AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಂಡು ತಾಗಿದ್ದ ಮಹಿಳೆ ಬಳಿ ನೀವು ಸುರಕ್ಷಿತವಾಗಿದ್ದೀರಲ್ಲವೇ ಎನ್ನುತ್ತಿದ್ದಂತೆ ವ್ಯಕ್ತಿ ತಲೆಗೆ ಬಿತ್ತು ಗುಂಡು

ಗುಂಡು ತಾಗಿದ್ದ ಮಹಿಳೆಯ ಆರೋಗ್ಯ ವಿಚಾರಿಸಲು ಹೋಗಿ ಭಾರತ ಮೂಲದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಮಾಟೆಲ್​ನ ಪಾರ್ಕಿಂಗ್ ಸ್ಥಳದಲ್ಲಿ ಯುಜೀನ್ ಹಾಗೂ ಓರ್ವ ಮಹಿಳೆ ನಡುವೆ ವಾಗ್ವಾದ ನಡೆದಿತ್ತು. ಆ ಸಂದರ್ಭದಲ್ಲಿ ಯುಜೀನ್ ಮಹಿಳೆಗೆ ಗುಂಡು ಹಾರಿಸಿದ್ದ. ಇದನ್ನು ಕೇಳಿ ಓಡಿ ಬಂದ ರಾಕೇಶ್ ಮಹಿಳೆ ಬಳಿ ಓಡಿ ಹೋಗಿ ನೀವು ಸುರಕ್ಷಿತವಾಗಿದ್ದೀರಲ್ಲವೇ ಎಂದು ವಿಚಾರಿಸಿದ್ದರು. ಅದೇ ಸಮಯದಲ್ಲಿ ಯುಜೀನ್ ರಾಕೇಶ್ ತಲೆಗೆ ಗುಂಡು ಹಾರಿಸಿದ್ದಾನೆ.

ಗುಂಡು ತಾಗಿದ್ದ ಮಹಿಳೆ ಬಳಿ ನೀವು ಸುರಕ್ಷಿತವಾಗಿದ್ದೀರಲ್ಲವೇ ಎನ್ನುತ್ತಿದ್ದಂತೆ ವ್ಯಕ್ತಿ ತಲೆಗೆ ಬಿತ್ತು ಗುಂಡು
ಪೊಲೀಸ್
ನಯನಾ ರಾಜೀವ್
|

Updated on: Oct 06, 2025 | 9:48 AM

Share

ವಾಷಿಂಗ್ಟನ್ ಅಕ್ಟೋಬರ್ 06: ಅಮೆರಿಕದ ಪೆನ್ಸಿಲ್ವೇನಿಯಾದ ಪಿಟ್ಸ್​​ಬರ್ಗ್​​ನಲ್ಲಿ ಭಾರತ ಮೂಲದ ವ್ಯಕ್ತಿಯನ್ನು ಗುಂಡು ಹಾರಿಸಿ ಹತ್ಯೆ(Murder) ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೃತರನ್ನು 51 ವರ್ಷದ ರಾಕೇಶ್ ಎಂದು ಗುರುತಿಸಲಾಗಿದೆ. ಅವರು ರಾಬಿನ್ಸನ್ ಟೌನ್‌ಶಿಪ್‌ನಲ್ಲಿ ಪಿಟ್ಸ್‌ಬರ್ಗ್ ಮೋಟೆಲ್ ನಡೆಸುತ್ತಿದ್ದರು. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, 37 ವರ್ಷದ ಯುಜೀನ್ ವೆಸ್ಟ್​ ರಾಕೇಶ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ.

ಮಾಟೆಲ್​ನ ಪಾರ್ಕಿಂಗ್ ಸ್ಥಳದಲ್ಲಿ ಯುಜೀನ್ ಹಾಗೂ ಓರ್ವ ಮಹಿಳೆ ನಡುವೆ ವಾಗ್ವಾದ ನಡೆದಿತ್ತು. ಆ ಸಂದರ್ಭದಲ್ಲಿ ಯುಜೀನ್ ಮಹಿಳೆಗೆ ಗುಂಡು ಹಾರಿಸಿದ್ದ. ಇದನ್ನು ಕೇಳಿ ಓಡಿ ಬಂದ ರಾಕೇಶ್ ಮಹಿಳೆ ಬಳಿ ಓಡಿ ಹೋಗಿ ನೀವು ಸುರಕ್ಷಿತವಾಗಿದ್ದೀರಲ್ಲವೇ ಎಂದು ವಿಚಾರಿಸಿದ್ದರು. ಅದೇ ಸಮಯದಲ್ಲಿ ಯುಜೀನ್ ರಾಕೇಶ್ ತಲೆಗೆ ಗುಂಡು ಹಾರಿಸಿದ್ದಾನೆ.

