ಕೇರಳ ಓಣಂ ಬಂಪರ್ ಲಾಟರಿ ಬಹುಮಾನ ಮೊತ್ತ ಏರಿಕೆ; ಮೊದಲ ಬಹುಮಾನ ₹25 ಕೋಟಿ, ಟಿಕೆಟ್ ಬೆಲೆ ₹500

ವಿಶೇಷವಾಗಿ ಓಣಂ ಬಂಪರ್ ಟಿಕೆಟ್ ಭರ್ಜರಿ ಮಾರಾಟವಾಗುತ್ತದೆ ಎಂದು ಲಾಟರಿ ಇಲಾಖೆಯ ಮೂಲಗಳು ಹೇಳಿವೆ. ಏಜೆಂಟ್ ಕಮಿಷನ್ ಮತ್ತು ತೆರಿಗೆ ಕಡಿತ ಮಾಡಿದ ನಂತರ ಲಾಟರಿ ಗೆದ್ದ ಅದೃಷ್ಟವಂತರಿಗೆ ₹15.75 ಕೋಟಿ ಸಿಗುತ್ತದೆ.

ಕೇರಳ ಓಣಂ ಬಂಪರ್ ಲಾಟರಿ ಬಹುಮಾನ ಮೊತ್ತ ಏರಿಕೆ; ಮೊದಲ ಬಹುಮಾನ ₹25 ಕೋಟಿ, ಟಿಕೆಟ್ ಬೆಲೆ ₹500
ಓಣಂ ಬಂಪರ್ ಲಾಟರಿ ಬಿಡುಗಡೆ
TV9kannada Web Team

