ಪಶ್ಚಿಮ ಬಂಗಾಳ ಜನತೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಐದು ಭರವಸೆಗಳನ್ನು ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಮೋದಿ ರಾಜ್ಯದ ಜನತೆಗೆ ಐದು ಭರವಸೆಗಳನ್ನು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ದಿನಗಳಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಕೆಲ ವರ್ಷಗಳ ಹಿಂದೆ ಟಿಎಂಸಿ ಸರ್ಕಾರದ ಮೇಲೆ ಸಿಎಜಿ ವರದಿ ಬಂದಿತ್ತು. ಈ ವರದಿಯಲ್ಲಿ ಟಿಎಂಸಿ 2,30,000 ಕೋಟಿ ರೂ.ಗಳನ್ನು ಖಾತೆಗೆ ನೀಡಿಲ್ಲ ಎಂದು ಹೇಳಲಾಗಿದೆ. ಈ ಹಣವನ್ನು ಹೇಗೆ? ಎಲ್ಲಿ ಖರ್ಚು ಮಾಡಲಾಗಿದೆ ಇದಕ್ಕೆ ಲೆಕ್ಕವಿಲ್ಲ, ಟಿಎಂಸಿ ಎಷ್ಟು ಭ್ರಷ್ಟಾಚಾರ ಮಾಡಿದೆ ಎಂಬುದಕ್ಕೆ ಶಿಕ್ಷಕರ ನೇಮಕಾತಿಯೇ ಉದಾಹರಣೆ ಎಂದರು.
ನಾನು ಬಂಗಾಳಕ್ಕೆ ಐದು ಗ್ಯಾರಂಟಿಗಳನ್ನು ನೀಡುತ್ತಿದ್ದೇನೆ . ನಾನು ಇಲ್ಲಿರುವವರೆಗೂ ಧರ್ಮಾಧಾರಿತ ಮೀಸಲಾತಿ ಇರುವುದಿಲ್ಲ. SC, ST, ಅಥವಾ OBC ಯ ಮೀಸಲಾತಿಯನ್ನು ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ. ರಾಮ ನವಮಿ ಪೂಜೆ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಯೋಧ್ಯೆಯಲ್ಲಿನ ರಾಮ ಮಂದಿರದ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ ಮತ್ತು ಸಿಎಎಯನ್ನು ಮುಗಿಸಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ಮೋದಿ ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ 50 ವರ್ಷಗಳ ಕಾಲ ಸರ್ಕಾರವನ್ನು ನಡೆಸಿತು ಆದರೆ ಕಾಂಗ್ರೆಸ್ ಆಡಳಿತದಲ್ಲಿ ಪೂರ್ವ ಭಾರತವು ಬಡತನ ಮತ್ತು ವಲಸೆಯನ್ನು ಮಾತ್ರ ಪಡೆಯಿತು. ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ ಹಿಂದುಳಿದಿವೆ. ಇವುಗಳ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲು ಸರ್ಕಾರ ಏನನ್ನೂ ಮಾಡಿರಲಿಲ್ಲ.
ಇಂದು ನಾವು ಪೂರ್ವ ರಾಜ್ಯಗಳಲ್ಲಿ ರಸ್ತೆ, ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಕೈಗಾರೀಕರಣವನ್ನು ಹೆಚ್ಚಿಸುವ ಕೆಲಸ ನಡೆದಿದೆ.
ಮತ್ತಷ್ಟು ಓದಿ: ರಾಷ್ಟ್ರಪತಿಗೆ ಮಾಡಿದ ಅವಮಾನ; ರಾಮ ಮಂದಿರ ಶುದ್ಧೀಕರಣ ಹೇಳಿಕೆಗೆ ಪ್ರಧಾನಿ ಮೋದಿ ಅಸಮಾಧಾನ
ಮೇ 13 ರಂದು ನಡೆಯಲಿರುವ ನಾಲ್ಕನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದ ಎಂಟು ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಬಹರಂಪುರ್, ಕೃಷ್ಣನಗರ, ರಾಣಾಘಾಟ್, ಬರ್ಧಮಾನ್ ಪುರ್ಬಾ, ಬುರ್ದ್ವಾನ್-ದುರ್ಗಾಪುರ್, ಅಸನ್ಸೋಲ್, ಬೋಲ್ಪುರ್ ಮತ್ತು ಬಿರ್ಭುಮ್ ಕ್ಷೇತ್ರಗಳು.
2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಟಿಎಂಸಿ 34 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 2 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಸಿಪಿಐ (ಎಂ) 2 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 4 ಸ್ಥಾನಗಳನ್ನು ಗಳಿಸಿತು.
ಮೋದಿ ವಿಡಿಯೋ
“Nobody can overturn SC verdict on Ram Mandir, stop CAA implementation…,” PM Modi gives five guarantees to Bengal
Read @ANI Story | https://t.co/ym7DDJsPJA#RamMandir #CAA #NarendraModi #PMModi pic.twitter.com/XHcXoBqnMR
— ANI Digital (@ani_digital) May 12, 2024
ಪ್ರಧಾನಿ ಮೋದಿ ಐದು ಭರವಸೆಗಳು
-ಮೋದಿ ಇರುವವರೆಗೂ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದಿಲ್ಲ
-ಮೋದಿ ಇರುವವರೆಗೂ ಎಸ್ಸಿ-ಎಸ್ಟಿ-ಒಬಿಸಿ ಮೀಸಲಾತಿಯನ್ನು ಕೊನೆಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ
-ಮೋದಿ ಇರುವವರೆಗೂ ನೀವು ರಾಮನವಮಿ ಆಚರಿಸುವುದನ್ನು ಮತ್ತು ರಾಮನ ಪೂಜೆ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ
-ಮೋದಿ ಇರುವವರೆಗೂ ರಾಮ ಮಂದಿರದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಹಿಂಪಡೆಯಲು ಯಾರಿಂದಲೂ ಸಾಧ್ಯವಿಲ್ಲ
-ಮೋದಿ ಇರುವವರೆಗೂ ಸಿಎಎ ಕಾನೂನನ್ನು ರದ್ದು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