ಚೆನ್ನೈ: ಸಮುದ್ರದಾಳದಲ್ಲಿ ಸ್ಕೂಬಾ ಡೈವರ್ಗಳಿಂದ ಮತದಾನದ ಬಗ್ಗೆ ವಿಶಿಷ್ಟ ಜಾಗೃತಿ ಅಭಿಯಾನ
ಚೆನ್ನೈನಲ್ಲಿ ಸ್ಕೂಬಾ ಡೈವರ್‌ಗಳು ಸಮುದ್ರದಾಳದಲ್ಲಿ ಮತದಾನದ ಬಗ್ಗೆ ವಿಶಿಷ್ಟ ಜಾಗೃತಿ ಅಭಿಯಾನ ಕೈಗೊಂಡರು. ನೀರಿನಲ್ಲಿ ಮುಳುಗಿ ಇವಿಎಂನಲ್ಲಿ ಮತ ಚಲಾಯಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಟೆಂಪಲ್ ಅಡ್ವೆಂಚರ್‌ನ ನಿರ್ದೇಶಕ ಎಸ್‌ಬಿ ಅರವಿಂದ್ ತಾರುಶ್ರೀ ಕಾರ್ಯಕ್ರಮವನ್ನು ನಡೆಸಿದರು.
ಲೋಕಸಭಾ ಚುನಾವಣೆ(Lok Sabha Election)ಗೆ ದಿನಗಣನೆ ಆರಂಭವಾಗಿದೆ, ಚೆನ್ನೈನಲ್ಲಿ ಸ್ಕೂಬಾ ಡೈವರ್‌ಗಳು ಸಮುದ್ರದಾಳದಲ್ಲಿ ಮತದಾನದ ಬಗ್ಗೆ ವಿಶಿಷ್ಟ ಜಾಗೃತಿ ಅಭಿಯಾನ ಕೈಗೊಂಡರು. ನೀರಿನಲ್ಲಿ ಮುಳುಗಿ ಇವಿಎಂನಲ್ಲಿ ಮತ ಚಲಾಯಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಟೆಂಪಲ್ ಅಡ್ವೆಂಚರ್‌ನ ನಿರ್ದೇಶಕ ಎಸ್‌ಬಿ ಅರವಿಂದ್ ತಾರುಶ್ರೀ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಲೋಕಸಭೆ ಚುನಾವಣೆಗೆ ದೇಶವು ಮೊದಲ ಹಂತದ (ಏಪ್ರಿಲ್ 19) ಮತದಾನಕ್ಕೆ ಸಿದ್ಧವಾಗಿದೆ . ಈ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಪ್ರತಿದಿನ ಜಾಗೃತಿ ಅಭಿಯಾನ ನಡೆಸುತ್ತಿದೆ. ಪ್ರಜಾಪ್ರಭುತ್ವದ ಹಬ್ಬ ಅಂದರೆ ಚುನಾವಣೆಯಲ್ಲಿ ಮತದಾನದ ಮೂಲಕ ಹೆಚ್ಚು ಹೆಚ್ಚು ಜನರು ಭಾಗವಹಿಸುವಂತಾಗಲು ಹೀಗೆ ಮಾಡಲಾಗುತ್ತಿದೆ.
ಸ್ಕೂಬಾ ಡೈವರ್‌ಗಳು ಚೆನ್ನೈನಲ್ಲಿರುವ ಸಮುದ್ರಕ್ಕೆ ಹೋಗುತ್ತಾರೆ. ಇಲ್ಲಿ ಅವರು ಅಣಕು ಇವಿಎಂ ಯಂತ್ರಗಳನ್ನು ತೆಗೆದುಕೊಂಡು ಮತ ಚಲಾಯಿಸಿದ್ದಾರೆ. ಚೆನ್ನೈನ ಸ್ಕೂಬಾ ಡೈವರ್‌ಗಳು ನೀಲಂಕಾರೈನಲ್ಲಿ ಸಮುದ್ರದ ಅಡಿಯಲ್ಲಿ ಅರವತ್ತು ಅಡಿಗಳಷ್ಟು ಆಳಕ್ಕೆ ಹೋಗಿ ಮತದಾನ ಜಾಗೃತಿ ಅಭಿಯಾನ ನಡೆದಿದ್ದು ಈ ಫೋಟೊವನ್ನು ಚುನಾವಣಾ ಆಯೋಗ ಹಂಚಿಕೊಂಡಿದೆ.
ಮತ್ತಷ್ಟು ಓದಿ: ಈಗಷ್ಟೇ 18 ಆದವರಿಗೂ ಮತದಾನಕ್ಕೆ ಅವಕಾಶ: ಚುನಾವಣಾ ಆಯೋಗದಿಂದ ಬರ್ತ್ಡೇ ಗಿಫ್ಟ್
ಲೋಕಸಾಭಾ ಚುನಾವಣೆ ಘೋಷಣೆಯಾಗಿದೆ, ದೇಶದ 543 ಲೋಕಸಭಾ ಸ್ಥಾನಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಏಪ್ರಿಲ್ 19 ರಂದು ಪ್ರಾರಂಭವಾಗಲಿದೆ. ಜೂನ್ 1 ರವರೆಗೆ ಚುನಾವಣೆ ನಡೆಯಲಿದೆ. ಜೂನ್ 4 ರಂದು ಅಂತಿಮ ಫಲಿತಾಂಶ ಬರಲಿದೆ. ದೇಶದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿವೆ.
ವಿಡಿಯೋ
Ready to vote? Make a splash!
In a unique voter awareness initiative, scuba divers in Chennai dove into the sea, enacting the voting process sixty feet underwater in Neelankarai.
🎥 Credit : @TNelectionsCEO #ChunavKaParv #DeshKaGarv #LokSabhaElections2024 #YouAreTheOne pic.twitter.com/wjRZZHRlh4
— Election Commission of India (@ECISVEEP) April 11, 2024
ಎರಡನೇ ಹಂತಕ್ಕೆ ಏಪ್ರಿಲ್ 26, ಮೂರನೇ ಹಂತಕ್ಕೆ ಮೇ 7, ನಾಲ್ಕನೇ ಹಂತಕ್ಕೆ ಮೇ 13, ಐದನೇ ಹಂತಕ್ಕೆ ಮೇ 20, ಆರನೇ ಹಂತಕ್ಕೆ ಮೇ 25 ಮತ್ತು ಏಳನೇ ಹಂತಕ್ಕೆ ಜೂನ್ 1 ರಂದು ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:51 am, Fri, 12 April 24