಂಕ್ ಮಾಡಿಕೊಳ್ಳಬೇಕು ಎಂದು ಕೇಂದ್ರ ನೇರತೆರಿಗೆಗಳ ಮಂಡಳಿ (ಸಿಬಿಡಿಟಿ) ಸ್ಪಷ್ಟಪಡಿಸಿದೆ. ಒಂದೊಮ್ಮೆ ಯಾರಾದರೂ ಪಾನ್​ ಕಾರ್ಡ್ ಮತ್ತು ಆಧಾರ್​ ಕಾರ್ಡ್​ ಲಿಂಕ್ ಮಾಡಿಕೊಳ್ಳದೆ ಇದ್ದರೆ, ಅವರಿಗೆ ಯಾವುದೇ ಹಣಕಾಸು ವ್ಯವಹಾರ ಅಂದರೆ ಬ್ಯಾಂಕ್​ ಅಕೌಂಟ್​ ಓಪನ್​ ಮಾಡಲು, ಸರ್ಕಾರದಿಂದ ಸಿಗುವ ಪಿಂಚಣಿ, ಸ್ಕಾಲರ್​ಶಿಪ್​, ಎಲ್​ಪಿಜಿ ಸಬ್ಸಿಡಿ ಪಡೆಯಲು ಪಾನ್​ ಕಾರ್ಡ್ ಬಳಕೆ ಮಾಡಲು ಸಾಧ್ಯವಿಲ್ಲದಂತೆ ಆಗುತ್ತದೆ ಎಂದೂ ತಿಳಿಸಿದೆ.

ನಾಳೆಯೊಳಗೆ ನೀವು ಆನ್​​ಲೈನ್​ ಮೂಲಕವೇ ಆಧಾರ್​-ಪಾನ್​ ಲಿಂಕ್​ ಮಾಡಿಕೊಳ್ಳಬಹುದು. ಅದಕ್ಕೆ ಇಲ್ಲಿದೆ ನೋಡಿ ಮಾರ್ಗ ಮೊದಲು ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್​ಕಾರ್ಡ್​ನ್ನು ರೆಡಿ ಆಗಿಟ್ಟುಕೊಳ್ಳಿ

  • ಐಟಿ ಇಲಾಖೆಯ ಇ-ಫೈಲಿಂಗ್​ (E-Filing) ಪೋರ್ಟಲ್​ www.incometaxindiaefiling.gov.in ಗೆ ಭೇಟಿ ನೀಡಿ
  • ಹೋಂ ಪೇಜ್​ನಲ್ಲಿ ನಿಮ್ಮ ಎಡಗಡೆ ಕಾಣುವ ಲಿಸ್ಟ್​​ನಲ್ಲಿ ಲಿಂಕ್ ಆಧಾರ್​ ( Link Aadhaar) ಎಂಬಲ್ಲಿ ಕ್ಲಿಕ್​ ಮಾಡಿ.
  • ಆಗ ಒಂದು ಹೊಸ ಪೇಜ್​ ತೆರೆದುಕೊಳ್ಳುತ್ತದೆ. ಇದರಲ್ಲಿ ನಿಮ್ಮ ಪಾನ್​ ಸಂಖ್ಯೆ, ಆಧಾರ್ ಕಾರ್ಡ್​ ಸಂಖ್ಯೆ, ಆಧಾರ್ ಕಾರ್ಡ್​ನಲ್ಲಿರುವಂತೆಯೇ ಹೆಸರು ಬರೆಯಲು ಕಾಲಂ ಇರುತ್ತದೆ. ಅದರಲ್ಲಿ ಸರಿಯಾಗಿ ತುಂಬಿ.
  • ಆಧಾರ್ ಕಾರ್ಡ್​ನಲ್ಲಿ ನಿಮ್ಮ ಜನನ ವರ್ಷ ಮಾತ್ರ ನಮೂದಾಗಿದ್ದರೆ ಈ ಪೇಜ್​ನಲ್ಲಿ ಕಾಣಿಸಿಕೊಳ್ಳುವ ಬಾಕ್ಸ್​ನಲ್ಲಿ ಚೆಕ್​ ಮಾಡಿ. ಇಲ್ಲದಿದ್ದರೆ ಹಾಗೇ ಬಿಡಿ.
  • I agree to validate my Aadhar details with UIDAI ಎಂಬ ಸಾಲಿನ ಹಿಂದೆ ಇರುವ ಬಾಕ್ಸ್​ನಲ್ಲಿ ಕೂಡ ಟಿಕ್ ಮಾಡಿ.
  • ಅದಾದ ಬಳಿಕ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳುವ captcha codenನ್ನು ನಮೂದಿಸಿ. ಇದರಲ್ಲಿ ಸಮಸ್ಯೆ ಆಗುತ್ತಿದ್ದರೆ ನೀವು ಒಟಿಪಿಗೆ ರಿಕ್ವೆಸ್ಟ್ ಮಾಡಬಹುದು.
  • ಬಳಿಕ ಕೆಳಗೆ ಕಾಣಿಸಿಕೊಳ್ಳುವ Link Aadhaar ಮೇಲೆ ಕ್ಲಿಕ್ ಮಾಡಿದರೆ ಆಯಿತು.

