ಜಮ್ಮು ಕಾಶ್ಮೀರ: ಪ್ರತ್ಯೇಕ ಎನ್​ಕೌಂಟರ್​ಗಳಲ್ಲಿ ಮೂವರು ಉಗ್ರರ ಹತ್ಯೆ, ನಾಲ್ವರು ಯೋಧರಿಗೆ ಗಾಯ

ಭದ್ರತಾ ಪಡೆಗಳು ಶನಿವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಶ್ರೀನಗರದ ಖನ್ಯಾರ್ ಮತ್ತು ಅನಂತನಾಗ್ ಜಿಲ್ಲೆಯ ಲಾರ್ನುದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಇದುವರೆಗೆ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಜಮ್ಮು ಕಾಶ್ಮೀರ: ಪ್ರತ್ಯೇಕ ಎನ್​ಕೌಂಟರ್​ಗಳಲ್ಲಿ ಮೂವರು ಉಗ್ರರ ಹತ್ಯೆ, ನಾಲ್ವರು ಯೋಧರಿಗೆ ಗಾಯ
ಜಮ್ಮು ಕಾಶ್ಮೀರ: ಪ್ರತ್ಯೇಕ ಎನ್​ಕೌಂಟರ್​ಗಳಲ್ಲಿ ಮೂವರು ಉಗ್ರರ ಹತ್ಯೆ, ನಾಲ್ವರು ಯೋಧರಿಗೆ ಗಾಯImage Credit source: PTI
Follow us
| Updated By: ಗಣಪತಿ ಶರ್ಮ

Updated on: Nov 02, 2024 | 6:03 PM

ಶ್ರೀನಗರ, ನವೆಂಬರ್ 2: ಜಮ್ಮು ಮತ್ತು ಕಾಶ್ಮೀರದ ಎರಡು ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಈ ವೇಳೆ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡಿವೆ. ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಶ್ರೀನಗರ ಜಿಲ್ಲೆಯ ಖನ್ಯಾರ್‌ನಲ್ಲಿ ಶನಿವಾರ ಮುಂಜಾನೆಯಿಂದ ಎನ್‌ಕೌಂಟರ್ ನಡೆಯುತ್ತಿದೆ. ಈ ವೇಳೆ ಓರ್ವ ಉಗ್ರನನ್ನು ಭದ್ರತಾ ಪಡೆ ಹತ್ಯೆ ಮಾಡಿದೆ. ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ಇಬ್ಬರು ಉಗ್ರರು ಅಡಗಿರುವ ಸಾಧ್ಯತೆ ಇದೆ. ಖನ್ಯಾರ್ ವಸತಿ ಪ್ರದೇಶವಾಗಿದೆ, ಭದ್ರತಾ ಪಡೆಗಳು ಹಾನಿಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ, ಇದರ ಪರಿಣಾಮವಾಗಿ ಕಾರ್ಯಾಚರಣೆ ನಿಧಾನವಾಗುತ್ತಿದೆ.

ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಲಾರ್ನುದಲ್ಲಿ ಮತ್ತೊಂದು ಎನ್‌ಕೌಂಟರ್ ನಡೆದಿದ್ದು, ಇದರಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ಖಚಿತಪಡಿಸಿದೆ. ಈ ಮೂಲಕ ಒಟ್ಟು ಮೂವರು ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿದಂತಾಗಿದೆ.

