19 ದಿನವಾದ್ರೂ ರಚನೆಯಾಗದ ಸರ್ಕಾರ, ರಾಜ್ಯಪಾಲರಿಂದ ಶಿವಸೇನೆಗೆ ಆಹ್ವಾನ

19 ದಿನವಾದ್ರೂ ರಚನೆಯಾಗದ ಸರ್ಕಾರ, ರಾಜ್ಯಪಾಲರಿಂದ ಶಿವಸೇನೆಗೆ ಆಹ್ವಾನ

ಮುಂಬೈ: ಒಂದಲ್ಲ.. ಎರಡಲ್ಲ.. ಬರೋಬ್ಬರಿ 18 ದಿನಗಳು ಮುಗಿದ್ವು.. 19ನೇ ದಿನ ಶುರುವಾಗಿದೆ. ಆ ಒಂದೊಂದು ದಿನವೂ ಹೈಡ್ರಾಮಾ.. ಹಗ್ಗಜಗ್ಗಾಟ.. ಸರ್ಕಸ್.. ಕಂಡರಿಯದ ಬಿಕ್ಕಟ್ಟಿನ ಮಧ್ಯೆಯೇ ಮಹಾರಾಷ್ಟ್ರ ರಾಜ್ಯ ರಾಜಕೀಯ ಈಗ ರಣರೋಚಕ ಹಂತಕ್ಕೆ ಬಂದು ನಿಂತಿದೆ. ಯಾರೂ ನಿರೀಕ್ಷೆ ಮಾಡದಂತಾ ಹೊಸ ಬೆಳವಣಿಗೆಗಳು ನಡೆಯುತ್ತಿವೆ.

ಶಿವಸೇನೆಗೆ ಸರ್ಕಾರ ರಚಿಸಲು ಗವರ್ನರ್ ಆಹ್ವಾನ: ಮಹಾರಾಷ್ಟ್ರ ರಾಜಕಾರಣ ಈಗ ರಣರೋಚಕ ಘಟ್ಟ ತಲುಪಿದೆ. ಹಿಂದೆಂದೂ ಕಂಡರಿಯದ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಈ ರಾಜಕೀಯ ಹೈಡ್ರಾಮಾದಲ್ಲಿ ಬಿಜೆಪಿ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟಿದೆ. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಎರಡನೇ ಅತಿದೊಡ್ಡ ಪಕ್ಷ ಶಿವಸೇನೆಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಇಂದು ಸಂಜೆ 7.30ರ ಒಳಗಾಗಿ ನಿಮ್ಮ ನಿರ್ಧಾರ ತಿಳಿಸಿ ಅಂತಾ ಸ್ಪಷ್ಟವಾಗಿ ಹೇಳಿದೆ.

ನಮ್ಮ ಪಕ್ಷ ಸರ್ಕಾರ ರಚಿಸಲ್ಲವೆಂದ ಕಮಲ ನಾಯಕರು! ಇದಕ್ಕೂ ಮೊದಲು ಮಹಾರಾಷ್ಟ್ರ ರಾಜ್ಯಪಾಲರು ಅತಿದೊಡ್ಡ ಪಕ್ಷ ಬಿಜೆಪಿಗೆ ಸರ್ಕಾರ ರಚಿಸುವಂತೆ ಆಹ್ವಾನ ಕೊಟ್ಟಿದ್ರು. ಆದ್ರೆ, ಚುನಾವಣಾ ಪೂರ್ವ ಮೈತ್ರಿ ಮಾಡ್ಕೊಂಡಿದ್ದ ಬಿಜೆಪಿ-ಶಿವಸೇನೆ ಮಧ್ಯೆ ಹೊಂದಾಣಿಕೆ ರಾಜಕೀಯ ಉಲ್ಟಾ ಹೊಡೆಯಿತು. ನಿನ್ನೆ ಸ್ಪಷ್ಟನೆ ನೀಡಿದ ಬಿಜೆಪಿ ನಾಯಕರು, ನಮ್ಮ ಪಕ್ಷ ಸರ್ಕಾರ ರಚಿಸಲ್ಲ ಅಂತಾ ಹೇಳಿದೆ.

