Dharmendra Pradhan: ಕಸ್ತೂರಿರಂಗನ್ ಭಾರತದ ಅನರ್ಘ್ಯ ಮುತ್ತು: ಧರ್ಮೇಂದ್ರ ಪ್ರಧಾನ್

Dharmendra Pradhan tribute to Kasturirangan: ದಿವಂಗತ ಕಸ್ತೂರಿರಂಗನ್ ತನಗೆ ಮೆಂಟರ್​​ಗೀಂತ ಹೆಚ್ಚಿನವರಾಗಿದ್ದು. ದಾರಿ ತೋರಿಸುವ ಬೆಳಕಾಗಿದ್ದರು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕಸ್ತೂರಿರಂಗನ್ ಅವರಿಗೆ ಗೌರವಾರ್ಪಣೆ ಸಲ್ಲಿಸಿದ ಧರ್ಮೇಂದ್ರ ಪ್ರಧಾನ್, ಮಾಜಿ ಇಸ್ರೋ ಅಧ್ಯಕ್ಷರನ್ನು ಭಾರತದ ಅನರ್ಘ್ಯ ಮುತ್ತು ಎಂದು ಬಣ್ಣಿಸಿದ್ದಾರೆ.

Dharmendra Pradhan: ಕಸ್ತೂರಿರಂಗನ್ ಭಾರತದ ಅನರ್ಘ್ಯ ಮುತ್ತು: ಧರ್ಮೇಂದ್ರ ಪ್ರಧಾನ್
ಬೆಂಗಳೂರಿನಲ್ಲಿ ಕಸ್ತೂರಿರಂಗನ್ ಅವರಿಗೆ ಗೌರವಾರ್ಪಣೆ ಸಲ್ಲಿಸಿದ ಧರ್ಮೇಂದ್ರ ಪ್ರಧಾನ್

Updated on: Apr 27, 2025 | 7:20 PM

ಬೆಂಗಳೂರು, ಏಪ್ರಿಲ್ 27: ಮೊನ್ನೆ ಶುಕ್ರವಾರ ಇಹಲೋಕ ತ್ಯಜಿಸಿದ ಮಾಜಿ ಇಸ್ರೋ ಅಧ್ಯಕ್ಷ ಹಾಗೂ ವಿಜ್ಞಾನಿ ಡಾ. ಕೆ ಕಸ್ತೂರಿರಂಗನ್ ಅವರನ್ನು ದೇಶದ ಅಪೂರ್ವ ರತ್ನ (Priceless Gem) ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೊಗಳಿದ್ದಾರೆ. ಬೆಂಗಳೂರಿನಲ್ಲಿ ಕಸ್ತೂರಿರಂಗನ್ (Kasturirangan) ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಧರ್ಮೇಂದ್ರ ಪ್ರಧಾನ್, ಶಿಕ್ಷಣ ಸಚಿವರಾಗಿ ತಾನು ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.

‘ಶಿಕ್ಷಣ ಇಲಾಖೆಯ ಉಸ್ತುವಾರಿಯಾಗಿರುವ ನನಗೆ ಕಸ್ತೂರಿರಂಗನ್ ಜೊತೆ ನಿಕಟವಾಗಿ ಕೆಲಸ ಮಾಡುವ ಸುಸಂದರ್ಭ ಸಿಕ್ಕಿತ್ತು. ಈ ಶಿಕ್ಷಣ ನೀತಿ (ಎನ್​ಇಪಿ) ಜಾರಿಗೆ ತರುವುದು ಅವರಿಗೆ ನೀಡಿದ ಗೌರವವಾಗಿದೆ’ ಎಂದು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಇದನ್ನೂ ಓದಿ
ಸಂಘರ್ಷದ ಹಾದಿಯಲ್ಲಿರುವ ಭಾರತ- ಪಾಕ್​ ಬಗ್ಗೆ ಖ್ಯಾತ ಜ್ಯೋತಿಷಿ ಭವಿಷ್ಯ
ಜಮ್ಮು-ಕಾಶ್ಮೀರದ ಪ್ರಗತಿ ಶತ್ರುಗಳಿಗೆ ಇಷ್ಟವಾಗಲಿಲ್ಲ: ಮೋದಿ
ಪಹಲ್ಗಾಮ್ ದಾಳಿಗೂ ನಮಗೂ ಸಂಬಂಧವಿಲ್ಲವೆಂದು ವರಸೆ ಬದಲಾಯಿಸಿದ ಟಿಆರ್‌ಎಫ್
ಪಾಕಿಸ್ತಾನದ 10 ಸೇನಾಧಿಕಾರಿಗಳು ಸಾವು

‘ಕಸ್ತೂರಿ ರಂಗನ್ ನಮ್ಮ ದೇಶದ ಅನರ್ಘ್ಯ ಮುತ್ತು. ಅವರಿಂದ ಹಲವು ಹೊಸ ಮೌಲ್ಯಗಳು ಸ್ಥಾಪಿತವಾಗಿವೆ. ವಿಜ್ಞಾನ, ಶಿಕ್ಷಣ ಮತ್ತು ಸಾಮಾಜಿಕ ಜೀವನದಲ್ಲಿ ಅವರು ಮೇರು ಎತ್ತರಕ್ಕೆ ಬೆಳೆದಿದ್ದಾರೆ’ ಎಂದು ಸಚಿವರು ಗೌರವ ಅರ್ಪಿಸಿದ್ದಾರೆ.

