Haryana: ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ; ಪಾದಯಾತ್ರೆ ಹೊರಟ ರೈತ ಪ್ರತಿಭಟನಾಕಾರರು- ಮುಖ್ಯಾಂಶಗಳು ಇಲ್ಲಿದೆ

Farmers Protest: ಆಗಸ್ಟ್ 28 ರಂದು ನಡೆದ ಲಾಠಿ ಚಾರ್ಜ್​ಗೆ ವಿರೋಧ ವ್ಯಕ್ತಪಡಿಸಿ ಈ ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆ ನಿಯಂತ್ರಿಸಲು, ಪ್ರತಿಭಟನಾ ನಿರತ ರೈತರನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ.

Haryana: ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ; ಪಾದಯಾತ್ರೆ ಹೊರಟ ರೈತ ಪ್ರತಿಭಟನಾಕಾರರು- ಮುಖ್ಯಾಂಶಗಳು ಇಲ್ಲಿದೆ
ರೈತರ ಸಭೆಯಲ್ಲಿ ಭಾಗವಹಿಸಿದ ರೈತರು
Follow us
TV9 Web
| Updated By: ganapathi bhat

Updated on:Sep 07, 2021 | 5:37 PM

ದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಧರಣಿ ಮುಂದುವರಿಸಿದ್ದಾರೆ. ರೈತರು ಹರ್ಯಾಣದ ಕರ್ನಾಲ್ ಜಿಲ್ಲೆಯ ಗ್ರೈನ್ ಮಾರುಕಟ್ಟೆಯಿಂದ ಜಿಲ್ಲಾ ಅಧಿಕಾರಿಗಳ ಕಡೆಗೆ ಪಾದಯಾತ್ರೆ ಆರಂಭಿಸಿದ್ದಾರೆ. ಆಗಸ್ಟ್ 28 ರಂದು ನಡೆದ ಲಾಠಿ ಚಾರ್ಜ್​ಗೆ ವಿರೋಧ ವ್ಯಕ್ತಪಡಿಸಿ ಈ ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆ ನಿಯಂತ್ರಿಸಲು, ಪ್ರತಿಭಟನಾ ನಿರತ ರೈತರನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ. ಈ ಘಟನೆಯ ಬಗೆಗಿನ ಮುಖ್ಯಾಂಶಗಳನ್ನು ಇಲ್ಲಿ ನೀಡಲಾಗಿದೆ.