ಸೇನಾ ವಾಹನದ ಮೇಲಿನ ದಾಳಿ ನಂತರ ತೀವ್ರಗೊಂಡ ಶೋಧ

ಶುಕ್ರವಾರ ಸಂಜೆ ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಗುಂಡಿನ ದಾಳಿಯ ಘಟನೆಯ ನಂತರ ಬಂಡಿಪೋರಾದಲ್ಲಿ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಮಧ್ಯೆ, ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಮಗಮ್‌ನಲ್ಲಿ ಕಳೆದ ರಾತ್ರಿ ಭಯೋತ್ಪಾದಕರು ಇಬ್ಬರು ವಲಸೆ ಕಾರ್ಮಿಕರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಾರೆ. ಇದರ ಉಗ್ರರನ್ನು ಹುಡುಕಲು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸತತ 7 ಗಂಟೆಗಳಿಂದ ಕಾರ್ಯಾಚರಣೆ

ಶ್ರೀನಗರದಲ್ಲಿ ಶನಿವಾರ ಬೆಳಿಗ್ಗೆಯಿಂದ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ 4 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಜಮ್ಮು ಕಾಶ್ಮೀರ ಪೊಲೀಸ್ ವಿಶೇಷ ಕಾರ್ಯಾಚರಣೆ ಗುಂಪಿನ ಇಬ್ಬರು ಮತ್ತು ಸಿಆರ್‌ಪಿಎಫ್ ಕ್ವಿಕ್ ಆಕ್ಷನ್ ಟೀಮ್‌ನ ಇಬ್ಬರು ಯೋಧರು ಸೇರಿದ್ದಾರೆ. ಶ್ರೀನಗರದಲ್ಲಿ ಸುಮಾರು 7 ಗಂಟೆಗಳಿಂದ ಎನ್‌ಕೌಂಟರ್ ನಡೆಯುತ್ತಿದೆ.

