ಭ್ರಷ್ಟಾಚಾರದ ಮೇಲೆ ಡಿಎಂಕೆ ಮೊದಲ ಹಕ್ಕುಸ್ವಾಮ್ಯ ಹೊಂದಿದೆ: ಪ್ರಧಾನಿ ಮೋದಿ
ಭ್ರಷ್ಟಾಚಾರದ ಮೇಲೆ ಡಿಎಂಕೆ ಮೊದಲ ಹಕ್ಕುಸ್ವಾಮ್ಯವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ತಮಿಳುನಾಡಿಗೆ ತೆರಳಿರುವ ಪ್ರಧಾನಿ ಜನರನ್ನುದ್ದೇಶಿಸಿ ಮಾತನಾಡಿದರು, ದ್ರಾವಿಡ ಮುನ್ನೇತ್ರ ಕಳಗಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆಯ ಇಡೀ ಕುಟುಂಬ ತಮಿಳುನಾಡನ್ನು ಲೂಟಿ ಮಾಡಿದೆ, ಭ್ರಷ್ಟಾಚಾರದ ಮೇಲೆ ಮೊದಲ ಹಕ್ಕುಸ್ವಾಮ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಡಿಎಂಕೆ ತಮಿಳುನಾಡನ್ನು ಹಳೆಯ ಆಲೋಚನೆ ಹಾಗೂ ಹಳೆಯ ರಾಜಕೀಯದಲ್ಲೇ ಸಿಲುಕಿಸಲು ಬಯಸುತ್ತದೆ, ಮುಂದುವರೆಯುವುದು ಪಕ್ಷಕ್ಕೆ ಇಷ್ಟವಿಲ್ಲ. ಡಿಎಂಕೆಯ ಕುಟುಂಬ ರಾಜಕಾರಣದಿಂದಾಗಿ ತಮಿಳುನಾಡಿನ ಯುವಕರಿಗೆ ಮುಂದೆ ಹೋಗಲು ಅವಕಾಶ ಸಿಗುತ್ತಿಲ್ಲ ಎಂದರು.
ಡಿಎಂಕೆಯಿಂದ ಚುನಾವಣೆಗೆ ಸ್ಪರ್ಧಿಸಲು ಹಾಗೂ ಡಿಎಂಕೆಯಲ್ಲಿ ಮುನ್ನಡೆಯಲು ಮೂರು ಪ್ರಮುಖ ಮಾನದಂಡಗಳಿವೆ. ಈ ಮೂರು ಮಾನದಂಡಗಳೆಂದರೆ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಹಾಗೂ ತಮಿಳು ವಿರೋಧಿ ಸಂಸ್ಕೃತಿ ಎಂದು ಹೇಳಿದರು. ಡಿಎಂಕೆ ಜನರನ್ನು ಭಾಷೆ, ಪ್ರದೇಶ, ನಂಬಿಕೆಯ ಮೇಲೆ ವಿಭಜಿಸುತ್ತದೆ.
ಮತ್ತಷ್ಟು ಓದಿ: BJP Campaign Song: 12 ಭಾಷೆಗಳಲ್ಲಿ ಚುನಾವಣಾ ಪ್ರಚಾರ ಗೀತೆಗಳನ್ನು ಬಿಡುಗಡೆ ಮಾಡಿದ ಬಿಜೆಪಿ
2019 ರ ಲೋಕಸಭಾ ಚುನಾವಣೆಯಲ್ಲಿ, ಡಿಎಂಕೆ ನೇತೃತ್ವದ ವಿರೋಧ ಪಕ್ಷವು ರಾಜ್ಯದ 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದಿತ್ತು. ರಾಜ್ಯದಲ್ಲಿ ಬಿಜೆಪಿ 23 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ದೇಶಾದಲ್ಲಿ ಏಪ್ರಿಲ್ 19ರಿಂದ ಜೂನ್ 1ರವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4ಕ್ಕೆ ಫಲಿತಾಂಶ ಹೊರಬರಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