AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್ ಕ್ಷಿಪಣಿ-ಡ್ರೋನ್ ಅಟ್ಯಾಕ್‌ಗೆ ಅಮೆರಿಕ ತತ್ತರ: ಮಧ್ಯಪ್ರಾಚ್ಯದ ಯುಎಸ್ ನೆಲೆಗಳಿಗೆ ಭಾರಿ ಹಾನಿ, ಪೆಂಟಗನ್ ಅಧಿಕೃತ ವರದಿ ಬಿಡುಗಡೆ

ಪೆಂಟಗನ್ ವರದಿಯ ಪ್ರಕಾರ, ಇರಾನ್‌ನ ಕ್ಷಿಪಣಿ-ಡ್ರೋನ್ ದಾಳಿಗಳಿಂದ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ರಾಜತಾಂತ್ರಿಕ ಸೌಲಭ್ಯಗಳಿಗೆ ವ್ಯಾಪಕ ಹಾನಿಯಾಗಿದೆ. ಬಹ್ರೇನ್, ಕುವೈತ್ ಸೇರಿದಂತೆ 8 ರಾಷ್ಟ್ರಗಳಲ್ಲಿ ನೂರಾರು ಸೇನಾ ಕಟ್ಟಡಗಳು ನಾಶವಾಗಿವೆ. ಇದರಿಂದ ಅಮೆರಿಕದ ಕಾರ್ಯಾಚರಣೆಗಳಿಗೆ ಹಿನ್ನಡೆಯಾಗಿದ್ದು, 184 ಮಿಲಿಯನ್ ಡಾಲರ್ ರಾಜತಾಂತ್ರಿಕ ಹಾನಿ ಸಂಭವಿಸಿದೆ. ಈ ದಾಳಿಗಳಿಂದ ಯುಎಸ್ ಉಪಸ್ಥಿತಿಯನ್ನು ಕಡಿತಗೊಳಿಸುವ ಚರ್ಚೆಗಳು ನಡೆಯುತ್ತಿವೆ.

ಇರಾನ್ ಕ್ಷಿಪಣಿ-ಡ್ರೋನ್ ಅಟ್ಯಾಕ್‌ಗೆ ಅಮೆರಿಕ ತತ್ತರ: ಮಧ್ಯಪ್ರಾಚ್ಯದ ಯುಎಸ್ ನೆಲೆಗಳಿಗೆ ಭಾರಿ ಹಾನಿ, ಪೆಂಟಗನ್ ಅಧಿಕೃತ ವರದಿ ಬಿಡುಗಡೆ
ಅಮೆರಿಕ ಸೇನಾ ನೆಲೆ
ನಯನಾ ರಾಜೀವ್
|

Updated on: Sep 15, 2026 | 10:22 AM

Share

ವಾಷಿಂಗ್ಟನ್, ಸೆಪ್ಟೆಂಬರ್ 15: ಇರಾನ್ ಜೊತೆಗಿನ ಯುದ್ಧದಲ್ಲಿ ಮಧ್ಯಪ್ರಾಚ್ಯದಾದ್ಯಂತ ಇರುವ ತನ್ನ ಮಿಲಿಟರಿ ನೆಲೆಗಳು ಮತ್ತು ರಾಜತಾಂತ್ರಿಕ ಸೌಲಭ್ಯಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ. ಪೆಂಟಗನ್ ಇನ್‌ಸ್ಪೆಕ್ಟರ್ ಜನರಲ್ ಕಚೇರಿ ಬಿಡುಗಡೆ ಮಾಡಿರುವ ವಿಶೇಷ ತನಿಖಾ ವರದಿಯ ಪ್ರಕಾರ, ಇರಾನ್ ಮತ್ತು ಅದರ ಬೆಂಬಲಿತ ಪಡೆಗಳು ನಡೆಸಿದ ನಿರಂತರ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿನ ನೂರಾರು ಯುಎಸ್ ಸೇನಾ ಕಟ್ಟಡಗಳು ನಾಶವಾಗಿದ್ದು, ಆಯಕಟ್ಟಿನ ಮಿಲಿಟರಿ ವ್ಯವಸ್ಥೆ ತೀವ್ರ ಹಿನ್ನಡೆ ಅನುಭವಿಸಿದೆ.

8 ರಾಷ್ಟ್ರಗಳಲ್ಲಿನ ಸೇನಾ ನೆಲೆಗಳು ಟಾರ್ಗೆಟ್: ಕುವೈತ್, ಬಹ್ರೇನ್, ಕತಾರ್, ಯುಎಇ, ಸೌದಿ ಅರೇಬಿಯಾ, ಇರಾಕ್, ಓಮನ್ ಮತ್ತು ಜೋರ್ಡಾನ್‌ನಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲಿದ್ದ ನೂರಾರು ಮೂಲಸೌಕರ್ಯಗಳು ಮತ್ತು ಸಂಗ್ರಹಣಾ ಗೋದಾಮುಗಳು ಇರಾನ್ ದಾಳಿಗೆ ತುತ್ತಾಗಿವೆ.

ಬಹ್ರೇನ್ ನೌಕಾ ಕಮಾಂಡ್‌ಗೆ ಭಾರಿ ಪೆಟ್ಟು: ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾಪಡೆಯ ಪ್ರಾದೇಶಿಕ ಮುಖ್ಯ ಕಚೇರಿ ಸ್ಫೋಟಗೊಂಡ ಪರಿಣಾಮ ನೌಕಾಪಡೆಗೆ ಬೆಂಬಲ ನೀಡುವ ಬಂದರುಗಳ ನಿರ್ವಹಣೆ ಕಷ್ಟಕರವಾಗಿದೆ. ಇದರಿಂದಾಗಿ ಹಿಂದೂ ಮಹಾಸಾಗರದ ಡಿಯಾಗೋ ಗಾರ್ಸಿಯಾ ದ್ವೀಪವನ್ನು ನೌಕಾ ಸರಬರಾಜು ಕೇಂದ್ರವನ್ನಾಗಿ ಬಳಸಬೇಕಾಗಿ ಬಂದಿದ್ದು, ಮರುಪೂರೈಕೆ ಸಮಯ 14 ರಿಂದ 18 ದಿನಗಳಷ್ಟು ತಡವಾಗುತ್ತಿದೆ.

ಮತ್ತಷ್ಟು ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಆಯಿಲ್ ಟ್ಯಾಂಕರ್‌ಗೆ ಇರಾನ್ ನೌಕಾಪಡೆ ಎಚ್ಚರಿಕೆ: ಹಿಂದಿರುಗಿದ ಹಾನಾ ಹಡಗು

ಹೆಲಿಕಾಪ್ಟರ್ ಹಿಂಪಡೆತ: ದಾಳಿಯ ಭೀತಿಯಿಂದ ಇರಾಕ್ ಮತ್ತು ಕುವೈತ್‌ನಿಂದ ಸೇನಾ ವೈದ್ಯಕೀಯ ಸ್ಥಳಾಂತರಿಸುವ ಹೆಲಿಕಾಪ್ಟರ್‌ಗಳನ್ನು ಅಮೆರಿಕ ಹಿಂತೆಗೆದುಕೊಂಡಿದೆ. ಗಾಯಗೊಂಡ ಯೋಧರನ್ನು ರಸ್ತೆ ಮಾರ್ಗದ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸುವ ಅನಿವಾರ್ಯತೆ ಎದುರಾಗಿದೆ.

184 ಮಿಲಿಯನ್ ಡಾಲರ್ ರಾಜತಾಂತ್ರಿಕ ಹಾನಿ: ವಿದೇಶಾಂಗ ಇಲಾಖೆಯ ಲೆಕ್ಕಾಚಾರದ ಪ್ರಕಾರ, ರಾಯಭಾರ ಕಚೇರಿಗಳಿಗೆ ಸುಮಾರು184 ಮಿಲಿಯನ್ ಡಾಲರ್ (ಸುಮಾರು 1,540 ಕೋಟಿ ರೂ.) ಹಾನಿಯಾಗಿದೆ. ಇರಾಕ್ ಒಂದರಲ್ಲೇ 600ಕ್ಕೂ ಹೆಚ್ಚು ದಾಳಿಗಳು ದಾಖಲಾಗಿದ್ದು, ರಿಯಾದ್‌ನ ರಾಯಭಾರ ಕಚೇರಿಯಲ್ಲಿದ್ದ ಸಿಐಎ (CIA) ಕೇಂದ್ರಕ್ಕೂ ಡ್ರೋನ್ ದಾಳಿಯಿಂದ ಹಾನಿಯಾಗಿದೆ.

3,500 ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಾಂತರ: ಯುದ್ಧದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಬಹ್ರೇನ್, ಇರಾಕ್, ಜೋರ್ಡಾನ್, ಸೌದಿ ಅರೇಬಿಯಾ ಮತ್ತು ಯುಎಇ ರಾಯಭಾರ ಕಚೇರಿಗಳಿಂದ ತುರ್ತುಸ್ಥಿತಿಯಲ್ಲದ ಸಿಬ್ಬಂದಿ ಹಾಗೂ ಅವರ ಕುಟುಂಬಗಳನ್ನು ಅಮೆರಿಕಕ್ಕೆ ವಾಪಸ್ ಕರೆಸಿಕೊಳ್ಳಲಾಗಿತ್ತು. ಬಹುತೇಕ ಕಚೇರಿಗಳು ಈಗಲೂ ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ.

ಪರ್ಷಿಯನ್ ಕೊಲ್ಲಿಯಲ್ಲಿ ಅಡೆತಡೆ: ಪರ್ಷಿಯನ್ ಕೊಲ್ಲಿಯಲ್ಲಿ ನಿಯೋಜಿತವಾಗಿರುವ ಯುಎಸ್ ನಾವಿಕರಿಗೆ ಅಗತ್ಯ ಆಹಾರ, ಶಸ್ತ್ರಾಸ್ತ್ರ ಹಾಗೂ ಮಿಲಿಟರಿ ಅಂಚೆ ವ್ಯವಸ್ಥೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕ ಉಪಸ್ಥಿತಿ ಕಡಿತ?: ಇರಾನ್‌ನ ನಿಖರ ದಾಳಿಗಳಿಂದಾಗಿ ಭಾರಿ ಆಸ್ತಿಪಾಸ್ತಿ ನಷ್ಟ ಸಂಭವಿಸಿರುವುದರಿಂದ, ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನಾ ನೆಲೆಗಳು ಮತ್ತು ರಾಜತಾಂತ್ರಿಕ ಸಿಬ್ಬಂದಿಗಳ ಸಂಖ್ಯೆಯನ್ನು ಶಾಶ್ವತವಾಗಿ ಕಡಿತಗೊಳಿಸುವ ಕುರಿತು ವಾಷಿಂಗ್ಟನ್‌ನ ಉನ್ನತ ಮಿಲಿಟರಿ ಹಾಗೂ ಗುಪ್ತಚರ ವಲಯದಲ್ಲಿ ಗಂಭೀರ ಚರ್ಚೆಗಳು ಆರಂಭವಾಗಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