Kashmir Earthquake: ಕಣಿವೆ ರಾಜ್ಯ ಕಾಶ್ಮೀರ, ದೆಹಲಿಯಲ್ಲಿ ಭೂಕಂಪ: 5.9 ರಷ್ಟು ತೀವ್ರತೆ ದಾಖಲು
ಕಾಶ್ಮೀರ ಕಣಿವೆಯಲ್ಲಿ ಭೂಕಂಪ ಸಂಭವಿಸಿದ್ದು, ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಭೂಕಂಪನದ ಅನುಭವವಾಗಿದೆ.
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ (Delhi) ಸೇರಿದಂತೆ ಹಲವೆಡೆ ಭೂಕಂಪನ (Earthquake) ಸಂಭವಿಸಿದೆ. ಗುರವಾರ(ಜ.05) ಸಂಜೆ 7.55ರ ಸುಮಾರಿಗೆ ಕಾಶ್ಮೀರ ಕಣಿವೆಯಲ್ಲಿ ಭೂಕಂಪ ಸಂಭವಿಸಿದ್ದು, ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಭೂಕಂಪನದ ಅನುಭವವಾಗಿದ್ದು, ಜನರು ಆತಂಕಗೊಂಡಿದ್ದಾರೆ. ಮೂಲಗಳ ಪ್ರಕಾರ 5.9 ರಷ್ಟು ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದ ಗಡಿಯಲ್ಲೂ ಭೂಕಂಪನ ಉಂಟಾಗಿದೆ. ಆಫ್ಘನ್ನ ಫೈಜಾಬಾದ್ನಲ್ಲಿ ಭೂಕಂಪದ ಕೇಂದ್ರ ಬಿಂದುವಿದ್ದು, ಭೂಮಿಯಿಂದ 200 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.
Earthquake of Magnitude:5.9, Occurred on 05-01-2023, 19:55:51 IST, Lat: 36.39 & Long: 70.66, Depth: 200 Km ,Location: 79km S of Fayzabad, Afghanistan for more information Download the BhooKamp App https://t.co/NNNsRSzym0@Ravi_MoES @Dr_Mishra1966 @ndmaindia @Indiametdept pic.twitter.com/Um0iJGWieT
— National Center for Seismology (@NCS_Earthquake) January 5, 2023
ಇತ್ತೀಚೆಗ 2022 ನ. 9ರಂದು ನೇಪಾಳದ ದೋಟಿ ಜಿಲ್ಲೆಯಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಹಲವು ಮನೆಗಳು ಕುಸಿದಿದ್ದು, ಸುದ್ದಿಸಂಸ್ಥೆಗಳು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ಆರು ಮಂದಿ ಮೃತಪಟ್ಟಿರುವುದು ದೃಢವಾಗಿತ್ತು. ನೇಪಾಳದ ಭೂಕಂಪದ ಉತ್ತರಕಂಪನಗಳು (Strong Tremors) ದೆಹಲಿ, ರಾಷ್ಟ್ರ ರಾಜಧಾನಿ ಪ್ರದೇಶ, ನೋಯ್ಡಾ ಸೇರಿದಂತೆ ಹಲವೆಡೆ ಜನರ ಅನುಭವಕ್ಕೆ ಬಂದಿತ್ತು. ಭೂಕಂಪದಿಂದ ಆಘಾತಕ್ಕೊಳಗಾದ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದರು.
ಇದನ್ನೂ ಓದಿ: Delhi Earthquake: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಭೂಕಂಪ: ರಿಕ್ಟರ್ ಮಾಪನದಲ್ಲಿ 5.4ರಷ್ಟು ತೀವ್ರತೆ ದಾಖಲು
ಸುಮಾರು 10 ಸೆಕೆಂಡ್ಗಳ ಕಾಲ ಭೂಕಂಪದ ಅನುಭವವಾಯಿತು ಎಂದು ವರದಿಯಾಗಿತ್ತು. ಭೂಕಂಪದ ಅನುಭವ ಉಂಟಾದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಜನರು ಭೂಕಂಪನದ ಅನುಭವವನ್ನು ಹಂಚಿಕೊಂಡಿದ್ದಾರೆ. ಅನೇಕರು ಮೀಮ್ಗಳನ್ನು ಸಹ ಹಂಚಿಕೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:35 pm, Thu, 5 January 23