| Edited By: Rashmi Kallakatta

Jul 15, 2022 | 8:13 PM

ಕೇರಳದಲ್ಲಿ (Kerala)  ಓಣಂ ಹಬ್ಬದ (Onam) ಆಚರಣೆ  ಅಂಗವಾಗಿ ಜುಲೈ 18ರಂದು ಓಣಂ ಬಂಪರ್ ಲಾಟರಿ (Onam bumper lottery) ಮಾರಾಟ ಆರಂಭವಾಗಲಿದೆ. ಕೇರಳ ರಾಜ್ಯ ಲಾಟರಿಗಳ ನಿರ್ದೇಶನಾಲಯದ ಬಹು ಜನಪ್ರಿಯ ಲಾಟರಿ ಆಗಿರುವ ಓಣಂ ಬಂಪರ್ ಬಹುಮಾನ ಮೊತ್ತನ್ನು ಈಬಾರಿ ದುಪಟ್ಟು ಮಾಡಲಿದೆ. ಈ ಹಿಂದೆ ಓಣಂ ಬಂಪರ್ ಲಾಟರಿ ಮೊದಲ ಬಹುಮಾನದ ಮೊತ್ತ ₹12 ಕೋಟಿ ಆಗಿತ್ತು. ಈ ಬಾರಿ ಬಹುಮಾನ ಮೊತ್ತ ₹25 ಕೋಟಿ ಆಗಿದೆ. ಎರಡನೇ ಬಹುಮಾನ ₹5 ಕೋಟಿ, ಮೂರನೇ ಬಹುಮಾನ 10 ಮಂದಿಗೆ ನೀಡಲಾಗುತ್ತಿದ್ದು ಪ್ರತಿಯೊಬ್ಬರಿಗೂ ₹1 ಕೋಟಿ ಬಹುಮಾನವಾಗಿ ಸಿಗಲಿದೆ.   ಬಹುಮಾನದ ಮೊತ್ತ ಏರಿಕೆ ಮಾಡುವುದರ ಜತೆಗೆ ಲಾಟರಿ ಬೆಲೆಯೂ ಏರಿಕೆ ಆಗಿದೆ. ಕಳೆದ ಬಾರಿಗಿಂತ ಈ ಬಾರಿ 200 ಏರಿಕೆ ಮಾಡಿದ್ದು ಈ ವರ್ಷದ ಟಿಕೆಟ್ ಬೆಲೆ ₹500 ಆಗಿದೆ. ಆದಾಗ್ಯೂ, ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಮಾರಾಟ ಮಾಡಲು ಸರ್ಕಾರ ಬಯಸಿದೆ. ನಿಯಮಗಳ ಪ್ರಕಾರ ಇಲಾಖೆ 90 ಲಕ್ಷ ಪೇಪರ್ ಟಿಕೆಟ್ ಮುದ್ರಿಸಬಹುದು. ಕಳೆದ ವರ್ಷ ಮುದ್ರಣ ಮಾಡಿದ ಎಲ್ಲ 54 ಲಕ್ಷ ಟಿಕೆಟ್ ಭರ್ಜರಿ ಮಾರಾಟವಾಗಿದೆ. ಮಾರಾಟಕ್ಕೆ ಅನುಗುಣವಾಗಿ ಟಿಕೆಟ್ ಮುದ್ರಿಸಲಾಗುತ್ತಿದೆ. ಮೊದಲ ಹಂತದಲ್ಲಿ ಮುದ್ರಿಸಿದ ಟಿಕೆಟ್ ಯಾವ ರೀತಿ ಮಾರಾಟವಾಗುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ಹಂತದಲ್ಲಿ ಟಿಕೆಟ್ ಮುದ್ರಿಸಲಾಗುತ್ತದೆ. ಬೇಡಿಕೆ ಹೆಚ್ಚಿದ್ದರೆ ನಾವು 90 ಲಕ್ಷ ಟಿಕೆಟ್ ಮುದ್ರಿಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟಿಕೆಟ್ ಬೆಲೆ ಏರಿಕೆ ಮಾಡಿದ್ದರೂ ಬಹುಮಾನದ ಮೊತ್ತ ಏರಿಕೆ ಮಾಡಿರುವುದರಿಂದ ಟಿಕೆಟ್​​ಗೆ ಬೇಡಿಕೆ ಹೆಚ್ಚಾಗಲಿದೆ. ಬಹುಮಾನದ ಮೊತ್ತ ಜಾಸ್ತಿಯಿದ್ದರೆ ಜನರು ಎಷ್ಟು ಹಣ ಕೊಟ್ಟು ಕೂಡಾ ಟಿಕೆಟ್ ಖರೀದಿಸುತ್ತಾರೆ ಎಂಬುದು ಹಿಂದಿನ ಅನುಭವಗಳು ನಮಗೆ ಕಲಿಸಿವೆ. ವಿಶೇಷವಾಗಿ ಓಣಂ ಬಂಪರ್ ಟಿಕೆಟ್ ಭರ್ಜರಿ ಮಾರಾಟವಾಗುತ್ತದೆ ಎಂದು ಲಾಟರಿ ಇಲಾಖೆಯ ಮೂಲಗಳು ಹೇಳಿವೆ. ಏಜೆಂಟ್ ಕಮಿಷನ್ ಮತ್ತು ತೆರಿಗೆ ಕಡಿತ ಮಾಡಿದ ನಂತರ ಲಾಟರಿ ಗೆದ್ದ ಅದೃಷ್ಟವಂತರಿಗೆ ₹15.75 ಕೋಟಿ ಸಿಗುತ್ತದೆ. ಟಿಕೆಟ್ ಮಾರಿದ ಏಜೆಂಟ್​ಗೆ ₹2.5 ಕೋಟಿ ಕಮಿಷನ್ ಸಿಗಲಿದೆ. ಓಣಂ ಬಂಪರ್ ಬಹುಮಾನಕ್ಕಾಗಿ ಮಾತ್ರ ಕೇರಳ ಸರ್ಕಾರ ₹126 ಕೋಟಿ ಖರ್ಚು ಮಾಡುತ್ತದೆ.

