AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಧವ್ ಠಾಕ್ರೆಯನ್ನು ಹೊಗಳಿದ ಕೆಸಿಆರ್, ಭಾನುವಾರದ ಭೋಜನಕ್ಕೆ ತೆಲಂಗಾಣ ಸಿಎಂಗೆ ಠಾಕ್ರೆ ಆಹ್ವಾನ

"ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ, ಅದನ್ನು ಮುಂದುವರಿಸಿ. ಹಮ್ ಆಪ್ಕೆ ಸಾಥ್ ಹೈ (ನಾವು ನಿಮ್ಮೊಂದಿಗಿದ್ದೇವೆ)."ಎಂದು ಉದ್ಧವ್ ಠಾಕ್ರೆಯವರಲ್ಲಿ ಕೆಎಸಿಆರ್ ಹೇಳಿರುವುದಾಗಿ ತೆಲಂಗಾಣ ಮುಖ್ಯಮಂತ್ರಿಯವರ ಕಚೇರಿ ಹೇಳಿದೆ.

ಉದ್ಧವ್ ಠಾಕ್ರೆಯನ್ನು ಹೊಗಳಿದ ಕೆಸಿಆರ್, ಭಾನುವಾರದ ಭೋಜನಕ್ಕೆ ತೆಲಂಗಾಣ ಸಿಎಂಗೆ ಠಾಕ್ರೆ ಆಹ್ವಾನ
ಕೆಸಿಆರ್- ಉದ್ಧವ್ ಠಾಕ್ರೆ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Feb 16, 2022 | 2:39 PM

Share

ದೆಹಲಿ: 2024 ರ ಚುನಾವಣೆಗೆ ಮುಂಚಿತವಾಗಿ ಬಿಜೆಪಿ (BJP) ವಿರುದ್ಧ ವಿರೋಧ ಪಡೆಗಳನ್ನು ಒಟ್ಟುಗೂಡಿಸುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್(K Chandrasekhara Rao) ಅವರು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ (Uddhav Thackeray) ಅವರ ಭೋಜನಕೂಟದ ಆಹ್ವಾನ ಸ್ವೀಕರಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಬುಧವಾರ ಬೆಳಿಗ್ಗೆ ಕೆಸಿಆರ್ ಅವರಿಗೆ ಕರೆಮಾಡಿ ಭಾನುವಾರ (ಫೆಬ್ರವರಿ 20) ಮುಂಬೈನಲ್ಲಿ ಊಟಕ್ಕೆ ಆಹ್ವಾನಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. “ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ, ಅದನ್ನು ಮುಂದುವರಿಸಿ. ಹಮ್ ಆಪ್ಕೆ ಸಾಥ್ ಹೈ (ನಾವು ನಿಮ್ಮೊಂದಿಗಿದ್ದೇವೆ).”ಎಂದು ಉದ್ಧವ್ ಠಾಕ್ರೆಯವರಲ್ಲಿ ಕೆಎಸಿಆರ್ ಹೇಳಿರುವುದಾಗಿ ತೆಲಂಗಾಣ ಮುಖ್ಯಮಂತ್ರಿಯವರ ಕಚೇರಿ ಹೇಳಿದೆ.  “ಬಿಜೆಪಿಯ ಆಪಾದಿತ ಜನವಿರೋಧಿ ನೀತಿಗಳ ವಿರುದ್ಧ ಮತ್ತು ಒಕ್ಕೂಟದ ಮನೋಭಾವವನ್ನು ಎತ್ತಿಹಿಡಿಯಲು ಕೆಸಿಆರ್ ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ” ಇದೆ ಎಂದು ಠಾಕ್ರೆ ಹೇಳಿದ್ದಾರೆ. “ದೇಶವನ್ನು ವಿಭಜಕ ಶಕ್ತಿಗಳಿಂದ ರಕ್ಷಿಸಲು ಸರಿಯಾದ ಸಮಯದಲ್ಲಿ ಧ್ವನಿ ಎತ್ತಿದ್ದಕ್ಕಾಗಿ” ಕೆಸಿಆರ್‌ ಅವರನ್ನು ಠಾಕ್ರೆ ಶ್ಲಾಘಿಸಿದ್ದಾರೆ. ಕೆಸಿಆರ್ ಅವರು ಬಿಜೆಪಿ ವಿರೋಧಿ ಶಕ್ತಿಗಳನ್ನು ಒಟ್ಟುಗೂಡಿಸಲು ತಮ್ಮ ಮಿಷನ್ 2024 ರಲ್ಲಿ ವಿವಿಧ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ ಮತ್ತು ಆ ನಾಯಕರಿಗೆ ಫೋನ್ ಮಾಡುತ್ತಿದ್ದಾರೆ. ಕಳೆದ ವಾರ, ಮುಖ್ಯಮಂತ್ರಿ ಠಾಕ್ರೆ ಅವರನ್ನು ಭೇಟಿ ಮಾಡಲು ಮುಂಬೈಗೆ ಹೋಗುವುದಾಗಿ ಹೇಳಿದ್ದರು. ಶಿವಸೇನೆಯು ದಶಕಗಳ ಪಾಲುದಾರಿಕೆಯ ನಂತರ 2019 ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿತ್ತು. ಮಂಗಳವಾರ ಕೆಸಿಆರ್ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಂದ ಬೆಂಬಲ ಪಡೆದಿದ್ದಾರೆ. ಗೌಡ ಅವರನ್ನು ಕರೆದು “ಕೋಮುವಾದಿ” ಶಕ್ತಿಗಳ ವಿರುದ್ಧದ ಹೋರಾಟಕ್ಕೆ ಅವರ ಜನತಾ ದಳ (ಜಾತ್ಯತೀತ) ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ಎನ್​​ಡಿಟಿವಿಗೆ ತಿಳಿಸಿವೆ. ಬೆಂಗಳೂರಿನಲ್ಲಿ ಅವರನ್ನು ಭೇಟಿ ಮಾಡುವುದಾಗಿ ಕೆಸಿಆರ್ ಗೌಡರಿಗೆ ತಿಳಿಸಿದರು.

