ವ್ಯಕ್ತಿಯ ಕಿಡ್ನ್ಯಾಪ್, ಕೊಲೆ ಬೆದರಿಕೆ ಹಿನ್ನೆಲೆ: ಹೈದರಾಬಾದ್ ಪೊಲೀಸರಿಂದ ಮಾಜಿ ಸಚಿವೆ ಅರೆಸ್ಟ್
ವ್ಯಕ್ತಿಯೊಬ್ಬರ ಕಿಡ್ನ್ಯಾಪ್ ಮತ್ತು ಕೊಲೆ ಬೆದರಿಕೆ ಪ್ರಕರಣದಲ್ಲಿ ಆಂಧ್ರಪ್ರದೇಶದ ಮಾಜಿ ಸಚಿವೆ ಬೂಮಾ ಅಖಿಲಪ್ರಿಯ ಅವರನ್ನು ಹೈದರಾಬಾದ್‌ನ ಬೊಯಿನಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ಭೂ ಅಕ್ರಮ ಹಾಗೂ ವ್ಯಕ್ತಿಯೋರ್ವರ ಕಿಡ್ನ್ಯಾಪ್ ಮತ್ತು ಜೀವ ಬೆದರಿಕೆ ಪ್ರಕರಣದಲ್ಲಿ ದಂಪತಿ ವಿರುದ್ಧ ಆರೋಪ
ಹೈದರಾಬಾದ್: ವ್ಯಕ್ತಿಯೊಬ್ಬರ ಕಿಡ್ನ್ಯಾಪ್ ಮತ್ತು ಕೊಲೆ ಬೆದರಿಕೆ ಪ್ರಕರಣದಲ್ಲಿ ಆಂಧ್ರಪ್ರದೇಶದ ಮಾಜಿ ಸಚಿವೆ ಬೂಮಾ ಅಖಿಲಪ್ರಿಯ ಅವರನ್ನು ಹೈದರಾಬಾದ್‌ನ ಬೊಯಿನಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈಗ ಬಂಧನಕ್ಕೊಳಗಾಗಿರುವ ಬೂಮಾ ಅಖಿಲಪ್ರಿಯ, ಚಂದ್ರಬಾಬು ನಾಯ್ಡು ಸಂಪುಟದಲ್ಲಿ ಸಚಿವೆಯಾಗಿದ್ದರು. ಈ ಮಧ್ಯೆ ಬೂಮಾ ಅಖಿಲಪ್ರಿಯ ಪತಿ ಭಾರ್ಗವ ರಾಮ್ ಪರಾರಿಯಾಗಿದ್ದಾರೆ. ಭೂ ಅಕ್ರಮ ಹಾಗೂ ವ್ಯಕ್ತಿಯೋರ್ವರ ಕಿಡ್ನ್ಯಾಪ್ ಮತ್ತು ಜೀವ ಬೆದರಿಕೆ ಪ್ರಕರಣದಲ್ಲಿ ದಂಪತಿ ವಿರುದ್ಧ ಆರೋಪ ಕೇಳಿಬಂದಿತ್ತು.
Published On - 5:02 pm, Wed, 6 January 21




