ಕಾಶ್ಮೀರ ಫೈಲ್ಸ್​​ನ್ನು ಹೊಗಳಿದ ಮಧ್ಯಪ್ರದೇಶ ಸಿಎಂ; ನರಮೇಧ ನೆನಪಿಸುವ ಮ್ಯೂಸಿಯಂ ನಿರ್ಮಿಸಲು ಜಾಗ ನೀಡುತ್ತೇವೆ ಎಂದ ಚೌಹಾಣ್

"ಇದು ನಮ್ಮ ಕಾಶ್ಮೀರಿ ಪಂಡಿತ್ ಸಹೋದರ ಸಹೋದರಿಯರ ನೋವನ್ನು ಹೊರತರಲು ಒಂದು ದಿಟ್ಟ ಕಾರ್ಯವಾಗಿದೆ, ಅದು ಎಂದಿಗೂ ಪ್ರಪಂಚದ ಮುಂದೆ ಬರಲಿಲ್ಲ. ವಿವೇಕ್ ಅಗ್ನಿಹೋತ್ರಿ ಅವರ ಧೈರ್ಯಕ್ಕೆ ನಾನು ವಂದಿಸುತ್ತೇನೆ ಎಂದು ಚೌಹಾಣ್ ಹೇಳಿದ್ದಾರೆ.

ಕಾಶ್ಮೀರ ಫೈಲ್ಸ್​​ನ್ನು ಹೊಗಳಿದ ಮಧ್ಯಪ್ರದೇಶ ಸಿಎಂ; ನರಮೇಧ ನೆನಪಿಸುವ ಮ್ಯೂಸಿಯಂ ನಿರ್ಮಿಸಲು ಜಾಗ ನೀಡುತ್ತೇವೆ ಎಂದ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 25, 2022 | 9:46 PM

“ದಿ ಕಾಶ್ಮೀರ್ ಫೈಲ್ಸ್” (The Kashmir Files) ಚಲನಚಿತ್ರವು ವಲಸೆ ಹೋದ ಕಾಶ್ಮೀರಿ ಪಂಡಿತ್ ಸಮುದಾಯದ ನೋವು ಮತ್ತು ಸಂಕಟಗಳನ್ನು ತೋರಿಸುತ್ತದೆ ಎಂದು ಹೇಳಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ರಾಜ್ಯದಲ್ಲಿ ನರಮೇಧ ನೆನಪಿಸುವ ಮ್ಯೂಸಿಯಂ (genocide museum) ಸ್ಥಾಪಿಸಲು ತಮ್ಮ ಸರ್ಕಾರವು ಭೂಮಿಯನ್ನು ನೀಡಲಿದೆ ಎಂದು ಶುಕ್ರವಾರ ಹೇಳಿದ್ದಾರೆ. ಚೌಹಾಣ್ ಶುಕ್ರವಾರ ಸ್ಮಾರ್ಟ್ ಸಿಟಿ ಪಾರ್ಕ್‌ನಲ್ಲಿ ಚಿತ್ರದ ಬರಹಗಾರ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ಭೋಪಾಲ್‌ನಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತ್ ಸಮುದಾಯದ ಕೆಲವು ಸದಸ್ಯರೊಂದಿಗೆ ಸಸಿಗಳನ್ನು ನೆಟ್ಟರು. ಕಾಶ್ಮೀರದಿಂದ ವಲಸೆ ಹೋದ ಪಂಡಿತ್ ಕುಟುಂಬಗಳ ನೋವು ಮತ್ತು ಸಂಕಟಗಳ ಬಗ್ಗೆ ಚಿತ್ರದ ಮೂಲಕ ಜಗತ್ತಿಗೆ ತಿಳಿಯಿತು. ವಿವೇಕ್ ಅಗ್ನಿಹೋತ್ರಿ ಅವರು ಮಧ್ಯಪ್ರದೇಶದಲ್ಲಿ ನರಮೇಧದ ಮ್ಯೂಸಿಯಂ’ ಆಗಬೇಕು ಎಂದು ಸಲಹೆ ನೀಡಿದ್ದಾರೆ. ಇದಕ್ಕಾಗಿ ನಮ್ಮ ಸರ್ಕಾರ ಭೂಮಿ ಮತ್ತು ಅಗತ್ಯ ಸಹಾಯವನ್ನು ನೀಡುತ್ತದೆ ಎಂದು ಚೌಹಾಣ್ ನಂತರ ಸುದ್ದಿಗಾರರಿಗೆ ತಿಳಿಸಿದರು. 1990 ರ ದಶಕದ ಆರಂಭದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಸಮುದಾಯವನ್ನು ಗುರಿಯಾಗಿಸಿಕೊಂಡಾಗ ಕಾಶ್ಮೀರದಿಂದ ಕಾಶ್ಮೀರಿ ಪಂಡಿತರ ವಲಸೆ ಸಮಸ್ಯೆಯನ್ನು ತೆರೆ ಮೇಲೆ ತಂದಿದ್ದಕ್ಕಾಗಿ ಅಗ್ನಿಹೋತ್ರಿ ಅವರ “ಧೈರ್ಯ” ವನ್ನು ಚೌಹಾಣ್ ಶ್ಲಾಘಿಸಿದ್ದಾರೆ.

