ಕೇರಳ: ಬಾಡಿಗೆ ಮನೆಯೊಂದರಲ್ಲಿ ವ್ಯಕ್ತಿಯ ಅರೆಬೆಂದ ಶವ ಪತ್ತೆ
ಕೇರಳದ ತ್ರಿಶೂರ್ನ ಬಾಡಿಗೆ ಮನೆಯೊಂದರಲ್ಲಿ ವ್ಯಕ್ತಿಯ ಅರೆಬೆಂದ ಶವ ಪತ್ತೆಯಾಗಿದೆ. ಕೊಲೆ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಮೃತ ವ್ಯಕ್ತಿಯ ಗುರುತು ಅಧಿಕೃತವಾಗಿ ಇನ್ನೂ ಪತ್ತೆಯಾಗಿಲ್ಲ. ಆ ಕೋಣೆಯಲ್ಲಿ ಸನ್ನಿ ಎಂಬ ವ್ಯಕ್ತಿ ವಾಸವಿದ್ದ ಎನ್ನುವ ಕುರಿತು ಮಾಹಿತಿ ಲಭ್ಯವಾಗಿದೆ. ಆದರೆ ಶವ ಆತನದ್ದೇ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಈತ ಬೆಳಗ್ಗೆಯಿಂದ ಕಾಣಿಸಿರಲಿಲ್ಲ ಎಂದು ತಿಳಿದುಬಂದಿದೆ.

ತ್ರಿಶೂರ್, ಅಕ್ಟೋಬರ್ 06: ಕೇರಳದ ತ್ರಿಶೂರ್ನ ಬಾಡಿಗೆ ಮನೆಯೊಂದರಲ್ಲಿ ವ್ಯಕ್ತಿಯ ಅರೆಬೆಂದ ಶವ ಪತ್ತೆಯಾಗಿದೆ. ಕೊಲೆ(Murder) ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಮೃತ ವ್ಯಕ್ತಿಯ ಗುರುತು ಅಧಿಕೃತವಾಗಿ ಇನ್ನೂ ಪತ್ತೆಯಾಗಿಲ್ಲ. ಆ ಕೋಣೆಯಲ್ಲಿ ಸನ್ನಿ ಎಂಬ ವ್ಯಕ್ತಿ ವಾಸವಿದ್ದ ಎನ್ನುವ ಕುರಿತು ಮಾಹಿತಿ ಲಭ್ಯವಾಗಿದೆ. ಆದರೆ ಶವ ಆತನದ್ದೇ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಸನ್ನಿ ಬೆಳಗ್ಗೆಯಿಂದ ಕಾಣಿಸಿರಲಿಲ್ಲ ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸನ್ನಿ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಈ ಹಿಂದೆ ಕೊಲೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೊಠಡಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಕಟ್ಟಡದ ನಿವಾಸಿಗಳು ಕುನ್ನಂಕುಲಂ ಪೊಲೀಸರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು.
ದೇಹ ಆಗಲೇ ಭಾಗಶಃ ಸುಟ್ಟಿತ್ತು. ಇದು ಮೇಲ್ನೋಟಕ್ಕೆ ಕೊಲೆ ಪ್ರಕರಣದಂತೆಯೇ ಕಾಣುತ್ತಿದೆ, ಆದರೆ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯ ನಂತರವೇ ಸತ್ಯ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆಯ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬೆಂಕಿಯ ಕಾರಣ ಮತ್ತು ಇತರ ಸಂದರ್ಭಗಳನ್ನು ನಿರ್ಧರಿಸಲು ವಿಧಿವಿಜ್ಞಾನ ತಜ್ಞರು ಕೊಠಡಿಯನ್ನು ಪರಿಶೀಲಿಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: Bidar: ಮನ್ನಾಖೇಳಿಯಲ್ಲಿ ಚಾಲಕನ ಬರ್ಬರ ಕೊಲೆ; ಕಾರಣ ನಿಗೂಢ
ಮತ್ತೊಂದು ಘಟನೆ ಕೇರಳದಲ್ಲಿ ಹೆಂಡತಿಯನ್ನು ಕೊಂದು ಕೊಳಕ್ಕೆ ಶವ ಎಸೆದ ಗಂಡ ತನ್ನ ವಿವಾಹೇತರ ಸಂಬಂಧವನ್ನು ಪ್ರಶ್ನಿಸಿದ ಕಾರಣಕ್ಕೆ ಪತ್ನಿಯನ್ನು ಕೊಂದು ಆಕೆಯ ಶವವನ್ನು ಕೊಳಕ್ಕೆ ಎಸೆದ ಆರೋಪದ ಮೇಲೆ ಕೇರಳದ (Kerala) 59 ವರ್ಷದ ವ್ಯಕ್ತಿಯೊಬ್ಬನನ್ನು ಇಂದು ಬಂಧಿಸಲಾಗಿದೆ. ಸೆಪ್ಟೆಂಬರ್ 26ರಂದು ಕೇರಳದ ಕುರವಿಲಂಗಡ ಬಳಿ ಈ ಘಟನೆ ನಡೆದಿದೆ.
ಸ್ಯಾಮ್ ಜಾರ್ಜ್ ಸಂಜೆ 6 ಗಂಟೆ ಸುಮಾರಿಗೆ ಮನೆಗೆ ನುಗ್ಗಿ, ಪತ್ನಿಯ ಕತ್ತು ಹಿಸುಕಿ ಕೊಂದು, ಆಕೆಯ ಶವವನ್ನು ಕಾರಿನ ಬೂಟಿನಲ್ಲಿ ಇರಿಸಿಕೊಂಡು, ನಂತರ ಇಡುಕ್ಕಿ ಜಿಲ್ಲೆಯ ಉಡುಂಬನ್ನೂರ್ ಬಳಿಯ ಕೊಳದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಜ್ ಕಳೆದ 15 ವರ್ಷಗಳಿಂದ ತನ್ನ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದನು. ಎರಡು ಅಂತಸ್ತಿನ ಮನೆಯಲ್ಲಿ ಮೇಲೆ ಆತ ವಾಸವಾಗಿದ್ದರೆ ಕೆಳಗಿನ ಮಹಡಿಯಲ್ಲಿ ಆತನ ಹೆಂಡತಿ ವಾಸವಾಗಿದ್ದಳು. ಆತ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಅವನ ಪತ್ನಿ ಜೆಸ್ಸಿ (49) ತಮ್ಮ ಮೂವರು ಮಕ್ಕಳೊಂದಿಗೆ ಇದ್ದರು. ಮಕ್ಕಳು ವಿದೇಶಕ್ಕೆ ತೆರಳಿದ ನಂತರ, ಜೆಸ್ಸಿ ಕಳೆದ 6 ತಿಂಗಳಿನಿಂದ ಒಂಟಿಯಾಗಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




