AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಕ್ಕಾ ವಾಯುಪ್ರದೇಶ ಪ್ರವೇಶಿಸುವ ಮುನ್ನವೇ ಡ್ರೋನ್ ಪುಡಿಪುಡಿ: ಯೆಮೆನ್ ಬಂಡುಕೋರರಿಗೆ ಸೌದಿ ಖಡಕ್ ವಾರ್ನಿಂಗ್

ಸೌದಿ ಅರೇಬಿಯಾ, ಇಸ್ಲಾಂನ ಪವಿತ್ರ ನಗರ ಮೆಕ್ಕಾದ ದಕ್ಷಿಣದಲ್ಲಿ ಯೆಮೆನ್‌ನ ಹೌತಿ ಬಂಡುಕೋರರು ಹಾರಿಸಿದ್ದ ಸ್ಫೋಟಕ ಡ್ರೋನ್ ಅನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ. ಡ್ರೋನ್ ನಿರ್ಬಂಧಿತ ವಾಯುಪ್ರದೇಶ ಪ್ರವೇಶಿಸುವ ಮುನ್ನವೇ ನಾಶಪಡಿಸಲಾಯಿತು. ಪವಿತ್ರ ಸ್ಥಳಗಳ ಭದ್ರತೆ ತಮ್ಮ ಆದ್ಯತೆ ಎಂದು ಸೌದಿ ಸೇನೆ ಖಡಕ್ ಎಚ್ಚರಿಕೆ ನೀಡಿದೆ. ಹೌತಿಗಳು ಆರೋಪವನ್ನು ನಿರಾಕರಿಸಿದ್ದಾರೆ, ಆದರೆ ಈ ಘಟನೆ ಪ್ರಾದೇಶಿಕ ಭದ್ರತೆಯ ಬಗ್ಗೆ ಕಳವಳ ಹೆಚ್ಚಿಸಿದೆ.

ಮೆಕ್ಕಾ ವಾಯುಪ್ರದೇಶ ಪ್ರವೇಶಿಸುವ ಮುನ್ನವೇ ಡ್ರೋನ್ ಪುಡಿಪುಡಿ: ಯೆಮೆನ್ ಬಂಡುಕೋರರಿಗೆ ಸೌದಿ ಖಡಕ್ ವಾರ್ನಿಂಗ್
ದಾಳಿImage Credit source: @KhalidHabash
ನಯನಾ ರಾಜೀವ್
|

Updated on: Sep 16, 2026 | 10:05 AM

Share

ರಿಯಾದ್, ಸೆಪ್ಟೆಂಬರ್ 16: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ನಗರವಾದ ಮೆಕ್ಕಾದ ದಕ್ಷಿಣ ಭಾಗದಲ್ಲಿ ಯೆಮೆನ್‌ನ ಹೌತಿ ಬಂಡುಕೋರರು ಹಾರಿಸಿದ್ದ ಸ್ಫೋಟಕ ಡ್ರೋನ್ ಒಂದನ್ನು ರಾಯಲ್ ಸೌದಿ ವಾಯು ರಕ್ಷಣಾ ಪಡೆ ಯಶಸ್ವಿಯಾಗಿ ಹೊಡೆದುರುಳಿಸಿದೆ. ಡ್ರೋನ್ ಮೆಕ್ಕಾದ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸುವ ಮುನ್ನವೇ ಹೊಡೆದು ನಾಶಪಡಿಸಲಾಗಿದೆ ಎಂದು ಸೌದಿ ನೇತೃತ್ವದ ಒಕ್ಕೂಟ ತಿಳಿಸಿದೆ. ಈ ಕೃತ್ಯವನ್ನು ಕಟುವಾಗಿ ಖಂಡಿಸಿರುವ ಸೌದಿ ಸೇನೆ, ಮೆಕ್ಕಾ ಮತ್ತು ಮದೀನಾ ಪವಿತ್ರ ಕ್ಷೇತ್ರಗಳು ಹಾಗೂ ಯಾತ್ರಿಕರ ಭದ್ರತೆಯು ತಮಗೆ ಮೊದಲ ಆದ್ಯತೆ ಎಂದು ಹೇಳಿದೆ.

