ಕೌಟುಂಬಿಕ ದೌರ್ಜನ್ಯದ ಬಗ್ಗೆ ದೂರು ಆಲಿಸುವ ವೇಳೆ ಒರಟಾಗಿ ವರ್ತಿಸಿ ಟೀಕೆಗೊಳಗಾಗಿದ್ದ ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ರಾಜೀನಾಮೆ

MC Josephine Resigned: 2017 ರಿಂದ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಜೋಸೆಫೈನ್ ಅವರಲ್ಲಿ ಶುಕ್ರವಾರ ತಿರುವನಂತಪುರಂನ ಎಕೆಜಿ ಭವನದಲ್ಲಿ ನಡೆದ ಸಿಪಿಎಂ ರಾಜ್ಯ ಸಚಿವಾಲಯದ ಸಭೆಯಲ್ಲಿ ವಿವರಣೆ ಕೇಳಲಾಯಿತು.

ಕೌಟುಂಬಿಕ ದೌರ್ಜನ್ಯದ ಬಗ್ಗೆ ದೂರು ಆಲಿಸುವ ವೇಳೆ ಒರಟಾಗಿ ವರ್ತಿಸಿ ಟೀಕೆಗೊಳಗಾಗಿದ್ದ ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ರಾಜೀನಾಮೆ
ಜೋಸೆಫೈನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 25, 2021 | 5:43 PM

ಕೊಚ್ಚಿ: ಕೇರಳ ಮಹಿಳಾ ಆಯೋಗದ ಅಧ್ಯಕ್ಷ ಎಂ.ಸಿ.ಜೋಸೆಫೈನ್ ಸುದ್ದಿವಾಹಿನಿಯ ಲೈವ್ ಫೋನ್ ಇನ್ ಕಾರ್ಯಕ್ರಮವೊಂದರಲ್ಲಿ ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯ ಕರೆ ಆಲಿಸುವಾಗ ಒರಟಾಗಿ ವರ್ತಿಸಿದ್ದಕ್ಕೆ ಜನರಿಂದ ವ್ಯಾಪಕ ಟೀಕೆಗೊಳಗಾದ ಬೆನ್ನಲ್ಲೇ ಪ್ರಸ್ತುತ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 2017 ರಿಂದ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಜೋಸೆಫೈನ್ ಅವರಲ್ಲಿ ಶುಕ್ರವಾರ ತಿರುವನಂತಪುರಂನ ಎಕೆಜಿ ಭವನದಲ್ಲಿ ನಡೆದ ಸಿಪಿಎಂ ರಾಜ್ಯ ಸಚಿವಾಲಯದ ಸಭೆಯಲ್ಲಿ ವಿವರಣೆ ಕೇಳಲಾಯಿತು. ಆದರೆ ಆಕೆಯ ಸ್ಪಷ್ಟೀಕರಣದ ಹೊರತಾಗಿಯೂ, ಸೆಕ್ರೆಟರಿಯೇಟ್‌ನ ಅನೇಕ ಸದಸ್ಯರು ಸಾಂವಿಧಾನಿಕ ಹುದ್ದೆಯನ್ನು ವಹಿಸಿಕೊಳ್ಳುವಾಗ ಇಂತಹ ಕಾಮೆಂಟ್‌ಗಳನ್ನು ಮಾಡಿದ್ದಕ್ಕಾಗಿ ಆಕೆಯನ್ನು ಖಂಡಿಸಿದ್ದಾರೆಂದು ತಿಳಿದುಬಂದಿದೆ. ಪಕ್ಷದ ಒತ್ತಾಯದ ಮೇರೆಗೆ ಜೋಸೆಫೈನ್ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಮನೋರಮ ನ್ಯೂಸ್ ಲೈವ್ ಫೋನ್ ಇನ್ ಕಾರ್ಯಕ್ರಮದಲ್ಲಿ ಎರ್ನಾಕುಲಂ ಜಿಲ್ಲೆಯಿಂದ ಕರೆ ಮಾಡಿದ ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಅತ್ತೆ ನನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಅವಲತ್ತುಕೊಂಡಿದ್ದಾರೆ. ಹೀಗಿರುವಾಗ ಪೊಲೀಸರಿಗೆ ಯಾಕೆ ದೂರು ನೀಡಿಲ್ಲ? ಎಂದು ಜೋಸೆಫೈನ್ ಆಕೆಯಲ್ಲಿ ಕೇಳಿದಾಗ, ನಾನು ಯಾರಿಗೂ ಹೇಳಲಿಲ್ಲ ಎಂದು ಆ ಮಹಿಳೆ ಉತ್ತರಿಸಿದ್ದಾರೆ. ಮಹಿಳೆಯ ಈ ಮಾತನ್ನು ಕೇಳಿದ ಜೋಸೆಫೈನ್ “ಎನ್ನಾ ಪಿನ್ನೆ ಅನುಭವಿಚ್ಚೋ ! (ಓಹ್,ಹಾಗಾದ್ರೆ ಸಹಿಸಿಕೊಂಡಿರು ) ಎಂದಿದ್ದಾರೆ.