ಬಹುಮಾನ ಮೊತ್ತ ಏರಿಕೆ ಮಾಡಿರುವುದರಿಂದ ಹತ್ತಿರದ ರಾಜ್ಯಗಳ ಜನರೂ ಕೂಡಾ ಹೆಚ್ಚಿಗೆ ಟಿಕೆಟ್ ಖರೀದಿ ಮಾಡುವ ನಿರೀಕ್ಷೆ ಇದೆ. ಕಳೆದ ವರ್ಷ ಮೇ ತಿಂಗಳಲ್ಲಿ ವಿಷು ಬಂಪರ್ ಬಹುಮಾನ ಸಿಕ್ಕಿದ್ದು ತಮಿಳುನಾಡಿನವರಿಗೆ. ಅವರಿಬ್ಬರು ತಿರುವನಂತಪುರಂ ವಿಮಾನ ನಿಲ್ದಾಣದಿಂದ ಟಿಕೆಟ್ ಖರೀದಿಸಿದ್ದರು. ಟಿಕೆಟ್​ನ್ನು ಯಾವ ರಾಜ್ಯದವರು ಬೇಕಾದರೂ ಖರೀದಿಸಬಹುದು. ನಿಯಮ ಏನೆಂದರೆ ಅವರು ಕೇರಳದಿಂದ ಮಾತ್ರ ಟಿಕೆಟ್​ಗಳನ್ನು ಖರೀದಿಸಿರಬೇಕು ಎಂದು ಅಧಿಕಾರಿ ಹೇಳಿದ್ದಾರೆ.

ಬೇಡಿಕೆ ಹೆಚ್ಚುತ್ತಿದ್ದಂತೆ ರಾಜ್ಯದಲ್ಲಿ ನಕಲಿ ಲಾಟರಿಗಳ ಮಾರಾಟವೂ ಹೆಚ್ಚಿದೆ. ಜನರು ಟಿಕೆಚ್ ಖರೀದಿಸುವಾಗ ಎಚ್ಚರಿಕೆಯಿಂದರಬೇಕು. ಕರೆನ್ಸಿ ನೋಟಿನಂತೆ ಲಾಟರಿ ಟಿಕೆಟ್ ನಲ್ಲೂ 10 ಸುರಕ್ಷಾ ವೈಶಿಷ್ಟ್ಯಗಳಿವೆ ಎಂದು ಅವರು ಹೇಳಿದ್ದಾರೆ.

ಕೇರಳ ಲಾಟರಿಯ ಇತಿಹಾಸ

ಕೇರಳ ರಾಜ್ಯ ತಮ್ಮ ಆದಾಯ ಹೆಚ್ಚಿಸುವುದಕ್ಕಾಗಿ 1967ರಲ್ಲಿ ಲಾಟರಿ ಇಲಾಖೆಯನ್ನು ಸ್ಥಾಪಿಸಿತು. ಆಗ ರಾಜ್ಯದ ಹಣಕಾಸು ಸಚಿವರಾಗಿದ್ದದ್ದು ಪಿ.ಕೆ ಕುಂಞು ಸಾಹೀಬ್. ಆದಾಯದ ಮೂಲದ ಜತೆಗೆ ಬಡವರು ಮತ್ತು ಅಂಗವಿಕಲರಿಗೆ ಆದಾಯದ ಮೂಲ ಎಂಬುದು ಈ ಯೋಜನೆಯ ಉದ್ದೇಶವಾಗಿತ್ತು. ಮೊದಲಿಗೆ 1 ರೂ ಟಿಕೆಟ್ ಬೆಲೆಯ ಲಾಟರಿ ಮಾರಿದ್ದು, 1968 ಜನವರಿ 26ರಂದು ಲಾಟರಿ ಡ್ರಾ ಆಗಿತ್ತು. ಆಗ ಮೊದಲ ಬಹುಮಾನ ಇದ್ದದ್ದು ₹50,000. ಇದಾದ ನಂತರ ಕೇರಳದಂತೆಯೇ ಇತರ ರಾಜ್ಯಗಳೂ ತಮ್ಮ ರಾಜ್ಯಗಳಲ್ಲಿ ಲಾಟರಿ ಆರಂಭಿಸಿದವು. 2019-20ರಲ್ಲಿ ಲಾಟರಿ ಮಾರಾಟದಿಂದ ರಾಜ್ಯದ ವಹಿವಾಟು ₹9972.97 ಕೋಟಿ. ಇದರಲ್ಲಿ ಲಾಭ ₹1763.69 ಕೋಟಿ. ಆದಾಗ್ಯೂ ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಆದಾಯ ಇಳಿಕೆ ಆಗಿದೆ. 2020-21ರಲ್ಲಿ ವಹಿವಾಟು ₹4911.52ಕೋಟಿ ಮತ್ತು 2021-22ರಲ್ಲಿ ವಹಿವಾಟು ₹7145.21 ಕೋಟಿ ಆಗಿದೆ. 2020-21ರಲ್ಲಿ ಲಾಭ ₹472.70 ಕೋಟಿ, 2021-22ರಲ್ಲಿ ಲಾಭ ₹559.63 ಆಗಿದೆ. ವರ್ಷದಲ್ಲಿ 6 ಬಂಪರ್ ಲಾಟರಿಗಳ ಜತೆಗೆ ವೀಕ್ಲಿ (ವಾರಕ್ಕೊಂದು) ಬಹುಮಾನ ನೀಡುವ ಮತ್ತು ತಿಂಗಳಲ್ಲೊಂದು ಬಹುಮಾನ ನೀಡುವ ಲಾಟರಿ ಮಾರಾಟ ಮಾಡುತ್ತದೆ.