ಕಳೆದ ಕೆಲವು ವಾರಗಳಲ್ಲಿ ರಾವ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಇತರರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ.

ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಹೈದರಾಬಾದ್‌ಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ. “ಗವರ್ನರ್‌ಗಳು ಅಧಿಕಾರ ದುರುಪಯೋಗ”ದ ಆರೋಪದ ಮೇಲೆ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಟ್ಟುಗೂಡಿಸಲು ಬ್ಯಾನರ್ಜಿ ಈಗಾಗಲೇ ಯೋಜಿಸುತ್ತಿದ್ದಾರೆ.

ಕೆಸಿಆರ್ ಜೊತೆ ಮಮತಾ ಫೋನ್ ನಲ್ಲಿ ಮಾತನಾಡಿದ್ದಾರೆ.

ಬಿಜೆಪಿಯ “ಬಿ-ಟೀಮ್” ಎಂಬ ಹಣೆಪಟ್ಟಿಯೊಂದಿಗೆ ಯಾವಾಗಲೂ ಹೋರಾಡುವ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸಂಸತ್ತಿನಲ್ಲಿ ಪ್ರಮುಖ ಶಾಸನಗಳ ಬಗ್ಗೆ ಆಡಳಿತ ಪಕ್ಷವನ್ನು ಬೆಂಬಲಿಸಿದ ಕೆಸಿಆರ್, ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಟೀಕೆಗಳನ್ನು ಮತ್ತಷ್ಟು ಜಾಸ್ತಿ ಮಾಡದ್ದಾರೆ.