ಫೋನ್ ಇನ್ ಕಾರ್ಯಕ್ರಮದುದ್ದಕ್ಕೂ ಮಹಿಳಾ ಆಯೋಗದ ಮುಖ್ಯಸ್ಥರು ಕರೆ ಮಾಡುತ್ತಿರುವ ಮಹಿಳೆಯರಿಗೆ ಒರಟಾಗಿ,ಮನಸ್ಸಿಲ್ಲದ ಮನಸ್ಸಲ್ಲಿ ಉತ್ತರಿಸುತ್ತಿದ್ದರು. ಸರಿಯಾಗಿ ಆಲಿಸುವ ಮನಸ್ಥಿತಿಯೂ ಅವರಿಗಿರಲಿಲ್ಲ ಎಂಬಂತಿತ್ತು ಅವರ ಹಾವಭಾವ. ಕೌಟುಂಬಿಕ ಹಿಂಸೆ ಬಗ್ಗೆ ಕುಟುಂಬದ ನ್ಯಾಯಾಲಯಕ್ಕೆ ಸಮೀಪಿಸುವಂತೆ ದೂರುದಾರರಿಗೆ ಸಲಹೆ ನೀಡಿದ ಜೋಸೆಫೈನ್ ಇದರಿಂದಾಗಿ ತನ್ನ ಕುಟುಂಬವನ್ನು ಸರಿದೂಗಿಸಬಹುದು ಎಂದಿದ್ದಾರೆ. “ನಾನು ಹೇಳಿದ್ದನ್ನು ನೀವು ಅರ್ಥಮಾಡಿಕೊಂಡಿದ್ದೀರಾ? ನಿಮ್ಮ ಪತಿಯೊಂದಿಗೆ ನೀವು ವಾಸಿಸಲು ಬಯಸದಿದ್ದರೆ, ನೀವು ಉತ್ತಮ ವಕೀಲರನ್ನು ಸಂಪರ್ಕಿಸಿ ವರದಕ್ಷಿಣೆ ಹಿಂಪಡೆಯಬೇಕು ಪರಿಹಾರವನ್ನು ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿ ಎಂದು ಹೇಳಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಮತ್ತೊಂದು ಕರೆ ಸ್ವೀಕರಿಸಿ ಮಾತನಾಡಿದ ಜೋಸೆಫೈನ್ , “ನೀವು ಮಾಡಿದ್ದು ಮೂರ್ಖತನ. ನೀವು ಬೇರೆ ಬೇರೆ ಆದ ನಂತರ ನಂತರ, ನೀವು ಯಾಕೆ ರಾಜಿಯಾಲು ಹೋಗಿದ್ದು? ನಿಮಗೊಂದ ಮಗು ಇದೆ. ನನಗೆ ಮಾತನಾಡಲು ಬಿಡಿ. ನೀವು ಮಾತನಾಡುತ್ತಾ ಹೋಗ್ತೀರಿ. ಎಲ್ಲ ತಪ್ಪುಗಳನ್ನು ಮಾಡುತ್ತಿರುವವರು ಮಹಿಳೆಯರೇ ಎಂದು ಗೊಣಗಿದ್ದಾರೆ.

