ಪತಿಯನ್ನು ಕೊಂದು ಹೊಟ್ಟೆ ಸೀಳಿ ಕರುಳು ಹೊರತೆಗೆದ ಪತ್ನಿ, ಮಾಲೀಕನನ್ನು ಕಂಡು ಟೆರೇಸ್‌ನಿಂದ ಜಿಗಿತ

ಕುರುಕ್ಷೇತ್ರದಲ್ಲಿ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಂದು, ಹೊಟ್ಟೆ ಸೀಳಿ ಕರುಳು ಹೊರತೆಗೆದು ಚೀಲಕ್ಕೆ ತುಂಬುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ. ಮರಣೋತ್ತರ ಪರೀಕ್ಷೆಯಲ್ಲಿ ಪತಿಯ ಯಕೃತ್ತು ಮತ್ತು ಬಲ ಮೂತ್ರಪಿಂಡ ಕಾಣೆಯಾಗಿರುವುದು ದೃಢಪಟ್ಟಿದೆ. ಇದು ಕೇವಲ ಕೌಟುಂಬಿಕ ಕಲಹವೋ ಅಥವಾ ಅಂಧಶ್ರದ್ಧೆ, ಮಾಟಮಂತ್ರದ ನರಬಲಿ ಕೃತ್ಯವೋ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಪತಿಯನ್ನು ಕೊಂದು ಹೊಟ್ಟೆ ಸೀಳಿ ಕರುಳು ಹೊರತೆಗೆದ ಪತ್ನಿ, ಮಾಲೀಕನನ್ನು ಕಂಡು ಟೆರೇಸ್‌ನಿಂದ ಜಿಗಿತ
ಆರೋಪಿ

Updated on: Aug 24, 2026 | 7:22 AM

ಕುರುಕ್ಷೇತ್ರ, ಆಗಸ್ಟ್​ 24: ಹರಿಯಾಣದ ಕುರುಕ್ಷೇತ್ರದಲ್ಲಿ ಮಾನವೀಯತೆಯೇ ತಲೆತಗ್ಗಿಸುವಂತಹ ಭೀಕರ ಹಾಗೂ ಅಮಾನವೀಯ ಕೊಲೆ(Murder) ಪ್ರಕರಣವೊಂದು ಬೆಳಕಿಗೆ ಬಂದಿದೆ. ಪೆಹೋವಾ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಂದು, ಹೊಟ್ಟೆ ಸೀಳಿ ಕರುಳನ್ನು ಹೊರತೆಗೆದು ಚೀಲಕ್ಕೆ ತುಂಬುತ್ತಿದ್ದಾಗ ಮನೆ ಮಾಲೀಕನಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.

ಉತ್ತರ ಪ್ರದೇಶ ಮೂಲದ ರಾಜೇಶ್ (ಮೃತ) ಹಾಗೂ ವಿಮಲಾ ದೇವಿ (ಆರೋಪಿ) ಕುರುಕ್ಷೇತ್ರದಲ್ಲಿ ನೆಲೆಸಿದ್ದರು. ಗಲಾಟೆ ಕೇಳಿ ಟೆರೇಸ್‌ಗೆ ಬಂದ ಮನೆ ಮಾಲೀಕ ರಿಂಕು ಈ ಭೀಕರ ದೃಶ್ಯವನ್ನು ನೋಡಿದಾಗ, ಗಾಬರಿಗೊಂಡ ಆರೋಪಿ ಟೆರೇಸ್‌ನಿಂದ ಕೆಳಗೆ ಜಿಗಿದು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಆಘಾತಕಾರಿ ಸತ್ಯ
ರಾಜೇಶ್‌ನ ಹೊಟ್ಟೆಯನ್ನು ಸುಮಾರು 35 ಸೆಂಟಿಮೀಟರ್‌ಗಳಷ್ಟು ಉದ್ದಕ್ಕೆ ಹರಿತವಾದ ಆಯುಧದಿಂದ ಸೀಳಿ ಕರುಳನ್ನು ಸಂಪೂರ್ಣವಾಗಿ ಹೊರತೆಗೆಯಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರಾಜೇಶ್‌ನ ಯಕೃತ್ತಿನ (Liver) ಬಹುಪಾಲು ಭಾಗ ಹಾಗೂ ಬಲ ಮೂತ್ರಪಿಂಡ (Kidney) ಕಾಣೆಯಾಗಿರುವುದು ವೈದ್ಯರಿಗೆ ಆಘಾತ ಮೂಡಿಸಿದೆ.

ಮತ್ತಷ್ಟು ಓದಿ: ಬೆಂಗಳೂರಿನ ನಡು ರಸ್ತೆಯಲ್ಲಿಯೆ ವ್ಯಕ್ತಿಯ ಭೀಕರ ಹತ್ಯೆ: ಪ್ರತೀಕಾರಕ್ಕಾಗಿ ನಡೀತಾ ಕೊಲೆ?

ಅಪರಾಧ ನಡೆದ ಸ್ಥಳದಿಂದ ಪೊಲೀಸರು ರಕ್ತಸಿಕ್ತ ಮೂರು ಬೇರೆ ಬೇರೆ ಗಾತ್ರದ ಹರಿತವಾದ ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ.ದಂಪತಿಗೆ ಹಲವು ವರ್ಷಗಳಾದರೂ ಮಕ್ಕಳಿರಲಿಲ್ಲ. ವಿಮಲಾ ದೇವಿ ಸಾಂಪ್ರದಾಯಿಕ ಚಿಕಿತ್ಸೆ, ಮಾಟಮಂತ್ರ ಮತ್ತು ಭೂತೋಚ್ಚಾಟನೆ ಪದ್ಧತಿಗಳಲ್ಲಿ ತೊಡಗಿಸಿಕೊಂಡಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಕೊಲೆಯು ಕೇವಲ ಕೌಟುಂಬಿಕ ಕಲಹವೋ ಅಥವಾ ಅಂಧಶ್ರದ್ಧೆ, ಮಾಟಮಂತ್ರದ ನರಬಲಿ ಪ್ರೇರಿತ ಕೃತ್ಯವೋ ಎಂಬ ಬಗ್ಗೆ ಕುರುಕ್ಷೇತ್ರ ಪೊಲೀಸರು ಮತ್ತು ವಿಧಿವಿಜ್ಞಾನ (FSL) ತಂಡಗಳು ತೀವ್ರ ತನಿಖೆ ನಡೆಸುತ್ತಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:21 am, Mon, 24 August 26

Loading...
Unable to load recommendations.
Follow Us