ಈ ತಿಂಗಳ ಆರಂಭದಲ್ಲಿ, ಸಂತ ರಾಮಾನುಜಾಚಾರ್ಯರ ಪ್ರತಿಮೆ ಉದ್ಘಾಟನೆಗೆ ಪ್ರಧಾನಿ ಮೋದಿ ಹೈದರಾಬಾದ್‌ಗೆ ಭೇಟಿ ನೀಡಿದಾಗ, ಪ್ರಧಾನಿ “ಚುನಾವಣೆಗಾಗಿ ಡ್ರೆಸ್ ಮಾಡುತ್ತಾರೆ” ಮತ್ತು ಅವರ ಬಜೆಟ್ ಎಲ್ಲಾ “ಸತ್ವವಿಲ್ಲದ ಶೈಲಿ” ಎಂದು ಕೆಸಿಆರ್ ವ್ಯಂಗ್ಯವಾಡಿದ್ದರು.

“ಚುನಾವಣಾ ಕಾಲವಾದರೆ ಗಡ್ಡ ಬಿಟ್ಟು  ರವೀಂದ್ರನಾಥ ಠಾಗೋರರಂತೆ ಕಾಣಿಸಿಕೊಳ್ಳಬೇಕು ಅರೇ ಬಾಪ್ ರೇ ತಮಿಳುನಾಡಾದರೆ ಲುಂಗಿ ತೊಡಬೇಕು ಇದೇನಿದು?… ದೇಶಕ್ಕೆ ಏನು ಸಿಗುತ್ತದೆ. ಈ ತರಹದ ಗಿಮಿಕ್ ಗಳಿಂದ ದೇಶಕ್ಕೆ ಏನು ಸಿಗುತ್ತೆ, ಪಂಜಾಬ್ ಚುನಾವಣೆಯ ವೇಳೆ ಪಗ್ಡಿ(ಟರ್ಬನ್) ಹಾಕಿಕೊಳ್ಳುತ್ತಾರೆ.ಮಣಿಪುರದಲ್ಲಿ ಮಣಿಪುರಿ ಕ್ಯಾಪ್, ಉತ್ತರಾಖಂಡ್ ನಲ್ಲಿ ಮತ್ತೊಂದು ಟೋಪಿ(ಕ್ಯಾಪ್) ಈ ರೀತಿಯ ಎಷ್ಟು ಕ್ಯಾಪ್ ಗಳು?” ಎಂದು ಕೆಸಿಆರ್ ವ್ಯಂಗ್ಯವಾಡಿದ್ದರು.

2023 ರಲ್ಲಿ ಮತ ಚಲಾಯಿಸುವ ತೆಲಂಗಾಣವು ಪಕ್ಷದ ಮುಂದಿನ ಗುರಿಯಾಗಲಿದೆ ಎಂದು ಕೆಸಿಆರ್ ಅವರು ಬಿಜೆಪಿಯ ಮೇಲಿನ ದಾಳಿಯನ್ನು ಹೆಚ್ಚಿಸಿದ್ದಾರೆ ಎಂದು ಮೂಲಗಳು ಹೇಳುತ್ತವೆ. ರಾಜ್ಯದಲ್ಲಿ ಬಿಜೆಪಿ ತನ್ನ ಹಿಂದಿನ ಭದ್ರ ಕೋಟೆಗಳಲ್ಲಿ ಕಾಂಗ್ರೆಸ್ ಅನ್ನು ಮಣಿಸಿರುವುದು ಟಿಆರ್‌ಎಸ್‌ಗೆ ಆತಂಕ ತಂದಿದೆ.

ಕೆಸಿಆರ್ ಅವರು ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದಾರೆಂದು ಕಂಡುಬಂದಿದೆ, ಆದರೂ ಅವರು ಇತ್ತೀಚೆಗೆ ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿ ಅಲ್ಲ ಎಂದಿದ್ದರು.

ಇದನ್ನೂ ಓದಿ:Ravidas Jayanti ರವಿದಾಸ್ ಜಯಂತಿ ಪ್ರಯುಕ್ತ ರವಿದಾಸ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನರೇಂದ್ರ ಮೋದಿ; ವಿಡಿಯೊ ನೋಡಿ

Published On - 2:39 pm, Wed, 16 February 22

Follow Us
TV9 Web
TV9 Web

TV9 Kannada

Read More
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