ವಾಯುಪ್ರದೇಶ ಪ್ರವೇಶಿಸುವ ಮುನ್ನವೇ ಧ್ವಂಸ: ಸೌದಿ ಒಕ್ಕೂಟದ ವಕ್ತಾರ ಮೇಜರ್ ಜನರಲ್ ಟರ್ಕಿ ಅಲ್-ಮಲ್ಕಿ ಮಾಹಿತಿ ನೀಡಿ, ಮಂಗಳವಾರ ಸಂಜೆ ಮೆಕ್ಕಾದ ದಕ್ಷಿಣಕ್ಕೆ ಈ ಡ್ರೋನ್ ಪತ್ತೆಯಾಗಿದ್ದು, ಕೂಡಲೇ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಹೊಡೆದುರುಳಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಸೌದಿ ಒಕ್ಕೂಟದ ಕಠಿಣ ಎಚ್ಚರಿಕೆ: ಈ ದಾಳಿಯನ್ನು ಭಯೋತ್ಪಾದಕ ಹಾಗೂ ಪ್ರತಿಕೂಲ ಕೃತ್ಯ ಎಂದು ಕರೆದಿರುವ ಸೌದಿ ಒಕ್ಕೂಟ, ಪವಿತ್ರ ಸ್ಥಳಗಳ ಮೇಲೆ ದಾಳಿ ನಡೆಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಮತ್ತು ಹೌತಿಗಳ ವಿರುದ್ಧ ಅಗತ್ಯ ಬಿದ್ದರೆ ಯಾವುದೇ ಕಠಿಣ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

2017ರ ಬಳಿಕ ಎರಡನೇ ಯತ್ನ: ಜುಲೈ 2017ರಲ್ಲಿ ಹೌತಿಗಳು ಮೆಕ್ಕಾದ ದಿಕ್ಕಿಗೆ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದ್ದರು. ಆ ಘಟನೆಯ ನಂತರ ಪವಿತ್ರ ನಗರವನ್ನು ಗುರಿಯಾಗಿಸಿ ನಡೆಸಲಾದ ಎರಡನೇ ದೊಡ್ಡ ಯತ್ನ ಇದಾಗಿದೆ ಎಂದು ಸೌದಿ ಪಡೆಗಳು ಉಲ್ಲೇಖಿಸಿವೆ.

ಮತ್ತಷ್ಟು ಓದಿ:ಆಕಾಶದಲ್ಲೇ ತಪ್ಪಿದ ಮಹಾ ದುರಂತ: ಝೆಲೆನ್ಸ್ಕಿ ವಿಮಾನಕ್ಕೆ ಅಪ್ಪಳಿಸಬೇಕಿದ್ದ ಡ್ರೋನ್ ಕೊನೆ ಕ್ಷಣದಲ್ಲಿ ಮಿಸ್

ಹೌತಿಗಳ ಪ್ರತ್ಯಾರೋಪ: ಇತ್ತ ಮೆಕ್ಕಾವನ್ನು ಗುರಿಯಾಗಿಸಿಕೊಂಡಿದ್ದ ಆರೋಪವನ್ನು ಹೌತಿ ಬಂಡುಕೋರರು ನಿರಾಕರಿಸಿದ್ದಾರೆ. ಬದಲಿಗೆ ಸೌದಿ ಅರೇಬಿಯಾದ ಎಫ್-15 ಮತ್ತು ಟೈಫೂನ್ ಯುದ್ಧವಿಮಾನಗಳು ಯೆಮೆನ್‌ನ ಶಾಲೆಗಳು, ಸೇತುವೆಗಳು ಮತ್ತು ರಸ್ತೆಗಳು ಸೇರಿದಂತೆ ನಾಗರಿಕ ಪ್ರದೇಶಗಳ ಮೇಲೆ 24ಗಂಟೆಗಳಲ್ಲಿ 52 ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಹೌತಿ ವಕ್ತಾರ ಯಾಹ್ಯಾ ಸಾರಿ ಆರೋಪಿಸಿದ್ದಾರೆ.

ಜಾಗತಿಕ ತೈಲ ಮತ್ತು ಹಡಗು ಸಾರಿಗೆಗೆ ಸಂಕಷ್ಟ: ಇರಾನ್ ಬೆಂಬಲಿತ ಹೌತಿಗಳು ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾದ ಬಾಬ್ ಎಲ್-ಮಂಡೇಬ್ ಜಲಸಂಧಿಯ ತೀರ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದು, ವಾಣಿಜ್ಯ ಸರಕು ಹಡಗುಗಳ ಮೇಲಿನ ದಾಳಿಯನ್ನು ಮುಂದುವರಿಸಿದ್ದಾರೆ.

ಹಾರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ಸೌದಿ ಅರೇಬಿಯಾ ಬಳಸುತ್ತಿರುವ ಈಸ್ಟ್-ವೆಸ್ಟ್ ತೈಲ ಪೈಪ್‌ಲೈನ್ ಮೇಲೂ ಇರಾನ್ ಬೆಂಬಲಿತ ಸಂಘಟನೆಗಳ ನಿರಂತರ ದಾಳಿಗಳು ಪರಿಣಾಮ ಬೀರುತ್ತಿದ್ದು, ಮೆಕ್ಕಾ ಸಮೀಪದ ಇತ್ತೀಚಿನ ಡ್ರೋನ್ ದಾಳಿಯು ಇಡೀ ಗಲ್ಫ್ ವಲಯದ ಭದ್ರತೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