ವಿನೇಶ್ ಫೋಗಟ್ ವಿಚಾರದಲ್ಲಿ ಪ್ರತಿಪಕ್ಷಗಳ ಗದ್ದಲಕ್ಕೆ ಅಸಮಾಧಾನ, ರಾಜ್ಯಸಭೆಯಿಂದ ಹೊರನಡೆದ ಜಗದೀಪ್ ಧಂಖರ್
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗಗೊಳಿಸಿರುವ ಕುರಿತು ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ಗದ್ದಲ ಉಂಟು ಮಾಡಿದ ಹಿನ್ನೆಲೆಯಲ್ಲಿ ರಾಜ್ಯಸಭಾ ಸ್ಪೀಕರ್ ಜಗದೀಪ್ ಧಂಖರ್ ಸದನದಿಂದ ಹೊರನಡೆದರು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗಗೊಳಿಸಿರುವ ಕುರಿತು ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ಗದ್ದಲ ಉಂಟು ಮಾಡಿದ ಹಿನ್ನೆಲೆಯಲ್ಲಿ ರಾಜ್ಯಸಭಾ ಸ್ಪೀಕರ್ ಜಗದೀಪ್ ಧಂಖರ್ ಸದನದಿಂದ ಹೊರನಡೆದರು.
50 ಕೆಜಿ ಫೈನಲ್ ಪಂದ್ಯಕ್ಕೂ ಮುನ್ನ ಅಧಿಕ ತೂಕ ಕಂಡು ಬಂದ ಬಳಿಕ ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ನ್ಯಾಯಕ್ಕಾಗಿ ಒತ್ತಾಯಿಸಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿದರು. ರಾಜ್ಯಸಭಾ ಸ್ಪೀಕರ್ ಧಂಖರ್ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿಪಕ್ಷ ಸದಸ್ಯರ ನಟವಳಿಕೆಯನ್ನು ಟೀಕಿಸಿದರು.
ನಾನು ನನ್ನ ಪ್ರಮಾಣದಿಂದ ಓಡಿಹೋಗುತ್ತಿಲ್ಲ. ಆದರೆ ನಾನು ಇಂದು ಕಂಡದ್ದು. ಸದಸ್ಯರು ನಡೆದುಕೊಂಡ ರೀತಿಯಿಂದ ಬೇಸರವಾಗಿ ಅಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಇಲ್ಲಿಗೆ ಬಂದಿದ್ದೇನೆ.
ಇದಕ್ಕೂ ಮುನ್ನ, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಅವರ ವರ್ತನೆಯನ್ನು ಧಂಖರ್ ಖಂಡಿಸಿದ್ದರು. ವಿನೇಶ್ ಫೋಗಟ್ ಅವರೊಂದಿಗೆ ಇಡೀ ದೇಶ ನಿಂತಿದೆ ಎಂದು ಕೇಂದ್ರ ಸಚಿವ ಜೆಪಿ ನಡ್ಡಾ ಹೇಳಿದರು. ನಿನ್ನೆ ಪ್ರಧಾನಿ ಅವರನ್ನು ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಎಂದು ಕರೆದಿದ್ದು, ಪ್ರಧಾನಿಯವರ ಧ್ವನಿ 140 ಕೋಟಿ ಜನರ ಧ್ವನಿಯಾಗಿದೆ.
ವಿನೇಶ್ ಫೋಗಟ್ ಅವರೊಂದಿಗೆ ಇಡೀ ದೇಶವಿದೆ ಎಂದು ಸ್ಪೀಕರ್ ಧಂಖರ್ ಹೇಳಿದರು. ಈ ಘಟನೆಯಿಂದ ಎಲ್ಲರಿಗೂ ಬೇಸರವಾಗಿದೆ ಎಂದ ಅವರು, ನಾನು ಮತ್ತು ಪ್ರಧಾನಿ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದೇವೆ, ಆದರೆ ಇದರಲ್ಲಿ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Thu, 8 August 24