22.23 ಲಕ್ಷ ದೀಪ ಬೆಳಗುವ ಮೂಲಕ ವಿಶ್ವ ದಾಖಲೆ ಬರೆದ ಅಯೋಧ್ಯೆ ದೀಪೋತ್ಸವ
Ayodhya Deepotsav: ರಾಮನಗರಿ ದೀಪೋತ್ಸವ ಆಚರಣೆಯನ್ನು ಆಯೋಜಿಸುತ್ತದೆ. ವಿಶ್ವದ ಅತಿ ಹೆಚ್ಚು ದೀಪಗಳನ್ನು ಬೆಳಗಿಸುವ ಹೊಸ ದಾಖಲೆಯನ್ನು ಮತ್ತೊಮ್ಮೆ ಸ್ಥಾಪಿಸಲಾಗುವುದು. ಈ ಬೆಳಕಿನ ಹಬ್ಬದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಭಗವಾನ್ ರಾಮನ ಪಟ್ಟಾಭಿಷೇಕವನ್ನು ಮಾಡಲಿದ್ದಾರೆ ಎಂದು ಜೈವೀರ್ ಸಿಂಗ್ ಹೇಳಿದ್ದಾರೆ
ಅಯೋಧ್ಯೆ ನವೆಂಬರ್ 11: ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯು(Ayodhya) ಶನಿವಾರದಂದು ಭವ್ಯವಾದ ದೀಪೋತ್ಸವ ಆಚರಣೆಗೆ ಸಾಕ್ಷಿಯಾಯಿತು. ಇಲ್ಲಿನ ಘಾಟ್‌ಗಳಲ್ಲಿ ಲಕ್ಷಗಟ್ಟಲೆ ಮಣ್ಣಿನ ದೀಪ ಬೆಳಗಿಸಲಾಗಿದ್ದು ಸರಯು ನದಿಯ ದಂಡೆಯ ಮೇಲಿರುವ ದೇವಾಲಯ ನಗರವು ಇದೀಗ ತನ್ನದೇ ಆದ ವಿಶ್ವ ದಾಖಲೆಯನ್ನು ಮುರಿದಿದೆ. ರಾಮ್ ಕಿ ಪೈಡಿ ಸೇರಿದಂತೆ ಅಯೋಧ್ಯೆಯ 51 ಘಾಟ್‌ಗಳಲ್ಲಿ 22,23,000 ದೀಪಗಳನ್ನು ಬೆಳಗಿಸುವ ಮೂಲಕ ಉತ್ತರಪ್ರದೇಶ ಸರ್ಕಾರ 6 ನೇ ಗಿನ್ನೆಸ್ ವಿಶ್ವ ದಾಖಲೆ(Guinness World Record )ಬರೆದಿದೆ. 2022 ರಲ್ಲಿ ದೀಪೋತ್ಸವ ಆಚರಣೆಯ ಸಮಯದಲ್ಲಿ ಸರ್ಕಾರವು 16 ಲಕ್ಷ ದೀಪಗಳನ್ನು ಬೆಳಗಿಸಿ ಗಿನ್ನೆಸ್ ದಾಖಲೆ ಸೃಷ್ಟಿಸಿತ್ತು.
ದೀಪೋತ್ಸವ ಮೆರವಣಿಗೆಯು ಭಗವಾನ್ ರಾಮನ ಸಾರವನ್ನು ಚಿತ್ರಿಸುವ 18 ವಿಸ್ಮಯ-ಸ್ಫೂರ್ತಿದಾಯಕ ಮತ್ತು ದೈವಿಕ ಸ್ತಬ್ದಚಿತ್ರಗಳನ್ನು ಪ್ರದರ್ಶಿಸಿತು. ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಅವರು ಶನಿವಾರ ಅಯೋಧ್ಯೆಯಲ್ಲಿ ಮೆರವಣಿಗೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಭಗವಾನ್ ರಾಮನ ಜೀವನದ ವಿವಿಧ ಮುಖಗಳನ್ನು ವಿವರಿಸುವ ಸ್ತಬ್ಧಚಿತ್ರ ಮೆರವಣಿಗೆಯು ಅಯೋಧ್ಯೆಯ ಉದಯ ಚೌಕದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿ ರಾಮ್ ಕಥಾ ಪಾರ್ಕ್ ಕಡೆಗೆ ಸಾಗಿತು.
