ಲಾರೆನ್ಸ್ ಬಿಷ್ಣೋಯ್ ಹತ್ಯೆ ಮಾಡುವ ಅಧಿಕಾರಿಗೆ 1,11,11,111 ರೂ. ಬಹುಮಾನ; ಕರ್ಣಿ ಸೇನೆ ಘೋಷಣೆ
ಕಳೆದ ವರ್ಷ ಕರ್ಣಿ ಸೇನಾ ಗುಂಪಿನ ಮಾಜಿ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿದ್ದರಿಂದ ಲಾರೆನ್ಸ್ ಬಿಷ್ಣೋಯ್ ಅವರನ್ನು ಕೊಲ್ಲುವ ಪೊಲೀಸ್ ಅಧಿಕಾರಿಗೆ ಕರ್ಣಿ ಸೇನಾ ಮುಖ್ಯಸ್ಥರು 1.11 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ.
ನವದೆಹಲಿ: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲುವ ಪೊಲೀಸರಿಗೆ ಕರ್ಣಿ ಸೇನೆ ಬಹುಮಾನ ಘೋಷಿಸಿದೆ. ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಡಾ. ರಾಜ್ ಶೇಖಾವತ್ ಅವರು ಇನ್ಸ್ಟಾಗ್ರಾಂನಲ್ಲಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಲಾರೆನ್ಸ್ ಬಿಷ್ಣೋಯ್ ಹತ್ಯೆ ಮಾಡುವ ಅಧಿಕಾರಿಗೆ 1,11,11,111 ರೂಪಾಯಿಗಳ ಬಹುಮಾನವನ್ನು ಘೋಷಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಶೇಖಾವತ್ ಅವರು ಲಾರೆನ್ಸ್ ಬಿಷ್ಣೋಯ್ ದೇಶಕ್ಕೆ ಬೆದರಿಕೆಯಾಗಿದ್ದಾರೆ ಎಂದು ಕರೆದಿದ್ದಾರೆ. ಶೇಖಾವತ್ ಅವರು ಬಿಜೆಪಿ ಮತ್ತು ಗುಜರಾತ್ ಸರ್ಕಾರಗಳನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಕರ್ಣಿ ಸೇನಾ ಮುಖ್ಯಸ್ಥ ರಾಜ್ ಶೇಖಾವತ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ ಅದು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಲಾರೆನ್ಸ್ ಬಿಷ್ಣೋಯ್ ಅವರನ್ನು ಕೊಲ್ಲುವ ಯಾವುದೇ ಪೊಲೀಸ್ ಅಧಿಕಾರಿಗೆ 1,11,11,111 ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮುಂದಿನ ಟಾರ್ಗೆಟ್ ಯಾರು?
ಈ ವೀಡಿಯೊದಲ್ಲಿ, ಲಾರೆನ್ಸ್ ಬಿಷ್ಣೋಯ್ ಅವರನ್ನು ಎನ್‌ಕೌಂಟರ್ ಮಾಡುವ ಯಾವುದೇ ಪೊಲೀಸರಿಗೆ ಈ ಬಹುಮಾನದ ಮೊತ್ತವನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಅವರನ್ನು ದೇಶಕ್ಕೆ ಬೆದರಿಕೆ ಎಂದು ಕರೆದ ರಾಜ್ ಶೇಖಾವತ್ ಗುಜರಾತ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
जो पुलिसकर्मी आंतकवादी लॉरेंस बिश्नोई का एनकाउंटर करेगा उस पुलिसकर्मी को @RRKarniSena की तरफ से 1 करोड़ 11 लाख 11 हजार 111 रुपए नगद इनाम दिया जाएगा@IAMRAJSHEKHAWAT pic.twitter.com/QnTEwGAi9j
— Karni Sena (@RRKarniSena) October 21, 2024
ನಮ್ಮ ಅಮೂಲ್ಯ ರತ್ನ ಮತ್ತು ಪರಂಪರೆಯ ಸುಖದೇವ್ ಸಿಂಗ್ ಗೊಗಮೆಡಿಯ ಹಂತಕ ಲಾರೆನ್ಸ್ ಬಿಷ್ಣೋಯ್ ಅವರನ್ನು ಎನ್‌ಕೌಂಟರ್ ಮಾಡಿದ ಪೊಲೀಸರಿಗೆ ಕ್ಷತ್ರಿಯ ಕರ್ಣಿ ಸೇನೆಯು 1,11,11,111 (ಒಂದು ಕೋಟಿ ಹನ್ನೊಂದು ಲಕ್ಷದ ಹನ್ನೊಂದು ಸಾವಿರದ ನೂರಾ ಹನ್ನೊಂದು ರೂಪಾಯಿ) ನೀಡುವ ಮೂಲಕ ಬಹುಮಾನ ನೀಡಲಿದೆ. ಆ ವೀರ ಪೋಲೀಸರ ಕುಟುಂಬದ ಭದ್ರತೆ ಮತ್ತು ಸಂಪೂರ್ಣ ವ್ಯವಸ್ಥೆಗಳ ಜವಾಬ್ದಾರಿಯೂ ನಮ್ಮದಾಗಿರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ನಾರಿ ಶಕ್ತಿ ನನಗೆ ಸದಾ ಪ್ರೇರಣೆ; ಒಡಿಶಾದ ಮಹಿಳೆಗೆ ಮೋದಿ ಧನ್ಯವಾದ
ಕರ್ಣಿ ಸೇನೆಯ ಮಾಜಿ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಡಿಸೆಂಬರ್ 5, 2023ರಂದು ಕೆಲವು ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದರು. ಗುಂಡಿನ ದಾಳಿಯ ನಂತರ, ಶೂಟರ್‌ಗಳು ಸ್ಥಳದಿಂದ ಓಡಿಹೋಗಿದ್ದರು. ಗೊಗಮೆಡಿ ಹತ್ಯೆಯ ಕೆಲವು ಗಂಟೆಗಳ ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅದರ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