ಮೊಬೈಲ್​ನಲ್ಲಿ ಕೂಡ ಸಿಂಪಲ್ ಆಗಿ ಆಧಾರ್​ ಮತ್ತು ಪಾನ್ ಕಾರ್ಡ್​ ಲಿಂಕ್​ ಮಾಡಿಕೊಳ್ಳಬಹುದಾಗಿದೆ. UIDPAN< ಆಧಾರ್​ ಕಾರ್ಡ್​ನ 12 ಸಂಖ್ಯೆಗಳು >< ಪಾನ್​ ಕಾರ್ಡ್​ನ 10 ಡಿಜಿಟ್​ಗಳು> ಈ ಫಾರ್ಮೇಟ್​ನಲ್ಲಿ ಬರೆದು, 567678 ಅಥವಾ 56161ಕ್ಕೆ ಎಸ್​ಎಂಎಸ್ ಮಾಡಿದರೆ ಆಯಿತು.

ಉದಾಹರಣೆಗೆ ನಿಮ್ಮ ಆಧಾರ್​ ನಂಬರ್ 108956743120 ಮತ್ತು ಪಾನ್ ನಂಬರ್ ABCD1234F ಎಂದಿಟ್ಟುಕೊಳ್ಳೋಣ. ಈಗ ನೀವು ಮೊದಲು UIDAI ಅಂತ ಟೈಪ್​ ಮಾಡಿ ಒಂದು ಸ್ಪೇಸ್​ ಕೊಟ್ಟು, 108956743120 ABCD1234F ಅಂತ ಬರೆದು 567678 or 56161ಕ್ಕೆ ಕಳಿಸಿ. ನಿಮ್ಮ ಆಧಾರ್​ ಮತ್ತು ಪಾನ್​ ಕಾರ್ಡ್ ಲಿಂಕ್​ ಆದ ತಕ್ಷಣ ನಿಮಗೆ ಒಂದು ನೋಟಿಫಿಕೇಶನ್ ಬರುತ್ತದೆ.

ಇದನ್ನೂ ಓದಿ: ಹೋಲಾ ಮೊಹಲ್ಲಾ ಮೆರವಣಿಗೆ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ಸಿಖ್​ ಯುವಕರು; ಕತ್ತಿ ಹಿಡಿದು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ವಾಹನಗಳೆಲ್ಲ ಪುಡಿಪುಡಿ

UPSC Recruitment 2021: ಯುಪಿಎಸ್​ಸಿಯಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ

Published On - 12:42 pm, Tue, 30 March 21

ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