Kanwar Yatra 2021: ಸುಪ್ರೀಂಕೋರ್ಟ್​ನ ಸೂಚನೆಗೆ ಬಾಗಿದ ಉತ್ತರಪ್ರದೇಶ ಸರ್ಕಾರ; ಕನ್ವರ್ ಯಾತ್ರೆ ರದ್ದು

| Updated By: Lakshmi Hegde

Updated on: Jul 18, 2021 | 4:48 PM

ಶಿವನ ಭಕ್ತರು ಗಂಗಾಜಲ ಸಂಗ್ರಹಿಸಿ, ತಮ್ಮ ರಾಜ್ಯಗಳ ಶಿವನ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಹಾಗಾಗಿ ಈ ದಿನದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಕೊವಿಡ್​ 19 ಸೋಂಕು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಸಹಜವಾಗಿಯೇ ಹೆಚ್ಚಿರುತ್ತದೆ.

Kanwar Yatra 2021: ಸುಪ್ರೀಂಕೋರ್ಟ್​ನ ಸೂಚನೆಗೆ ಬಾಗಿದ ಉತ್ತರಪ್ರದೇಶ ಸರ್ಕಾರ; ಕನ್ವರ್ ಯಾತ್ರೆ ರದ್ದು
ಕನ್ವರ್ ಯಾತ್ರಾ
Follow us on

ಕೊವಿಡ್​ 19 (Covid 19) ಸಾಂಕ್ರಾಮಿಕದ ಮಧ್ಯೆ ಈ ಬಾರಿ ಕನ್ವರ್ ಯಾತ್ರೆ (Kanwar Yatra)ಯನ್ನು ನಡೆಸದೆ ಇರಲು ಕನ್ವರ್​ ಸಂಘ ನಿರ್ಧರಿಸಿದೆ. ಉತ್ತರ ಪ್ರದೇಶ ಸರ್ಕಾರ (Uttar Pradesh Government)ದೊಂದಿಗೆ ಇಂದು ಸಮಾಲೋಚನೆ ನಡೆಸಿದ ಕನ್ವರ್ ಸಂಘ, ಕೊನೆಗೂ ಯಾತ್ರೆಯನ್ನು ರದ್ದುಗೊಳಿಸಿತು. ಕೊವಿಡ್​ 19 ಸಾಂಕ್ರಾಮಿಕದ ಮಧ್ಯೆಯೂ ಉತ್ತರಪ್ರದೇಶ ಸರ್ಕಾರ ಕನ್ವರ್ ಯಾತ್ರೆಗೆ ಅವಕಾಶ ಮಾಡಿಕೊಟ್ಟಿತ್ತು. ಈ ಮೂಲಕ ಟೀಕೆಗೆ ಗುರಿಯಾಗಿದ್ದಷ್ಟೇ ಅಲ್ಲ, ಪ್ರಸಕ್ತ ವಿಷಯವನ್ನು ಸುಪ್ರೀಂಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಕನ್ವರ್ ಯಾತ್ರೆ ನಡೆಸುವ ತೀರ್ಮಾನವನ್ನು ಇನ್ನೊಮ್ಮೆ ಯೋಚಿಸಿ ಎಂದು ಹೇಳಿದ್ದ ಸುಪ್ರೀಂಕೋರ್ಟ್​, ಯಾತ್ರೆಯನ್ನು ಸಾಂಕೇತಿಕವಾಗಿ ನಡೆಸಲಷ್ಟೇ ಅವಕಾಶ ನೀಡುವುದಾಗಿ ತಿಳಿಸಿತ್ತು.

ಅದರ ಬೆನ್ನಲ್ಲೇ ಶನಿವಾರ ಉತ್ತರ ಪ್ರದೇಶದ ಆಡಳಿತ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್​ ಅಶ್ವಥಿ, ಮಾಹಿತಿ ಸಚಿವಾಲಯದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನವನೀತ್​ ಸೆಹಗಲ್​, ಡಿಜಿಪಿ ಮುಕುಲ್ ಗೋಯಲ್​ ಮತ್ತು ಕನ್ವರ್​ ಸಂಘದ (ಶಿವನ ಭಕ್ತರ ಗುಂಪು) ಪ್ರತಿನಿಧಿಗಳು ಸೇರಿ ಸಭೆ ನಡೆಸಿ ಚರ್ಚಿಸಿದ್ದರು. ಅದಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನವನೀತ್​ ಸೆಹಗಲ್​, ನಮ್ಮ ಉತ್ತರ ಪ್ರದೇಶ ಸರ್ಕಾರದ ಮನವಿ ಮೇರೆಗೆ ಕನ್ವರ್ ಸಂಘ ಯಾತ್ರೆಯನ್ನು ರದ್ದುಗೊಳಿಸಿದೆ ಎಂದು ತಿಳಿಸಿದ್ದಾರೆ.

ಕನ್ವರಿಯಾಸ್​ ಅಂದರೆ ಶಿವನ ಭಕ್ತರು ಗಂಗಾಜಲ ಸಂಗ್ರಹಿಸಿ, ತಮ್ಮ ರಾಜ್ಯಗಳ ಶಿವನ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಹಾಗಾಗಿ ಈ ದಿನದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಕೊವಿಡ್​ 19 ಸೋಂಕು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಸಹಜವಾಗಿಯೇ ಹೆಚ್ಚಿರುತ್ತದೆ. ಈ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್, ಸರ್ಕಾರದ ಅಂತಿಮ ನಿರ್ಣಯವನ್ನು ಸೋಮವಾರ (ಜು.19)ದಂದು ತಿಳಿಸಬೇಕು ಎಂದು ಹೇಳಿತ್ತು. ಉತ್ತಾರಖಂಡ, ಬಿಹಾರ, ಜಾರ್ಖಂಡ, ಒಡಿಶಾಗಳು ಈಗಾಗಲೇ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿದ್ದರೂ, ಉತ್ತರಪ್ರದೇಶ ಮಾತ್ರ ತಾವು ಅವಕಾಶ ನೀಡುವುದಾಗಿ ಹೇಳಿಕೊಂಡಿತ್ತು. ಅದೂ ಕೂಡ ಈಗ ರದ್ದುಗೊಳಿಸಿದೆ.

ಇದನ್ನೂ ಓದಿ: ಮುಗಿಯದ ಸಿಂಗ್-ಸಿಧು ಕಾದಾಟ, ಇಂದು ಸಭೆ ಸೇರಿರುವ ಪಂಜಾಬ ಸಂಸದರಿಗೆ ಸಿಧು ಪಿಪಿಸಿಸಿ ಅಧ್ಯಕ್ಷರಾಗುವುದು ಬೇಕಿಲ್ಲ!

Kanwar Yatra 2021 called off in Uttar Pradesh By Kanwar Sangh