ಮತದಾರರ ಸೆಳೆಯಲು ನಾನಾ ವೇಷ, ತರಕಾರಿ ವ್ಯಾಪಾರಿಯಾದ ಸ್ವತಂತ್ರ ಅಭ್ಯರ್ಥಿ
ಮುಂಬರಲಿರುವ ಲೋಕಸಭಾ ಚುನಾವಣೆ(Lok Sabha Election)ಗೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಟೊಂಕ ಕಟ್ಟಿ ನಿಂತಿದ್ದಾರೆ. ಓರ್ವ ಅಭ್ಯರ್ಥಿ ಅಂದು ಕ್ಷೌರಿಕನಾಗಿ ಕೆಲಸ ಮಾಡಿದರೆ, ಮತ್ತೋರ್ವ ಅಭ್ಯರ್ಥಿ ಚಪ್ಪಲಿ ಹಾರ ಹಾಕಿಕೊಂಡು ಪ್ರಚಾರ ಮಾಡಿದ್ದಾರೆ ಇದೀಗ ತಿರುಚಿರಾಪಳ್ಳಿಯ ಸ್ವತಂತ್ರ ಅಭ್ಯರ್ಥಿ ಎಸ್ ದಾಮೋದರನ್ ತರಕಾರಿ ವ್ಯಾಪಾರಿಯಂತೆ ಕಾಣಿಸಿಕೊಂಡಿದ್ದಾರೆ.
ಮುಂಬರಲಿರುವ ಲೋಕಸಭಾ ಚುನಾವಣೆ(Lok Sabha Election)ಗೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಟೊಂಕ ಕಟ್ಟಿ ನಿಂತಿದ್ದಾರೆ. ಓರ್ವ ಅಭ್ಯರ್ಥಿ ಅಂದು ಕ್ಷೌರಿಕನಾಗಿ ಕೆಲಸ ಮಾಡಿದರೆ, ಮತ್ತೋರ್ವ ಅಭ್ಯರ್ಥಿ ಚಪ್ಪಲಿ ಹಾರ ಹಾಕಿಕೊಂಡು ಪ್ರಚಾರ ಮಾಡಿದ್ದಾರೆ ಇದೀಗ ತಿರುಚಿರಾಪಳ್ಳಿಯ ಸ್ವತಂತ್ರ ಅಭ್ಯರ್ಥಿ ಎಸ್ ದಾಮೋದರನ್ ತರಕಾರಿ ವ್ಯಾಪಾರಿಯಂತೆ ಕಾಣಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಮತದಾರರ ಗಮನ ಸೆಳೆಯಲು ಪ್ರತಿಯೊಬ್ಬರು ನಾನಾ ಕಸರತ್ತು ಮಾಡುತ್ತಿದ್ದಾರೆ. ದಾಮೋದರನ್ ಪದ್ಮಶ್ರೀ ಪುರಸ್ಕೃತರೂ ಹೌದು.
ನೈರ್ಮಲ್ಯ ಕೇಂದ್ರದಲ್ಲಿ ಸಹಾಯಕ ಸೇವಾ ಸ್ವಯಂ ಸೇವಕನಾಗಿ 40 ವರ್ಷಗಗೂ ಹೆಚ್ಚಿನ ಕಾಲ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ತಾನು ಅಂದಿನ ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದೇನೆ, ತಾನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ದಾಮೋದರನ್ ಅವರು ತಮ್ಮ 21 ನೇ ವಯಸ್ಸಿನಲ್ಲಿ ತಮ್ಮ ಸಮಾಜ ಸೇವೆಯನ್ನು ಪ್ರಾರಂಭಿಸಿದರು ಮತ್ತು ತಮ್ಮ ಜೀವಿತಾವಧಿಯಲ್ಲಿ ಒಂಬತ್ತು ಪ್ರಧಾನ ಮಂತ್ರಿಗಳ ಅಧಿಕಾರಾವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಹಂಚಿಕೊಂಡರು.
#WATCH | Tiruchirappalli, Tamil Nadu: Independent candidate from Trichy Lok Sabha seat Padma Shri S Damodaran indulges in making flower garland and sells vegetables as the part of Election Campaign pic.twitter.com/9iARbrat1O
— ANI (@ANI) April 11, 2024
ಇಂದು ನಾನು ನನ್ನ ಸಂಸದೀಯ ಕ್ಷೇತ್ರಕ್ಕೆ ಒಳಪಡುವ ಗಾಂಧಿ ಮಾರ್ಕೆಟ್ ಪ್ರದೇಶದಲ್ಲಿ ನನ್ನ ಪ್ರಚಾರವನ್ನು ಪ್ರಾರಂಭಿಸಿದ್ದೇನೆ, ನಾನು ಹೋದಲ್ಲೆಲ್ಲಾ ನನಗೆ ಅದ್ಭುತ ಸ್ವಾಗತ ಸಿಗುತ್ತಿದೆ ಎಂದರು. ತಿರುಚ್ಚಿಯನ್ನು ಸ್ವಚ್ಛ ಮತ್ತು ಹಸಿರು ನಗರವನ್ನಾಗಿ ಮಾಡಲು ನಾವು ಕೆಲಸ ಮಾಡಬೇಕಾಗಿದೆ, ನಗರದಲ್ಲಿ ರಿಂಗ್ ರೋಡ್ ನಿರ್ಮಾಣವಾಗುವಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.
ದಕ್ಷಿಣ ಭಾರತದ ಹಳ್ಳಿಗಳು ಮತ್ತು ಕೊಳೆಗೇರಿಗಳಲ್ಲಿ ನೈರ್ಮಲ್ಯ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಮಾಜ ಸೇವೆಯನ್ನು ಗುರುತಿಸಿ ಈ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಮತ್ತಷ್ಟು ಓದಿ: ತಮಿಳುನಾಡು: ಹಲೋ ಹಲೋ ಕ್ಷೌರವೇಷ ಇದೇನಿದು ಹೊಸ ವೇಷ
ಕ್ಷೌರಿಕನಾಗಿದ್ದ ಅಭ್ಯರ್ಥಿ
ಸ್ವತಂತ್ರ ಅಭ್ಯರ್ಥಿ ಒಂದು ದಿನದ ಮಟ್ಟಿಗೆ ಕ್ಷೌರಿಕನಾಗಿದ್ದಾರೆ. ತಮಿಳುನಾಡಿನ ರಾಮೇಶ್ವರಂನಲ್ಲಿ ಈ ಘಟನೆ ನಡೆದಿದೆ. ಅಭ್ಯರ್ಥಿಯೊಬ್ಬರು ಸಲೂನ್ನಲ್ಲಿ ಕ್ಷೌರ ಮಾಡುತ್ತಿರುವುದು ಕಂಡುಬಂದಿದೆ. ಎಎನ್ಐ ವಿಡಿಯೋವನ್ನು ಹಂಚಿಕೊಂಡಿದೆ, ಇದರಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿರುವ ಅಭ್ಯರ್ಥಿ ಕ್ಷೌರಿಕ ಕೆಲಸವನ್ನು ಮಾಡುತ್ತಿರುವುದನ್ನು ಕಾಣಬಹುದು. ಸ್ವತಂತ್ರ ಅಭ್ಯರ್ಥಿ ಪಾರಿರಾಜನ್ ಚುನಾವಣಾ ಪ್ರಚಾರದ ಸಮಯದಲ್ಲಿ ಒಂದು ದಿನ ಕ್ಷೌರಿಕನಾಗಿ ಕೆಲಸ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