ಲೋಕಸಭಾ ಚುನಾವಣೆ 2024: ನಟ ಶೇಖರ್ ಸುಮನ್, ರಾಧಿಕಾ ಖೇರಾ ಬಿಜೆಪಿಗೆ ಸೇರ್ಪಡೆ
ಬಾಲಿವುಡ್ ನಟ ಶೇಖರ್ ಸುಮನ್ ಹಾಗೂ ಕಾಂಗ್ರೆಸ್ನ ಮಾಜಿ ನಾಯಕಿ ರಾಧಿಕಾ ಖೇರಾ ಬಿಜೆಪಿಗೆ ಇಂದು ಸೇರ್ಪಡೆಗೊಂಡರು. ಕಾಂಗ್ರೆಸ್ ವಿರುದ್ಧ ಆಘಾತಕಾರಿ ಆರೋಪಗಳನ್ನು ಮಾಡಿದ ಒಂದು ದಿನದ ನಂತರ ರಾಧಿಕಾ ಖೇರಾ ಬಿಜೆಪಿಗೆ ಸೇರಿದ್ದಾರೆ.
ಲೋಕಸಭಾ ಚುನಾವಣೆ(Lok Sabha Election)ಯ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಈ ನಡುವೆ ಬಾಲಿವುಡ್ ನಟ ಶೇಖರ್ ಸುಮನ್ ಹಾಗೂ ಕಾಂಗ್ರೆಸ್ನ ಮಾಜಿ ನಾಯಕಿ ರಾಧಿಕಾ ಖೇರಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸುಮನ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ ಇಲ್ಲವೋ ಸ್ಪಷ್ಟವಾಗಿಲ್ಲ. ಶೇಖರ್ ಸುಮನ್ ಅವರು ಇತ್ತೀಚೆಗೆ ಬಿಡುಗಡೆಯಾದ ಹಿರಾಮಂಡಿ ವೆಬ್-ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಂಗ್ರೆಸ್ ವಿರುದ್ಧ ಆಘಾತಕಾರಿ ಆರೋಪಗಳನ್ನು ಮಾಡಿದ ಒಂದು ದಿನದ ನಂತರ ರಾಧಿಕಾ ಖೇರಾ ಬಿಜೆಪಿಗೆ ಸೇರಿದ್ದಾರೆ. ರಾಮ ಮಂದಿರಕ್ಕೆ ಭೇಟಿ ನೀಡಿ ಚಿತ್ರಗಳನ್ನು ಶೇರ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಸುಶೀಲ್ ಆನಂದ್ ಶುಕ್ಖಾ ಅವರಿಗೆ ಮದ್ಯ ನೀಡಿದ್ದರು ಮತ್ತು ಕುಡಿದ ಮತ್ತಿನಲ್ಲಿ 5-6 ಪಕ್ಷದ ಕಾರ್ಯಕರ್ತರೊಂದಿಗೆ ಅವರ ಕೊಠಡಿಯ ಬಾಗಿಲು ತಟ್ಟಿದ್ದರು ಎಂದು ಖೇರಾ ಗಂಭೀರ ಆರೋಪ ಮಾಡಿದ್ದರು.
ಮತ್ತಷ್ಟು ಓದಿ: ಮಗುವನ್ನು ಎತ್ತಿ ಮುದ್ದಾಡಿದ ಪ್ರಧಾನಿ ಮೋದಿ, ಸುಂದರ ಕ್ಷಣ ಕಣ್ತುಂಬಿಕೊಂಡ ತಾಯಿ
2012 ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ ಶೇಖರ್ ಸುಮನ್ ರಾಜಕೀಯದಲ್ಲಿ ಇದು ಎರಡನೇ ಅವಧಿಯಾಗಿದೆ. ನಟ 2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ವಿರುದ್ಧ ಸ್ಪರ್ಧಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:59 pm, Tue, 7 May 24