ಕ್ಯಾನ್ಸರ್​​ನಿಂದ ಬಳಲುತ್ತಿರುವ, ಕಿಡ್ನಿ, ಹೃದಯ ಮತ್ತು ಮಾರಕ ರೋಗಳಿಂದ ಬಳಲುತ್ತಿರುವ ಬಡವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಕೇರಳ ಸರ್ಕಾರ 2012ರಲ್ಲಿ ಕಾರುಣ್ಯ ಬೆನೆವೊಲೆಂಟ್ ಫಂಡ್ ಆರಂಭಿಸಿತ್ತು. ಈ ಫಂಡ್ ಗೆ ಹಣ ಬರುವುದು ಕಾರುಣ್ಯ ಮತ್ತು ಕಾರುಣ್ಯ ಪ್ಲಸ್ ಲಾಟರಿ ಮೂಲಕ. ಲಾಟರಿ ಮಾರುವವರು ಹೆಚ್ಚಿನವರು ಅಂಗವಿಕಲರು. ಇದು ಅವರಿಗೆ ಆದಾಯದ ಮೂಲ. ಇದು ಈ ಯೋಜನೆಯ ಉದ್ದೇಶವನ್ನು ತೋರಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ. ಒಟ್ಟು ಆದಾಯದ ಶೇ 1ರಷ್ಟು ಹಣವನ್ನು ಲಾಟರಿ ಏಜೆಂಟ್ ಮತ್ತು ಮಾರಾಟಗಾರರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗುತ್ತದೆ. ಲಾಟರಿ ಏಜೆಂಟರು ಮತ್ತು ಮಾರಾಟಗಾರರು ತಿಂಗಳಿಗೆ 10000 ಟಿಕೆಟ್ ಖರೀದಿಸುವ ಮೂಲಕ ಅಥವಾ ತ್ರೈಮಾಸಿಕದಲ್ಲಿ 30000 ಮೊತ್ತದ ಟಿಕೆಟ್ ಖರೀದಿಸುವ ಮೂಲಕ ಲಾಟರಿ ಏಜೆಂಟ್ ಮತ್ತು ಮಾರಾಟಗಾರರ ಕಲ್ಯಾ ಣ ನಿಧಿ ಮಂಡಳಿ ಸದಸ್ಯತ್ವ ಪಡೆಯುತ್ತಾರೆ. ಏತನ್ಮಧ್ಯೆ, ಟಿಕೆಟ್ ಖರೀದಿಸುವವರು ಸಮಾಜದಲ್ಲಿನ ಸಾಮಾನ್ಯ, ಕೆಳವರ್ಗದಲ್ಲಿನ ಜನರಾಗಿರುವುದರಿಂದ ಟಿಕೆಟ್ ಬೆಲೆ 500 ಆಗಿ ಏರಿಸಿದ್ದಕ್ಕೆ ಟೀಕೆಗಳೂ ಕೇಳಿ ಬಂದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada