ಕಾನ್ಪುರ: ಹುಡುಗಿಯರು ಸ್ನಾನ ಮಾಡುತ್ತಿರುವಾಗ ವಿಡಿಯೊ ಚಿತ್ರೀಕರಣ; ಹಾಸ್ಟೆಲ್ ಸಿಬ್ಬಂದಿ ಬಂಧನ
ಕಾನ್ಪುರದ ತುಳಸಿ ನಗರ ಪ್ರದೇಶದಲ್ಲಿ ವೈದ್ಯಕೀಯ ಆಕಾಂಕ್ಷಿಗಳು ತಂಗಿರುವ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಿ ಹುಡುಗಿಯರು ಸ್ನಾನ ಮಾಡುತ್ತಿರುವ ವಿಡಿಯೊ ಶೂಟ್ ಮಾಡಿದ್ದು, ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು
ಕಾನ್ಪುರ: ಸ್ನಾನ ಮಾಡುತ್ತಿರುವಾಗ ತಮ್ಮ ಹಾಸ್ಟೆಲ್ ಸಿಬ್ಬಂದಿ ವಿಡಿಯೊ ಚಿತ್ರೀಕರಿಸಿದ್ದಾರೆ ಎಂದು ಉತ್ತರ ಪ್ರದೇಶದ ಕಾನ್ಪುರದ (Kanpur) ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ದೂರು ನೀಡಿದರೂ ಕ್ರಮ ಕೈಗೊಳ್ಳದ ಆರೋಪದ ಮೇಲೆ ಬಾಲಕಿಯರ ಗುಂಪು ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಪ್ರತಿಭಟನೆ ನಡೆಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ವಾರಗಳ ಹಿಂದೆ ಚಂಡೀಗಢ ವಿಶ್ವವಿದ್ಯಾಲಯದಲ್ಲಿ (Chandigarh University controversy) ಇದೇ ರೀತಿಯ ಪ್ರಕರಣ ನಡೆದಿತ್ತು. ವಿದ್ಯಾರ್ಥಿನಿಯರ ಹಾಸ್ಟೆಲ್‌ನಿಂದ ವಿಡಿಯೊ ಸೋರಿಕೆಯಾಗಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದ್ದರು. ಕಾನ್ಪುರದ ಖಾಸಗಿ ಹಾಸ್ಟೆಲ್‌ನಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ವಿದ್ಯಾರ್ಥಿನಿಯರು ಅಶ್ಲೀಲ ವಿಡಿಯೊ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಕಾನ್ಪುರದ ತುಳಸಿ ನಗರ ಪ್ರದೇಶದಲ್ಲಿ ವೈದ್ಯಕೀಯ ಆಕಾಂಕ್ಷಿಗಳು ತಂಗಿರುವ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಿ ಹುಡುಗಿಯರು ಸ್ನಾನ ಮಾಡುತ್ತಿರುವ ವಿಡಿಯೊ ಶೂಟ್ ಮಾಡಿದ್ದು, ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೂರಿನ ಪ್ರಕಾರ, ಹಾಸ್ಟೆಲ್ ಸಿಬ್ಬಂದಿ ಹಾಸ್ಟೆಲ್‌ನಲ್ಲಿರುವ ಹುಡುಗಿಯರ ಹಲವಾರು ಅಶ್ಲೀಲ ವೀಡಿಯೊಗಳನ್ನು ಮಾಡಿದ್ದಾನೆ. ಗುರುವಾರ ಈತ ರಹಸ್ಯವಾಗಿ ಚಿತ್ರೀಕರಣ ಮಾಡುತ್ತಿದ್ದುದನ್ನು ನೋಡಿದ ಬಾಲಕಿಯೊಬ್ಬಳು ಆತನ ಫೋನ್ ಕಸಿದುಕೊಂಡಿದ್ದಳು. ಇದರಲ್ಲಿ ಹಲವು ವಿಡಿಯೊಗಳು ಇರುವುದಾಗಿ ಕಂಡುಕೊಂಡ ವಿದ್ಯಾರ್ಥಿನಿಯರು ಸಮೀಪದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಈ ಹಾಸ್ಟೆಲ್ ಉತ್ತರ ಪ್ರದೇಶದ ಜಿಲ್ಲೆಯೊಂದರಲ್ಲಿ ಹೆಚ್ಚುವರಿ ಎಸ್‌ಪಿಯಾಗಿ ನೇಮಕಗೊಂಡ ಪೊಲೀಸ್ ಅಧಿಕಾರಿಯ ಒಡೆತನದಲ್ಲಿದೆ. ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದು ವೈದ್ಯಕೀಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಬಾಲಕಿಯರಿಂದ ದೂರು ಸ್ವೀಕರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸಿಪಿ ಕಲ್ಯಾಣಪುರ ದಿನೇಶ್ ಶುಕ್ಲಾ ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.