#अयोध्या में पुनः स्थापित हुआ कीर्तिमान!
आध्यात्मिक नगरी श्री अयोध्या जी में #दीपोत्सव के पावन पर्व पर 22 लाख 23 हजार दीपों की श्रृंखला से पुनः विश्व रिकॉर्ड बनाया गया।
समस्त प्रदेशवासियों को हार्दिक बधाई!
जय जय #श्रीराम..#GuinnessWorldRecords #Deepotsav2023 #Ayodhya pic.twitter.com/ELw3eaSUIp
— UP Tourism (@uptourismgov) November 11, 2023
“ರಾಮನಗರಿ ದೀಪೋತ್ಸವ ಆಚರಣೆಯನ್ನು ಆಯೋಜಿಸುತ್ತದೆ. ವಿಶ್ವದ ಅತಿ ಹೆಚ್ಚು ದೀಪಗಳನ್ನು (ದೀಪಗಳು) ಬೆಳಗಿಸುವ ಹೊಸ ದಾಖಲೆಯನ್ನು ಮತ್ತೊಮ್ಮೆ ಸ್ಥಾಪಿಸಲಾಗುವುದು. ಈ ಬೆಳಕಿನ ಹಬ್ಬದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಭಗವಾನ್ ರಾಮನ ಪಟ್ಟಾಭಿಷೇಕವನ್ನು ಮಾಡಲಿದ್ದಾರೆ. ಪ್ರಮುಖ ಅಂಶವೆಂದರೆ ಭಗವಾನ್ ಶ್ರೀರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ 50 ಪ್ರಮುಖ ದೇಶಗಳ ರಾಜತಾಂತ್ರಿಕರ ಉಪಸ್ಥಿತಿ ಇರಲಿದೆ ” ಎಂದು ಜೈವೀರ್ ಸಿಂಗ್ ಈ ಸಂದರ್ಭದಲ್ಲಿ ಹೇಳಿದರು.
ದೀಪೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು “ದೀಪೋತ್ಸವದ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ, ಪ್ರತಿಯೊಬ್ಬರಿಗೂ ಒಂದೇ ಒಂದು ಆಸೆಯಿತ್ತು ಅದು ದೇವಾಲಯ (ರಾಮ ಮಂದಿರ) ನಿರ್ಮಾಣ. ಭಗವಾನ್ ರಾಮನ ದೇವಾಲಯದ (ರಾಮ ಮಂದಿರ) ನಿರ್ಮಾಣವು ಕಳೆದ 9.5 ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಭಾರತದಲ್ಲಿ ಸ್ಥಾಪಿಸಿದ ‘ರಾಮ ರಾಜ್ಯ’ದ ಅಡಿಪಾಯವನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.