ಇದನ್ನೂ ಓದಿ: ಉಗ್ರ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ಸಿಗುತ್ತೆ, ಉಗ್ರರಿಗೆ ಕಠಿಣ ಶಿಕ್ಷೆ ಕೊಟ್ಟೇ ಕೊಡುತ್ತೇವೆ: ಮೋದಿ

ಇಸ್ರೋದ ಮಾಜಿ ಛೇರ್ಮನ್ ಆಗಿದ್ದ ಡಾ. ಕೆ ಕಸ್ತೂರಿರಂಗನ್ ಮೊನ್ನೆ (ಏ. 25) ಬೆಂಗಳೂರಿನಲ್ಲಿ ಸ್ವರ್ಗಸ್ಥರಾಗಿದ್ದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕೇರಳ ಮೂಲದವರಾದರೂ ಕರ್ನಾಟಕದ ಜೊತೆ ಅವರಿಗೆ ಆಪ್ಯಾಯಮಾನ ಸಂಬಂಧ ಇತ್ತು. 1994ರಿಂದ 2003ರವರೆಗೆ 9 ವರ್ಷ ಕಾಲ ಅವರು ಇಸ್ರೋದ ಚುಕ್ಕಾಣಿ ಹಿಡಿದು ಅನೇಕ ಸಾಧನೆಗಳ ಹರಿಕಾರ ಎನಿಸಿದ್ದರು.

ಸರ್ಕಾರ ಇತ್ತೀಚೆಗೆ ರೂಪಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಸ್ತೂರಿ ರಂಗನ್ ಪಾತ್ರ ಬಹಳ ಇದೆ. ಶಿಕ್ಷಣ ನೀತಿ ರೂಪಿಸಲು ರಚಿಸಲಾಗಿದ್ದ ಸಮಿತಿಗೆ ಅವರೇ ಛೇರ್ಮನ್ ಆಗಿದ್ದರು. ಹೀಗಾಗಿ, ಧರ್ಮೇಂದ್ರ ಪ್ರಧಾನ್ ಅವರು ಕಸ್ತೂರಿರಂಗನ್ ಜೊತೆ ನಿಕಟವಾಗಿ ಒಡನಾಟ ಹೊಂದಿದ್ದರು.

ದಾರಿ ತೋರಿಸುವ ಬೆಳಕಾಗಿದ್ದರು: ಭಾವುಕರಾದ ಪ್ರಧಾನ್

ಮೊನ್ನೆ ಕಸ್ತೂರಿರಂಗನ್ ನಿಧನರಾದಾಗ ಧರ್ಮೇಂದ್ರ ಪ್ರಧಾನ್ ತಮ್ಮ ಎಕ್ಸ್ ಪೋಸ್ಟ್​​ನಲ್ಲಿ ಭಾವುಕವಾಗಿ ಬರೆದಿದ್ದರು. ತಮಗೆ ಹೇಗೆ ಅವರು ದಾರಿ ತೋರಿಸುವ ಬೆಳಕಾಗಿದ್ದರು ಎಂಬುದನ್ನು ಹೇಳಿದ್ದರು.

ಇದನ್ನೂ ಓದಿ: ಸಂಘರ್ಷದ ಹಾದಿಯಲ್ಲಿರುವ ಭಾರತ- ಪಾಕಿಸ್ತಾನದ ಬಗ್ಗೆ ಖ್ಯಾತ ಜ್ಯೋತಿಷಿ ಭವಿಷ್ಯ ವಿಶ್ಲೇಷಣೆ

‘ನನಗೆ ಅವರು ಮೆಂಟರ್​​ಗಿಂತ ಹೆಚ್ಚಿನವರಾಗಿದ್ದರು. ದಾರಿ ತೋರಿಸುವ ಬೆಳಕಾಗಿದ್ದರು. ವರ್ಷಗಳ ಕಾಲ ಅವರ ಅಕ್ಕರೆ, ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ’ ಎಂದು ಧರ್ಮೇಂದ್ರ ಪ್ರಧಾನ್ ತಮ್ಮ ಎಕ್ಸ್ ಅಕೌಂಟ್​​ನಲ್ಲಿ ಪೋಸ್ಟ್ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:11 pm, Sun, 27 April 25