ಈ ರೀತಿ ಪ್ರತಿಕ್ರಿಯಿಸಿದ ಬಗ್ಗೆ ವಾಹಿನಿಯ ಪತ್ರಕರ್ತೆ ಜೋಸೆಫೈನ್ ಅವರಲ್ಲಿ ಕೇಳಿದಾಗ ಮೊದಲು ಪ್ರತಿಕ್ರಿಯಿಸಲು ನಿರಾಕರಿಸಿದರು. ಆಮೇಲೆ ನಾನು ಯಾವ ಕೆಟ್ಟ ಪದಗಳಿಂದ ಬೈದಿಲ್ಲ. ಪೊಲೀಸರಿಗೆ ದೂರು ನೀಡಬೇಕಿತ್ತು ಎಂದಷ್ಟೇ ನಾನು ಹೇಳಿದೆ ಎಂದಿದ್ದಾರೆ.

“ಕೇರಳದ ಮಹಿಳೆಯರು ತನ್ನ ಸವಲತ್ತುಗಳ ಅಹಂಕಾರದಿಂದ ಅಸಹಾಯಕ ಯುವತಿಯರಿಗೆ ಪ್ರತಿಕ್ರಿಯಿಸುವ ವ್ಯಕ್ತಿಯನ್ನು ಏಕೆ ಸಹಿಸಬೇಕುಟ ಎಂದು ಕವಿ ದೀಪಾ ನಿಶಾಂತ್ ಫೇಸ್ಬುಕ್ ಜೋಸೆಫೈನ್  ವರ್ತನೆ ಖಂಡಿಸಿದ್ದರು.

ಸಿಪಿಎಂನ ಕೇಂದ್ರ ಸಮಿತಿಯ ಸದಸ್ಯರಾಗಿದ್ದ ಜೋಸೆಫೈನ್ ಅವರು ಈ ರೀತಿ ವಿವಾದಕ್ಕೀಡಾಗಿರುವುದು ಇದೇ ಮೊದಲ ಬಾರಿ ಅಲ್ಲ. ಕಳೆದ ವರ್ಷ, ಸಿಪಿಎಂ ನಾಯಕರ ವಿರುದ್ಧ ಪ್ರಕರಣಗಳ ಮೇಲೆ ಕಮಿಷನ್ ನಿಲುವು ಕುರಿತು ವರದಿಗಾರರಿಂದ ಪ್ರಶ್ನಿಸಿದಾಗ, ಜೋಸೆಫೀನ್ ತನ್ನ ಪಕ್ಷವು ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಈ ಹೇಳಿಕೆಯನ್ನು ಕಾಂಗ್ರೆಸ್ ಮತ್ತು ಇತರ ಪಕ್ಷಗಳು ವ್ಯಾಪಕವಾಗಿ ಖಂಡಿಸಿದ್ದವು.

ಇದನ್ನೂ ಓದಿ:  ಕೌಟುಂಬಿಕ ದೌರ್ಜನ್ಯ ಬಗ್ಗೆ ಕರೆ ಮಾಡಿ ದೂರು ನೀಡಿದ ಮಹಿಳೆಯಲ್ಲಿ ‘ಹಾಗಾದರೆ ನೀನು ಸಹಿಸಿಕೊಂಡಿರು’ ಎಂದು ಉತ್ತರಿಸಿದ ಕೇರಳದ ಮಹಿಳಾ ಆಯೋಗದ ಅಧ್ಯಕ್ಷೆ

(Kerala Women’s Commission chief MC Josephine resigned after intense public backlash over her insensitive comments to a domestic violence victim)

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