ಇದನ್ನೂ ಓದಿ: ಅಮಿತ್ ಶಾ ವಿರುದ್ಧದ ಆರೋಪ: ಕೆನಡಾ ಹೈಕಮಿಷನರ್​ ಕರೆಸಿ ಭಾರತ ತೀವ್ರ ಆಕ್ರೋಶ

ಈ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದ ನಂತರ, ಭದ್ರತಾ ಪಡೆಗಳು ಬೆಳಿಗ್ಗೆ ಖನ್ಯಾರ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಸೇನಾ ಮೂಲಗಳು ಹೇಳಿವೆ. ಶೋಧ ಕಾರ್ಯಾಚರಣೆಯು ಎನ್‌ಕೌಂಟರ್‌ಗೆ ತಿರುಗಿತು. ಭಯೋತ್ಪಾದಕರು ಸೇನಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದರು, ನಂತರ ಪ್ರತಿ ದಾಳಿ ನಡೆಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶಿಷ್ಟ ಶೈಲಿಯಲ್ಲಿ ಯೋಗೇಶ್ವರ್ ಪರ ಮತ ಯಾಚಿಸಿದ ಶಾಸಕ ಪ್ರದೀಪ್ ಈಶ್ವರ್
ವಿಶಿಷ್ಟ ಶೈಲಿಯಲ್ಲಿ ಯೋಗೇಶ್ವರ್ ಪರ ಮತ ಯಾಚಿಸಿದ ಶಾಸಕ ಪ್ರದೀಪ್ ಈಶ್ವರ್
ಲಾರಿ ಹಾಗೂ ಬಸ್​ ಮಧ್ಯೆ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಲಾರಿ ಹಾಗೂ ಬಸ್​ ಮಧ್ಯೆ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ವಕ್ಫ್ ಜಮೀನು ಅತಿಕ್ರಮಣಕಾರರಲ್ಲಿ ಶೇಕಡ 90 ಮುಸಲ್ಮಾನರು: ಜಮೀರ್ ಅಹ್ಮದ್
ವಕ್ಫ್ ಜಮೀನು ಅತಿಕ್ರಮಣಕಾರರಲ್ಲಿ ಶೇಕಡ 90 ಮುಸಲ್ಮಾನರು: ಜಮೀರ್ ಅಹ್ಮದ್
ಭಾರವಾದ ಹೃದಯ ಹೊತ್ತು ಬಿಗ್​ಬಾಸ್​ಗೆ ಮರಳಿದ ಸುದೀಪ್, ತಾಯಿಗೆ ಶ್ರದ್ಧಾಂಜಲಿ
ಭಾರವಾದ ಹೃದಯ ಹೊತ್ತು ಬಿಗ್​ಬಾಸ್​ಗೆ ಮರಳಿದ ಸುದೀಪ್, ತಾಯಿಗೆ ಶ್ರದ್ಧಾಂಜಲಿ
ಸಿದ್ದರಾಮಯ್ಯಗೆ ನಾಲಗೆ ಮೇಲೆ ಹಿಡಿತ ಸಾಧಿಸುವ ಜರೂರತ್ತಿದೆ: ಪ್ರಲ್ಹಾದ್ ಜೋಶಿ
ಸಿದ್ದರಾಮಯ್ಯಗೆ ನಾಲಗೆ ಮೇಲೆ ಹಿಡಿತ ಸಾಧಿಸುವ ಜರೂರತ್ತಿದೆ: ಪ್ರಲ್ಹಾದ್ ಜೋಶಿ
ಮಾಧ್ಯಮದವರಿಗೆ ಎಲ್ಲ ವಿಷಯ ಗೊತ್ತಿರುತ್ತೆ ಎಂದು ನಗಲಾರಂಭಿಸಿದ ಕುಮಾರಸ್ವಾಮಿ
ಮಾಧ್ಯಮದವರಿಗೆ ಎಲ್ಲ ವಿಷಯ ಗೊತ್ತಿರುತ್ತೆ ಎಂದು ನಗಲಾರಂಭಿಸಿದ ಕುಮಾರಸ್ವಾಮಿ
ಗಂಗರಾಳಿದ ಚನ್ನಪಟ್ಟಣ ಜನರಲ್ಲಿ ನಾಯಕತ್ವದ ಗುಣ ಇರೋದು ಸ್ವಾಭಾವಿಕ:ಯೋಗೇಶ್ವರ್
ಗಂಗರಾಳಿದ ಚನ್ನಪಟ್ಟಣ ಜನರಲ್ಲಿ ನಾಯಕತ್ವದ ಗುಣ ಇರೋದು ಸ್ವಾಭಾವಿಕ:ಯೋಗೇಶ್ವರ್
ಕುಮಾರಸ್ವಾಮಿ ಚುನಾವಣೆ ಸಮಯುದಲ್ಲಿ ಮಾತ್ರ ಕಣ್ಣೀರು ಸುರಿಸೋದು: ಶಿವಕುಮಾರ್
ಕುಮಾರಸ್ವಾಮಿ ಚುನಾವಣೆ ಸಮಯುದಲ್ಲಿ ಮಾತ್ರ ಕಣ್ಣೀರು ಸುರಿಸೋದು: ಶಿವಕುಮಾರ್
ಜನರ ಸಮಸ್ಯೆ ನೋಡಿ ನೋವಿನಿಂದ ಹಲವಾರು ಬಾರಿ ಅತ್ತಿದ್ದೇನೆ: ಕುಮಾರಸ್ವಾಮಿ
ಜನರ ಸಮಸ್ಯೆ ನೋಡಿ ನೋವಿನಿಂದ ಹಲವಾರು ಬಾರಿ ಅತ್ತಿದ್ದೇನೆ: ಕುಮಾರಸ್ವಾಮಿ
ಸಿಎಂ ಸೂಚನೆಯಂತೆ ನೋಟೀಸ್, ಜಮೀರ್ ಹೇಳಿದ ವಿಡಿಯೋ ತೋರಿಸಿದ ಬಿಜೆಪಿ ನಾಯಕ
ಸಿಎಂ ಸೂಚನೆಯಂತೆ ನೋಟೀಸ್, ಜಮೀರ್ ಹೇಳಿದ ವಿಡಿಯೋ ತೋರಿಸಿದ ಬಿಜೆಪಿ ನಾಯಕ