#WATCH | Ayodhya, UP: CM Yogi Adityanath says, “The construction of lord Ram’s temple (Ram Temple) strengthens the foundation of ‘Ram Rajya’, which was established in India by Prime Minister Modi in the last 9.5 years.” pic.twitter.com/dM1XjR69K5
— ANI UP/Uttarakhand (@ANINewsUP) November 11, 2023
ರಾಮಮಂದಿರ ನಿರ್ಮಾಣವಾಗುತ್ತಿದ್ದಂತೆ ನಗರವನ್ನು ಅಭಿವೃದ್ಧಿಪಡಿಸಲು ಮತ್ತು ಅಯೋಧ್ಯೆಯ ಮುಖವನ್ನು ಬದಲಾಯಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ, ಭಕ್ತರು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭಗವಾನ್ ರಾಮ್ ಲಲ್ಲಾಗೆ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯದ ಪ್ರವಾಸೋದ್ಯಮ ಮತ್ತು ಮಾಹಿತಿ ಇಲಾಖೆಗಳು ಸ್ತಬ್ಧಚಿತ್ರಗಳನ್ನು ತಯಾರಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಕ್ಕಳ ಹಕ್ಕುಗಳು ಮತ್ತು ಮೂಲಭೂತ ಶಿಕ್ಷಣ, ಮಹಿಳಾ ಸುರಕ್ಷತೆ ಮತ್ತು ಕಲ್ಯಾಣ, ಸ್ವಾವಲಂಬನೆ, ಅರಣ್ಯ ಮತ್ತು ಪರಿಸರದ ರಕ್ಷಣೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಂತಹ ವಿಷಯಗಳ ಕುರಿತು ಸ್ತಬ್ಧಚಿತ್ರಗಳಿದ್ದವು. ಸರ್ಕಾರದ ವಿವಿಧ ಉಪಕ್ರಮಗಳನ್ನು ಸಹ ಇದರಲ್ಲಿ ಪ್ರದರ್ಶಿಸಲಾಗಿದೆ.
ರಾಮಚರಿತಮಾನಸ್ ಮತ್ತು ರಾಮ್ ಕಥಾದಿಂದ ಪ್ರೇರಿತವಾದ ಸ್ತಬ್ಧಚಿಚ್ರ ಸೇರಿದಂತೆ ಶಬರಿ-ರಾಮ್ ಮಿಲಾಪ್ ಮತ್ತು ಲಂಕಾ ದಹನ್ ಕೂಡಾ ಮೆರವಣಿಗೆಯಲ್ಲಿ ಗಮನಸೆಳೆಯಿತು.
ಇದನ್ನೂ ಓದಿ: Vocal for Local: ಪ್ರಧಾನಿ ಮೋದಿ ‘ವೋಕಲ್ ಫಾರ್ ಲೋಕಲ್’ ಕರೆಗೆ ಉತ್ತಮ ಪ್ರತಿಕ್ರಿಯೆ
ಉತ್ತರ ಪ್ರದೇಶದಿಂದ ಮಾತ್ರವಲ್ಲದೆ, ದೇಶದಾದ್ಯಂತದ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿವಿಧ ರಾಜ್ಯಗಳ ಜಾನಪದ ನೃತ್ಯಗಳು ಸೇರಿದಂತೆ ಪ್ರದರ್ಶನಗಳನ್ನು ವೀಕ್ಷಿಸಲು ಅಯೋಧ್ಯೆಯಾದ್ಯಂತ ಜನರು ರಸ್ತೆಗಳ ಉದ್ದಕ್ಕೂ ಜಮಾಯಿಸಿದ್ದರು.
ಅಯೋಧ್ಯೆಯಲ್ಲಿ ದೀಪೋತ್ಸವ ಸಂಪ್ರದಾಯವು 2017 ರಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ರಚನೆಯೊಂದಿಗೆ ಪ್ರಾರಂಭವಾಯಿತು. 2017 ರಲ್ಲಿ 51,000 ದೀಪಗಳನ್ನು ಬೆಳಗುವ ಮೂಲಕ ಪ್ರಾರಂಭವಾಗಿ, ಸಂಖ್ಯೆ 2019 ರಲ್ಲಿ 4.10 ಲಕ್ಷಕ್ಕೆ ಏರಿತು, 2020 ರಲ್ಲಿ 6 ಲಕ್ಷಕ್ಕೂ ಹೆಚ್ಚು ಮತ್ತು 2021 ರಲ್ಲಿ 9 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿ ಗಿನ್ನೆಸ್ ವಿಶ್ವ ದಾಖಲೆ ಬರೆದಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:47 pm, Sat, 11 November 23