ಜಾರ್ಖಂಡ್: 130 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿಗೆ ಏಕಾಏಕಿ ಬ್ರೇಕ್ ಹಾಕಿದ ಚಾಲಕ, ಜರ್ಕ್‌ನಿಂದ ಇಬ್ಬರು ಸಾವು
130 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿಗೆ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಜರ್ಕ್‌ನಿಂದ ಇಬ್ಬರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ದೆಹಲಿಗೆ ತೆರಳುತ್ತಿದ್ದ ರೈಲಿನ ಚಾಲಕ ಓವರ್‌ಹೆಡ್ ವಿದ್ಯುತ್ ತಂತಿ ತುಂಡಾದ ಕಾರಣ ತುರ್ತು ಬ್ರೇಕ್ ಹಾಕಿದ್ದರಿಂದ ಕನಿಷ್ಠ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಪೂರ್ವ ಮಧ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ.

ಗೊಮೊಹ್ ಮತ್ತು ಕೊಡೆರ್ಮಾ ರೈಲು ನಿಲ್ದಾಣಗಳ ನಡುವೆ ಪರ್ಸಾಬಾದ್ ಬಳಿ ಮಧ್ಯಾಹ್ನ 12.05 ಕ್ಕೆ ಅಪಘಾತ ಸಂಭವಿಸಿದೆ. ಪುರಿ-ನವದೆಹಲಿ ಪುರುಷೋತ್ತಮ್ ಎಕ್ಸ್‌ಪ್ರೆಸ್ ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಾಗ ವಿದ್ಯುತ್ ತಂತಿ ತುಂಡಾದ ಕಾರಣ, ಚಾಲಕ ರೈಲನ್ನು ನಿಲ್ಲಿಸಲು ತುರ್ತು ಬ್ರೇಕ್ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ರೈಲನ್ನು ಅಪಘಾತ ಸ್ಥಳದಿಂದ ಡೀಸೆಲ್ ಎಂಜಿನ್ ಮೂಲಕ ಗೋಮೊಹ್‌ಗೆ ತರಲಾಯಿತು ಮತ್ತು ಎಲೆಕ್ಟ್ರಿಕ್ ಎಂಜಿನ್ ಮೂಲಕ ದೆಹಲಿಗೆ ಕಳುಹಿಸಲಾಯಿತು.
ಮತ್ತಷ್ಟು ಓದಿ: ಒಂದೊಮ್ಮೆ ರೈಲು ಅಪಘಾತವಾದ್ರೂ ಜೀವ ಉಳೀಬೇಕು ಅಂದ್ರೆ ಯಾವ ಬೋಗಿಯಲ್ಲಿ ನೀವು ಕುಳಿತುಕೊಳ್ಳುವುದು ಸುರಕ್ಷಿತ? ಇಲ್ಲಿದೆ ಮಾಹಿತಿ
ವಿದ್ಯುತ್ ಸರಬರಾಜು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದರಿಂದ, ರೈಲನ್ನು ನಿಲ್ಲಿಸಲು ತುರ್ತು ಬ್ರೇಕ್ ಹಾಕಲಾಯಿತು ಮತ್ತು ಜರ್ಕ್‌ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಧನ್‌ಬಾದ್ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಅಮರೇಶ್ ಕುಮಾರ್ ಹೇಳಿದ್ದಾರೆ.
ಅಪಘಾತದ ನಂತರ ಇಸಿಆರ್‌ನ ಧನ್‌ಬಾದ್ ರೈಲ್ವೆ ವಿಭಾಗದ ಅಡಿಯಲ್ಲಿ ಗ್ರ್ಯಾಂಡ್ ಕಾರ್ಡ್ ಲೈನ್‌ನಲ್ಲಿ ರೈಲು ಸಂಚಾರವು ನಾಲ್ಕು ಗಂಟೆಗಳ ಕಾಲ ಸ್ಥಗಿತಗೊಂಡ ನಂತರ ಪುನರಾರಂಭವಾಯಿತು.
ಧನ್‌ಬಾದ್ ರೈಲ್ವೆ ವಿಭಾಗದ ವ್ಯವಸ್ಥಾಪಕ ಕೆ.ಕೆ.ಸಿನ್ಹಾ ಅವರು ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಕಳೆದ ತಿಂಗಳು ಅಕ್ಟೋಬರ್ 29 ರಂದು ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಎರಡು ರೈಲುಗಳು ಡಿಕ್ಕಿಯಾಗಿ ಹನ್ನೆರಡು ಜನರು ಸಾವನ್ನಪ್ಪಿದರು ಮತ್ತು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
08532 ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ರೈಲು ಮತ್ತು 08504 ವಿಶಾಖಪಟ್ಟಣಂ-ರಾಯಗಡ ಪ್ಯಾಸೆಂಜರ್ ವಿಶೇಷ ರೈಲುಗಳು ಈಸ್ಟ್ ಕೋಸ್ಟ್ ರೈಲ್ವೇ ವಲಯದ ವಾಲ್ಟೇರ್ ವಿಭಾಗದ ವಿಜಯನಗರ-ಕೊತ್ತವಲಸ ರೈಲ್ವೆ ವಿಭಾಗದ ಅಲಮಂಡ ಮತ್ತು ಕಂಟಕಪಲ್ಲಿ ನಡುವೆ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ PMNRF ನಿಂದ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡ ಪ್ರತಿಯೊಬ್ಬ ವ್ಯಕ್ತಿಗೆ 50,000 ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