  • ಇಂದು 11 ರೈತ ಮುಖಂಡರು ಹಾಗೂ ಜಿಲ್ಲಾ ಅಧಿಕಾರಿಗಳ ನಡುವೆ, ಪಾದಯಾತ್ರೆ ನಡೆಸುವ ಕುರಿತು ನಡೆಸಿದ ಮಾತುಕತೆ ಸಫಲವಾಗಿಲ್ಲ. ರಾಕೇಶ್ ಟಿಕಾಯತ್ ಹಾಗೂ ಯೋಗೇಂದ್ರ ಯಾದವ್ ಕೂಡ ಮಾತುಕತೆಯಲ್ಲಿ ಭಾಗವಹಿಸಿದ್ದರು.
  • ಈ ಬಗ್ಗೆ ರಾಕೇಶ್ ಟಿಕಾಯತ್ ಇಂದು ಟ್ವೀಟ್ ಮಾಡಿದ್ದರು. ಲಾಠಿ ಚಾರ್ಜ್​ನಲ್ಲಿ ಗಾಯಗೊಂಡು ಮೃತಪಟ್ಟಿದ್ದ ಸುಶಿಲ್ ಕಾಜಿಲ ಅವರಿಗೆ ನ್ಯಾಯ ಒದಗಿಸುವ ಸಲುವಾಗಿ ಈ ಮಹಾಪಂಚಾಯತ್ ಹಾಗೂ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದರು. ಆದರೆ, ಪೊಲೀಸರು ಈ ವಾದವನ್ನು ತಿರಸ್ಕರಿಸಿದ್ದಾರೆ. ಬದಲಾಗಿ, ಕಾಜಿಲ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
  • ರೈತರಿಗೆ ಪಾದಯಾತ್ರೆ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾಡಳಿತದವರು ಹೇಳಿಕೆ ನೀಡಿದ್ದಾರೆ. ಹಾಗೂ ಪ್ರತಿಭಟನೆ ತಡೆಯಲು ರಕ್ಷಣಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಹತ್ತಿರದ ಜಿಲ್ಲೆಗಳಿಂದ ಪ್ರಯಾಣ ಬೆಳೆಸುತ್ತಿರುವ ರೈತರನ್ನು ಕೂಡ ತಡೆಯಲಾಗುತ್ತಿದೆ.
  • ಐದು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್​ನೆಟ್ ಹಾಗೂ ಎಸ್​ಎಂಎಸ್ ಸೇವೆಗಳನ್ನು ಅಮಾನತು ಮಾಡಲಾಗಿದೆ. ತುಂಬಾ ಮಂದಿ ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ರಕ್ಷಣಾ ಕಾರ್ಯದ ಉದ್ದೇಶದಿಂದ ಕ್ಯಾಮರಾ ಅಳವಡಿಸಿರುವ ಡ್ರೋನ್ ಹಾರಾಟ ನಡೆಸಲಾಗುವುದು ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
  • ನಿನ್ನೆ ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ರೈತ ಮುಖಂಡರನ್ನು ಕರೆದಿದ್ದರು. ಹಾಗೂ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಸೂಚನೆ ಕೊಟ್ಟಿದ್ದರು. ಅದರಂತೆ ರೈತ ನಾಯಕ ಗುರ್ನಮ್ ಸಿಂಗ್ ಚಡುಣಿ ರೈತರಿಗೆ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಕೇಳಿಕೊಂಡಿದ್ದಾರೆ.
  • ಸುಮಾರು 40 ರೈತ ಸಂಘಟನೆಗಳ ಒಕ್ಕೂಟ ಆಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಲಾಠಿ ಚಾರ್ಜ್ ಮಾಡಲು ಹೇಳಿರುವ ಅಧಿಕಾರಿಗಳ ವಿರುದ್ಧ ಎಫ್​ಐಆರ್ ಮಾಡುವಂತೆ ಆಗ್ರಹಿಸಿದೆ.
  • ಸಂಯುಕ್ತ ಕಿಸಾನ್ ಮೋರ್ಚಾ, ಪೊಲೀಸರ ನಡೆಯನ್ನು ಖಂಡಿಸಿದೆ. ರೈತರ ತಲೆ ಒಡೆಯಿರಿ ಎಂದು ಹೇಳಿಕೆ ನೀಡಿರುವ ಆರೋಪ ಹೊಂದಿರುವ ಆಯುಶ್ ಸಿನ್ಹಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.
  • ಅಧಿಕಾರಿಗಳ ಪದಬಳಕೆ ಸರಿ ಇರಲಿಲ್ಲ. ಆದರೆ, ಕಾನೂನು ಪಾಲಿಸಲು ಕಠಿಣ ಕ್ರಮ ಕೈಗೊಳ್ಳುವುದು ಬೇಕಿತ್ತು ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯೋಗೇಂದ್ರ ಯಾದವ್, ಯಾವ ಕಾನೂನು ಮತ್ತೊಬ್ಬರ ತಲೆ ಒಡೆಯುವುದನ್ನು ಹೇಳುತ್ತದೆ ಎಂದು ಪ್ರಶ್ನಿಸಿದ್ದರು.
  • ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ನಡೆದ ಮೀಟಿಂಗ್​ಗೆ ಸುಮಾರು 15 ರಾಜ್ಯಗಳಿಂದ ರೈತ ಹೋರಾಟಗಾರರು ಆಗಮಿಸಿದ್ದಾರೆ. ಹಾಗೂ ಅದು ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ರೈತರ ಶಕ್ತಿ ತಿಳಿಯುವಂತೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnal Kisan Mahapanchayat ಕರ್ನಾಲ್ ತಲುಪಿದ ಹರ್ಯಾಣದ ರೈತರು; ಬೃಹತ್ ಪ್ರತಿಭಟನೆಗೆ ಮುನ್ನ ಎಸ್​​ಕೆಎಂ ಮುಖಂಡರನ್ನು ಚರ್ಚೆಗೆ ಕರೆದ ಜಿಲ್ಲಾಡಳಿತ

ಇದನ್ನೂ ಓದಿ: Kisan Mahapanchayat: ಕರ್ನಾಲ್​​ನಲ್ಲಿ ರೈತರ ಸಮಾವೇಶಕ್ಕೆ ವೇದಿಕೆ ಸಜ್ಜು, ಬಿಗಿ ಭದ್ರತೆ

Published On - 5:36 pm, Tue, 7 September 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