ಹೀಗಾಗಿ, ರಾಜ್ಯಪಾಲರು ಶಿವಸೇನೆಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಆದ್ರೀಗ ಶಿವಸೇನೆಗೆ ದೊಡ್ಡ ಸವಾಲು ಎದುರಾಗಿದೆ. ಯಾಕಂದ್ರೆ, ಶಿವಸೇನೆಗೂ ಸರ್ಕಾರ ರಚನೆಯ ಹಾದಿ ಅಷ್ಟು ಸುಗಮವಾಗಿಲ್ಲ.. ಒಂದ್ ವೇಳೆ, ಶಿವಸೇನೆ ನಾಯಕರು ಸರ್ಕಾರ ರಚಿಸಲೇಬೇಕಾದ್ರೆ ಎನ್​ಸಿಪಿ ಮತ್ತು ಕಾಂಗ್ರೆಸ್ ಬೆಂಬಲ ಬೇಕೇ ಬೇಕು. ಯಾಕಂದ್ರೆ, ಮೂರು ಪಕ್ಷಗಳು ಸೇರಿದ್ರಷ್ಟೇ ಅಗತ್ಯ ಬಲ ಸಿಗಲಿದೆ.

ಮಹಾರಾಷ್ಟ್ರ ವಿಧಾನಸಭೆ ಒಟ್ಟು 288 ಸಂಖ್ಯಾಬಲ ಹೊಂದಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 145. ಒಂದ್ ವೇಳೆ, ಶಿವಸೇನೆ, ಎನ್​ಸಿಪಿ, ಕಾಂಗ್ರೆಸ್ ಹೊಂದಾಣಿಕೆ ಮಾಡ್ಕೊಂಡಿದ್ದೇ ಆದಲ್ಲಿ ಮೂರೂ ಪಕ್ಷಗಳ ಬಲ 154 ಆಗಲಿದೆ. ಆಗ ಸುಲಭವಾಗಿ ಸರ್ಕಾರ ರಚನೆ ಮಾಡ್ಬಹುದು. ಬಿಜೆಪಿ 105ಸೀಟ್ ಗೆದ್ದು ಅತಿದೊಡ್ಡ ಪಕ್ಷ ಸ್ಥಾನದಲ್ಲಿದೆ.

ಎನ್​ಡಿಎ ಮೈತ್ರಿಕೂಟದಿಂದ ಹೊರಬಂದ್ರಷ್ಟೇ ಸಾಥ್! ರಾಜ್ಯಪಾಲರು ಆಹ್ವಾನ ನೀಡುತ್ತಿದ್ದಂತೆ ಶಿವಸೇನೆ ನಾಯಕರು ಸಭೆ ನಡೆಸಿ ಚರ್ಚೆ ಮಾಡಿದ್ರು. ಇಂದು ಉದ್ಧವ್ ಠಾಕ್ರೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಎನ್​ಸಿಪಿ, ಕಾಂಗ್ರೆಸ್ ಜತೆ ಶಿವಸೇನೆ ಮೈತ್ರಿ ಮಾಡಿಕೊಳ್ಳೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಆದ್ರೆ, ಈ ಬಗ್ಗೆ ಮಾತನಾಡಿರೋ ಎನ್​ಸಿಪಿ ಮುಖ್ಯಸ್ಥ, ಎನ್‌ಡಿಎ ಮೈತ್ರಿಯಿಂದ ಹೊರಬಂದ್ರೆ ಬೆಂಬಲ ನೀಡುತ್ತೇವೆ ಅಂತಾ ಘೋಷಿಸಿದ್ದಾರೆ.

ಇದೇ ವಿಚಾರವಾಗಿ ಇಂದು ಶಿವಸೇನೆ ನಾಯಕರು, ಶರದ್ ಪವಾರ್ ಭೇಟಿಯಾಗಿ ಚರ್ಚೆ ಮಾಡೋ ಸಾಧ್ಯತೆಯಿದೆ. ಮತ್ತೊಂದ್ಕಡೆ, ಶಿವಸೇನೆ ನಾಯಕ ಸಂಜಯ್ ರಾವತ್, ಶಿವಸೇನೆಯಿಂದ ಸಿಎಂ ಆಗ್ತಾರೆ ಅಂತಾ ಹೇಳಿ ಸಂಚಲನ ಮೂಡಿಸಿದ್ದಾರೆ. ಮತ್ತೊಂದ್ಕಡೆ, ಕಾಂಗ್ರೆಸ್ ಕುದುರೆ ವ್ಯಾಪಾರ ಆಗ್ಬಹುದು ಅಂತಾ ತನ್ನ ಶಾಸಕರನ್ನು ರಾಜಸ್ಥಾನದಲ್ಲಿಟ್ಟಿದೆ.. ಇದೇ ವಿಚಾರವಾಗಿ ಇಂದು ಕೈ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಚರ್ಚೆ ಮಾಡೋ ಸಾಧ್ಯತೆ ಇದೆ.

Published On - 9:52 am, Mon, 11 November 19

Click on your DTH Provider to Add TV9 Kannada