ಶಂಕಿತ ವ್ಯಕ್ತಿ ಪಿಟ್ಸ್‌ಬರ್ಗ್‌ನ ಮೋಟೆಲ್‌ನಲ್ಲಿ ಮಹಿಳೆ ಮತ್ತು ಮಗುವಿನೊಂದಿಗೆ ಸುಮಾರು ಎರಡು ವಾರಗಳಿಂದ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಮಹಿಳೆ ಕೆರ್ನಿಕ್ ಟೈರ್ ಮತ್ತು ಆಟೋ ಸೇವಾ ಕೇಂದ್ರವನ್ನು ತಲುಪುವಲ್ಲಿ ಯಶಸ್ವಿಯಾದರು, ಅಲ್ಲಿ ಪೊಲೀಸರು ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮಹಿಳೆಯೊಂದಿಗೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಗುವಿಗೆ ಯಾವುದೇ ಗಾಯಗಳಾಗಿಲ್ಲ. ಗುಂಡಿನ ದಾಳಿಯ ಸಮಯದಲ್ಲಿ ರಾಕೇಶ್ ಎಹಾಗ್ಬನ್ ಮೋಟೆಲ್ ಹೊರಗೆ ಬಂದಿದ್ದರು.ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಯುಜೀನ್ ವೆಸ್ಟ್ ಹತ್ತಿರದಲ್ಲಿ ನಿಲ್ಲಿಸಿದ್ದ ಯು-ಹಾಲ್ ವ್ಯಾನ್ ಕಡೆಗೆ ನಡೆದು ಪರಾರಿಯಾಗಿದ್ದಾನೆ. ಯುಜೀನ್ ವೆಸ್ಟ್ ವಿರುದ್ಧ ಕೊಲೆ, ಕೊಲೆಯತ್ನ ಪ್ರಕರಣವನ್ನು ದಾಖಲಿಸಲಾಗಿದೆ. ಗುಂಡಿನ ದಾಳಿಯ ನಂತರ, ಪೊಲೀಸರು ಗುಂಡು ಹಾರಿಸಿದ ವ್ಯಕ್ತಿಗಾಗಿ ಹುಡುಕಾಟ ನಡೆಸಿದರು ಮತ್ತು ಪಿಟ್ಸ್‌ಬರ್ಗ್‌ನ ಈಸ್ಟ್ ಹಿಲ್ಸ್ ಪ್ರದೇಶದಲ್ಲಿ ಆತನನ್ನು ಪತ್ತೆ ಮಾಡಿದರು. ಪೊಲೀಸರು ಆತನನ್ನು ಬಂಧಿಸಲು ಬಂದಾಗ, ಆತ ಅಧಿಕಾರಿಗಳೊಂದಿಗೆ ಗುಂಡಿನ ಚಕಮಕಿ ನಡೆಸಿದ್ದಾನೆ.

ಮತ್ತಷ್ಟು ಓದಿ: ಅಮೆರಿಕದಲ್ಲಿ ತೆಲಂಗಾಣದ 28 ವರ್ಷದ ವಿದ್ಯಾರ್ಥಿಗೆ ಶೂಟ್ ಮಾಡಿ ಹತ್ಯೆ

ಇದರಲ್ಲಿ ಒಬ್ಬ ಅಧಿಕಾರಿಗೂ ಗುಂಡು ಹಾರಿಸಲಾಯಿತು. ನಂತರ ಪೊಲೀಸರು ಗುಂಡು ಹಾರಿಸಿ ಯುಜೀನ್ ವೆಸ್ಟ್ ಅವರನ್ನು ಬಂಧಿಸಿದ್ದಾರೆ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಷ್ಟೆಲ್ಲಾ ಘಟನೆಗಳು ನಡೆದವು. ಆದರೆ ಈ ಘಟನೆಗೆ ಸಂಬಂಧವಿಲ್ಲದ ರಾಕೇಶ್ ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬ
ಮಹರಾಜ ಲೀಗ್​​ನಲ್ಲಿ ಅನ್​​ಸೋಲ್ಡ್ ಆದ ಕೆಎಲ್ ರಾಹುಲ್; ಕಾರಣ ಇಲ್ಲಿದೆ
ಮಹರಾಜ ಲೀಗ್​​ನಲ್ಲಿ ಅನ್​​ಸೋಲ್ಡ್ ಆದ ಕೆಎಲ್ ರಾಹುಲ್; ಕಾರಣ ಇಲ್ಲಿದೆ
ನಾನು ಸಚಿವನಾಗಿ ಚಾರ್ಜ್ ತಗೊಳ್ಳಲ್ಲ: ಕಾಂಗ್ರೆಸ್‌ಗೆ ಸಚಿವ ಮುನಿಯಪ್ಪ ಶಾಕ್
ನಾನು ಸಚಿವನಾಗಿ ಚಾರ್ಜ್ ತಗೊಳ್ಳಲ್ಲ: ಕಾಂಗ್ರೆಸ್‌ಗೆ ಸಚಿವ ಮುನಿಯಪ್ಪ ಶಾಕ್
ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಬೆಂಬಲಿಗರಿಂದ ಭಾರಿ ಪ್ರತಿಭಟನೆ
ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಬೆಂಬಲಿಗರಿಂದ ಭಾರಿ ಪ್ರತಿಭಟನೆ
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ
Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ
‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ
‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ
ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು!
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು!
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?