“ಇದು ನಮ್ಮ ಕಾಶ್ಮೀರಿ ಪಂಡಿತ್ ಸಹೋದರ ಸಹೋದರಿಯರ ನೋವನ್ನು ಹೊರತರಲು ಒಂದು ದಿಟ್ಟ ಕಾರ್ಯವಾಗಿದೆ, ಅದು ಎಂದಿಗೂ ಪ್ರಪಂಚದ ಮುಂದೆ ಬರಲಿಲ್ಲ. ವಿವೇಕ್ ಅಗ್ನಿಹೋತ್ರಿ ಅವರ ಧೈರ್ಯಕ್ಕೆ ನಾನು ವಂದಿಸುತ್ತೇನೆ ಎಂದು ಚೌಹಾಣ್ ಹೇಳಿದ್ದಾರೆ.

ಇದಕ್ಕೂ ಮೊದಲು ಅಗ್ನಿಹೋತ್ರಿ ಇಲ್ಲಿ “ನರಮೇಧ ನೆನಪಿಸುವ ಮ್ಯೂಸಿಯಂ” ಸ್ಥಾಪಿಸುವ ಬಗ್ಗೆ ಮಾತನಾಡಿದರು. “ಭಾರತವು ಮಾನವೀಯತೆಯ ಸಂಕೇತವಾಗಿದೆ. ಮಾನವೀಯತೆಯ ಗುರುತಿನ ಮೂಲಕವೇ ನಾವು `ವಿಶ್ವ ಗುರುಗಳಾಗುತ್ತೇವೆ. ಮಧ್ಯಪ್ರದೇಶ ಶಾಂತಿಪ್ರಿಯ ಜನರ ನಾಡು. ಇಲ್ಲಿ ನರಮೇಧದ ಮ್ಯೂಸಿಯಂ ನಿರ್ಮಿಸಲು ಅವಕಾಶ ನೀಡಿದರೆ ಅದು ಇಡೀ ವಿಶ್ವಕ್ಕೆ ಮಾನವೀಯತೆಯ ಪ್ರತೀಕವಾಗುತ್ತದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಚಿತ್ರಕ್ಕೆ ಮನರಂಜನಾ ತೆರಿಗೆ ವಿನಾಯಿತಿ ನೀಡಿದ್ದಕ್ಕಾಗಿ ಚೌಹಾಣ್ ಅವರಿಗೆ ಧನ್ಯವಾದ ಅರ್ಪಿಸುತ್ತಾ, ಅಗ್ನಿಹೋತ್ರಿ, ನಾನು ಭೋಪಾಲ್‌ನವನು. ಚಿತ್ರದಲ್ಲಿ ಕಾಣಿಸಿಕೊಂಡಿರುವ ಅವರ ಪತ್ನಿ ಮತ್ತು ನಟಿ ಪಲ್ಲವಿ ಜೋಶಿ ಇಂದೋರ್‌ಗೆ ಸೇರಿದವರು ಎಂದು ಹೇಳಿದರು.

ಇದನ್ನೂ ಓದಿ: ಯೋಗಿ ಆದಿತ್ಯನಾಥ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ್ದು ಸಮಾಜವಾದಿ ಪಾರ್ಟಿ ನಿರ್ಮಿಸಿದ ಕ್ರೀಡಾಂಗಣದಲ್ಲಿ: ಅಖಿಲೇಶ್ ಯಾದವ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