
ನವದೆಹಲಿ, ಸೆಪ್ಟೆಂಬರ್ 21: ದೇಶದ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ, ನೋಯ್ಡಾ ಮೂಲದ ‘ಐಜಿ ಡಿಫೆನ್ಸ್’ ಸಂಪೂರ್ಣ ಸ್ವದೇಶಿಯಾಗಿ ನಿರ್ಮಿಸಿರುವ ‘ಕೆಎಎಲ್’ (KAL) ಎಂಬ ದೀರ್ಘ ವ್ಯಾಪ್ತಿಯ ದಾಳಿ ಡ್ರೋನ್ ಪರೀಕ್ಷೆ ರಾಜಸ್ಥಾನದ ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬರೋಬ್ಬರಿ 1 ಸಾವಿರ ಕಿಲೋಮೀಟರ್ ದೂರದವರೆಗೆ ಹಾರಿ ಶತ್ರುಗಳ ಪ್ರಮುಖ ನೆಲೆಗಳ ಮೇಲೆ ನಿಖರ ದಾಳಿ ನಡೆಸಬಲ್ಲ ಈ ಡ್ರೋನ್, ಭಾರತೀಯ ಸಶಸ್ತ್ರ ಪಡೆಗಳ ಮಾನವರಹಿತ ಯುದ್ಧ ಸಾಮರ್ಥ್ಯಕ್ಕೆ ಭಾರಿ ಬಲ ತಂದಿದೆ.
ಆಧುನಿಕ ಯುದ್ಧಭೂಮಿಯಲ್ಲಿ ಗೇಮ್‌ಚೇಂಜರ್ ಆಗುತ್ತಿರುವ ಕಾಮಿಕಾಜೆ ಡ್ರೋನ್ ತಂತ್ರಜ್ಞಾನದಲ್ಲಿ ಭಾರತೀಯ ರಕ್ಷಣಾ ವಲಯ ಹೊಸ ಇತಿಹಾಸ ಬರೆದಿದೆ. ಪೋಖ್ರಾನ್ ಮರುಭೂಮಿಯಲ್ಲಿ ಅಬ್ಬರಿಸಿದ ದೇಶಿ ನಿರ್ಮಿತ ‘ಕೆಎಎಲ್’ ಡ್ರೋನ್, ಆಕಾಶದಲ್ಲಿ ಸತತ 8 ಗಂಟೆಗಳ ಕಾಲ ಹಾರಾಡಿ50 ಕೆಜಿ ಸ್ಫೋಟಕಗಳೊಂದಿಗೆ ಶತ್ರುಗಳ ರಾಡಾರ್ ಹಾಗೂ ವಾಯು-ರಕ್ಷಣಾ ಜಾಲಗಳ ಮೇಲೆ ಅಪ್ಪಳಿಸುವ ತಾಕತ್ತು ಹೊಂದಿದ್ದು, ಸೇನೆಗೆ ಭಾರಿ ಮಾನವರಹಿತ ದಾಳಿ ಬಲವನ್ನು ತಂದುಕೊಟ್ಟಿದೆ.
ಕೆಎಎಲ್’ ಡ್ರೋನ್ ಸುಮಾರು 1 ಸಾವಿರ ಕಿಲೋಮೀಟರ್ ದೂರದ ವ್ಯಾಪ್ತಿಯನ್ನು ಹೊಂದಿದ್ದು, ಆಕಾಶದಲ್ಲಿ ಸತತವಾಗಿ 7 ರಿಂದ 8 ಗಂಟೆಗಳ ಕಾಲ ಹಾರಾಡಬಲ್ಲದು. ಇದು ಸಮುದ್ರ ಮಟ್ಟದಿಂದ 5 ಸಾವಿರ ಮೀಟರ್ ಎತ್ತರದಲ್ಲಿ ಹಾರಾಟ ನಡೆಸುವ ಕ್ಷಮತೆ ಹೊಂದಿದೆ.
