ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಎಸ್‌ಐಟಿ
ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ಆರು ರೈತರನ್ನು ಬಂಧಿಸಲಾಗಿದೆ. ಶಂಕಿತ ಆರೋಪಿಗಳೆಂದು ಗುರುತಿಸಿದ ನಂತರ ವಿಚಿತ್ರಾ ಸಿಂಗ್, ಗುರ್ವಿಂದರ್ ಸಿಂಗ್, ಅವತಾರ್ ಸಿಂಗ್ ಮತ್ತು ರಂಜೀತ್ ಸಿಂಗ್ ಅವರನ್ನು ಎಸ್‌ಐಟಿ ಈ ಹಿಂದೆ ಬಂಧಿಸಿತ್ತು.
ದೆಹಲಿ: ಕಳೆದ ವರ್ಷ ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ(Lakhimpur Kheri) ಭುಗಿಲೆದ್ದ ಹಿಂಸಾಚಾರದ ಸಂದರ್ಭದಲ್ಲಿ ಮೂವರು ಬಿಜೆಪಿ(BJP) ಕಾರ್ಯಕರ್ತರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT-Special Investigation Team) ಇಬ್ಬರು ರೈತರನ್ನು ಬಂಧಿಸಿದೆ. ಎಸ್‌ಐಟಿ ಮೂಲಗಳ ಪ್ರಕಾರ ಇಬ್ಬರು ರೈತರನ್ನು ಕಮಲ್‌ಜೀತ್ ಸಿಂಗ್, 29 ಮತ್ತು ಕವಲ್ಜೀತ್ ಸಿಂಗ್ ಸೋನು, 35 ಎಂದು ಗುರುತಿಸಲಾಗಿದೆ. ಎಸ್‌ಐಟಿ ಈ ಹಿಂದೆ ಕೆಲವು ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿತ್ತು, ಅದರಲ್ಲಿ ಇಬ್ಬರು ಸೇರಿದ್ದಾರೆ. ವರದಿಗಳ ಪ್ರಕಾರ ಅವರು ಸುಮಾರು ಎರಡು ತಿಂಗಳ ಕಾಲ ಪೊಲೀಸರಿಂದ ತಲೆಮರೆಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಇಬ್ಬರನ್ನೂ ಈಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಮತ್ತು ಅವರ ಕಸ್ಟಡಿಗೆ ತನಿಖಾಧಿಕಾರಿಗಳು ಕೋರಿದ್ದಾರೆ. ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರು ರೈತರನ್ನು ಬಂಧಿಸಲಾಗಿದೆ. ಶಂಕಿತ ಆರೋಪಿಗಳೆಂದು ಗುರುತಿಸಿದ ನಂತರ ವಿಚಿತ್ರಾ ಸಿಂಗ್, ಗುರ್ವಿಂದರ್ ಸಿಂಗ್, ಅವತಾರ್ ಸಿಂಗ್ ಮತ್ತು ರಂಜೀತ್ ಸಿಂಗ್ ಅವರನ್ನು ಎಸ್‌ಐಟಿ ಈ ಹಿಂದೆ ಬಂಧಿಸಿತ್ತು.
ಹಿಂಸಾಚಾರದ ವೇಳೆ ನಾಲ್ವರು ರೈತರು ಮತ್ತು ಪತ್ರಕರ್ತನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಜೊತೆಗೆ ಸಹ ಆರೋಪಿಯಾಗಿರುವ ಬಿಜೆಪಿ ಕಾರ್ಯಕರ್ತ ಸುಮಿತ್ ಜೈಸ್ವಾಲ್ ಹಿಂಸಾಚಾರದ ಸಮಯದಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತರ ಸಾವಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ ನಂತರ, ಆರಂಭದಲ್ಲಿ ‘ಅಪರಿಚಿತ ರೈತರ’ ವಿರುದ್ಧ ಕೊಲೆ ಮತ್ತು ಗಲಭೆಯ ಆರೋಪಗಳನ್ನು ಹೊರಿಸಲಾಯಿತು.
ಸುಮಿತ್ ಸಲ್ಲಿಸಿದ ಎಫ್‌ಐಆರ್‌ನಲ್ಲಿ ಆಶಿಶ್‌ನ ಬೆಂಗಾವಲು ಪಡೆ ಹೊಡೆದುರುಳಿಸಿದ ಐವರ ಸಾವಿನ ಬಗ್ಗೆ ಉಲ್ಲೇಖಿಸಲಾಗಿಲ್ಲ. ಆಶಿಶ್ ಮತ್ತು ಇತರರ ವಿರುದ್ಧ ರೈತರು ನೀಡಿದ ದೂರಿನ ಆಧಾರದ ಮೇಲೆ ಹಿಂಸಾಚಾರಕ್ಕೆ ಸಂಬಂಧಿಸಿದ ಮೊದಲ ಎಫ್‌ಐಆರ್ ಅನ್ನು ಪೊಲೀಸರು ದಾಖಲಿಸಿದ್ದಾರೆ. ಆ ಪ್ರಕರಣದಲ್ಲಿ 13 ಜನರನ್ನು ಬಂಧಿಸಿದ ನಂತರ ಎಸ್ಐಟಿ ಘಟನೆಯನ್ನು “ಯೋಜಿತ” ಎಂದು ಬಣ್ಣಿಸಿದೆ.
ನವೆಂಬರ್ 2021 ರಲ್ಲಿ ಸುಪ್ರೀಂಕೋರ್ಟ್ ಎಸ್ಐಟಿ ಅನ್ನು ಪುನರ್ರಚಿಸಿತ್ತು ಮತ್ತು ಹೊಸ ಸದಸ್ಯರನ್ನು ಸೇರಿಸಿತು. ಐಪಿಎಸ್ ಅಧಿಕಾರಿಗಳಾದ ಎಸ್.ಬಿ. ಶಿರಾಡ್ಕರ್, ಪ್ರೀತೀಂದರ್ ಸಿಂಗ್ ಮತ್ತು ಪದ್ಮಜಾ ಚೌಹಾಣ್, ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ರಾಕೇಶ್ ಕುಮಾರ್ ಜೈನ್ ಲಖಿಂಪುರ ಖೇರಿ ಹಿಂಸಾಚಾರದ ತನಿಖೆ ನಡೆಸುತ್ತಿದ್ದಾರೆ.
Published On - 5:59 pm, Sun, 2 January 22