ಮತ್ತಷ್ಟು ಓದಿ: ಮೆಕ್ಕಾ ವಾಯುಪ್ರದೇಶ ಪ್ರವೇಶಿಸುವ ಮುನ್ನವೇ ಡ್ರೋನ್ ಪುಡಿಪುಡಿ: ಯೆಮೆನ್ ಬಂಡುಕೋರರಿಗೆ ಸೌದಿ ಖಡಕ್ ವಾರ್ನಿಂಗ್
ಗರಿಷ್ಠ 50 ಕೆಜಿ ತೂಕದ ಸ್ಫೋಟಕಗಳನ್ನು ಹೊತ್ತೊಯ್ಯಬಲ್ಲ ಈ ಡ್ರೋನ್, ಶತ್ರುಗಳ ಪ್ರಮುಖ ಮೂಲಸೌಕರ್ಯಗಳು, ರಾಡಾರ್ ಕೇಂದ್ರಗಳು, ಕಮಾಂಡ್ ಸೆಂಟರ್‌ಗಳು ಮತ್ತು ವಾಯು-ರಕ್ಷಣಾ ಜಾಲಗಳ ಮೇಲೆ ಅತ್ಯಂತ ನಿಖರವಾಗಿ ಅಪ್ಪಳಿಸಿ ಧ್ವಂಸಗೊಳಿಸಲು ವಿನ್ಯಾಸಗೊಳಿಸಲಾಗಿದೆ.
ಈ ವೇದಿಕೆಯು ಸಂಪೂರ್ಣ ಸ್ವಾಯತ್ತವಾಗಿ ಕಾರ್ಯನಿರ್ವಹಿಸಲು ಮಲ್ಟಿ-ಬ್ಯಾಂಡ್ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಮತ್ತು ಜಡತ್ವ ನ್ಯಾವಿಗೇಷನ್ ಸಿಸ್ಟಮ್‌ಗಳನ್ನು (INS) ಸಂಯೋಜಿಸಿದೆ.
🇮🇳 India just tested KAL, its first indigenous 1,000 km-class strike drone.
The drone is built by IG Defence.
It’s a one-way attack drone, meaning it flies straight into the target and doesn’t return.
Range goes up to 1,000 km.
Endurance is rated at 7 to 8 hours in the air.… pic.twitter.com/nYueCLhIJO
— Military Observer (@TheMilObserverr) September 21, 2026
ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಜಗತ್ತನ್ನೇ ಬೆಚ್ಚಿಬೀಳಿಸಿದ ಶಹೆದ್ ಮಾದರಿಯ ದಾಳಿ ಡ್ರೋನ್‌ಗಳಿಗೆ ಭಾರತವೀಗ ತನ್ನದೇ ಆದ ದೇಶಿ ಉತ್ತರ ನೀಡಿದೆ. ನೋಯ್ಡಾದ ಐಜಿ ಡಿಫೆನ್ಸ್ ಸಂಸ್ಥೆ ರೂಪಿಸಿದ ‘ಕೆಎಎಲ್’ ಡ್ರೋನ್ ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ಪರೀಕ್ಷೆಗೊಂಡಿದ್ದು, ಸ್ವಾಯತ್ತ ಹಾರಾಟದ ಮೂಲಕ 1 ಸಾವಿರ ಕಿಲೋಮೀಟರ್ ವ್ಯಾಪ್ತಿಯೊಳಗಿನ ಗುರಿಗಳನ್ನು ಹೊಡೆದುರುಳಿಸುವ ಮೂಲಕ ದೇಶದ ಗಡಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ.
ಚೀನಾ ಮತ್ತು ಪಾಕಿಸ್ತಾನ ಗಡಿಗಳಲ್ಲಿನ ಕಡಿದಾದ ಪರ್ವತ ಶ್ರೇಣಿಗಳು ಮತ್ತು ಮರುಭೂಮಿ ಪ್ರದೇಶಗಳಲ್ಲಿ ಶತ್ರುಗಳ ಹಿಂಭಾಗದಲ್ಲಿರುವ ಬಂಕರ್‌ಗಳು, ಇಂಧನ ಡಿಪೋಗಳು ಮತ್ತು ಕ್ಷಿಪಣಿ ಉಡಾವಣಾ ನೆಲೆಗಳನ್ನು ಮಾನವ ರಹಿತವಾಗಿ, ಕಡಿಮೆ ವೆಚ್ಚದಲ್ಲಿ ನಾಶಪಡಿಸಲು ಈ ತಂತ್ರಜ್ಞಾನವು ಭಾರತೀಯ ಸಶಸ್ತ್ರ ಪಡೆಗಳಿಗೆ ಗಣನೀಯ ಕಾರ್ಯತಂತ್ರದ ಬಲವನ್ನು ನೀಡಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