ಸರ್ಕಾರಿ ಶಾಲೆಯಲ್ಲಿ ಬಾಡಿಗೆ ವಿದ್ಯಾರ್ಥಿಗಳು, ಮದ್ಯದ ಬಾಟಲಿ ಪತ್ತೆ: ಮಹಾರಾಷ್ಟ್ರದಲ್ಲಿ ಸಿಜೆಪಿ ನಾಯಕನ ರಿಯಾಲಿಟಿ ಚೆಕ್

ಮಹಾರಾಷ್ಟ್ರದ ಸರ್ಕಾರಿ ಶಾಲೆಯಲ್ಲಿ ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ದಿಢೀರ್ ತಪಾಸಣೆ ನಡೆಸಿ, ಶಾಕಿಂಗ್ ಸಂಗತಿಗಳನ್ನು ಬಯಲಿಗೆಳೆದಿದ್ದಾರೆ. ತರಗತಿಗಳನ್ನು ತುಂಬಿಸಲು "ಬಾಡಿಗೆ" ವಿದ್ಯಾರ್ಥಿಗಳು, ಶಾಲಾ ಆವರಣದಲ್ಲಿ ಮದ್ಯದ ಬಾಟಲಿಗಳು, ಸೋರುವ ಛಾವಣಿ ಮತ್ತು ಶೌಚಾಲಯ-ನೀರಿನ ಕೊರತೆ ಕಂಡುಬಂದಿದೆ. ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ "ಸ್ಕೂಲ್ ಠೀಕ್ ಕರೋ" ಅಭಿಯಾನ ಕೈಗೊಂಡಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಬಾಡಿಗೆ ವಿದ್ಯಾರ್ಥಿಗಳು, ಮದ್ಯದ ಬಾಟಲಿ ಪತ್ತೆ: ಮಹಾರಾಷ್ಟ್ರದಲ್ಲಿ ಸಿಜೆಪಿ ನಾಯಕನ ರಿಯಾಲಿಟಿ ಚೆಕ್
ಶಾಲೆ

Updated on: Aug 21, 2026 | 12:37 PM

ಮುಂಬೈ, ಆಗಸ್ಟ್​ 21: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸಾ ಭಾಗದಲ್ಲಿರುವ  ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಶಾಲಾ ಆವರಣದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿರುವುದು ಸೇರಿದಂತೆ ತರಗತಿಗಳನ್ನು ತುಂಬಿಸಲು ಹೊರಗಿನಿಂದ ವಿದ್ಯಾರ್ಥಿಗಳನ್ನು ಕರೆತರಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ‘ಸ್ಕೂಲ್ ಠೀಕ್ ಕರೋ’ ಅಂದರೆ ಶಾಲೆಗಳನ್ನು ಸರಿಪಡಿಸಿ ಎಂಬ ಸಾಮಾಜಿಕ ಅಭಿಯಾನದ ಭಾಗವಾಗಿ ಈ ಪರಿಶೀಲನೆ ನಡೆಸಿದ ಅವರು, ರಾಜ್ಯ ಶಾಲಾ ಶಿಕ್ಷಣ ಸಚಿವ ದಾದಾ ಭೂಸೆ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ತಪಾಸಣೆ ವೇಳೆ ತರಗತಿಗಳಲ್ಲಿ ಹಾಜರಾತಿ ಹೆಚ್ಚಿಸಲು ಇತರ ಶಾಲೆಗಳಿಂದ ಮಕ್ಕಳನ್ನು ಕರೆತಂದು ಕೂರಿಸಲಾಗಿತ್ತು ಎಂದು ದೀಪ್ಕೆ ಆರೋಪಿಸಿದ್ದಾರೆ. ವಿಡಿಯೋ ಸಂವಾದದಲ್ಲಿ ಕೆಲ ಮಕ್ಕಳು ತಾವು ಆ ಶಾಲೆಯವರಲ್ಲ ಎಂದು ಹೇಳಿರುವುದು ದಾಖಲಾಗಿದೆ.

ಮತ್ತಷ್ಟು ಓದಿ: ‘ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ’; ಕಾಕ್ರೋಚ್ ವಿವಾದಕ್ಕೆ ಸಿಜೆಐ ಸೂರ್ಯಕಾಂತ್ ಬೇಸರ

ಶಾಲಾ ಆವರಣದೊಳಗೆ ಮದ್ಯದ ಖಾಲಿ ಬಾಟಲಿಗಳು ಬಿದ್ದಿದ್ದು, ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಸಂಶಯ ವ್ಯಕ್ತಪಡಿಸಿದ್ದಾರೆ. ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಸುಸಜ್ಜಿತ ಶೌಚಾಲಯಗಳಿಲ್ಲ. ತಪಾಸಣೆಯ ಸುದ್ದಿ ತಿಳಿದು ಕೇವಲ ಪ್ರದರ್ಶನಕ್ಕಾಗಿ ಹೊಸ ಊಟದ ತಟ್ಟೆಗಳನ್ನು ತರಲಾಗಿತ್ತು ಹಾಗೂ ಶೌಚಾಲಯಗಳನ್ನು ತರಾತುರಿಯಲ್ಲಿ ಸ್ವಚ್ಛಗೊಳಿಸಲಾಗಿತ್ತು ಎಂದು ಆರೋಪಿಸಿದರು.

ಶಾಲೆಯ ಮುಖ್ಯಶಿಕ್ಷಕ ಬಾಲಾಜಿ ಗವಾಲಿ ಈ ಆರೋಪಗಳನ್ನು ನಿರಾಕರಿಸಿದ್ದು, ಒಂದೇ ಕಟ್ಟಡದಲ್ಲಿ ಮರಾಠಿ ಮತ್ತು ಉರ್ದು ಮಾಧ್ಯಮದ ಎರಡು ಶಾಲೆಗಳು ನಡೆಯುತ್ತಿವೆ. ಹಾಗಾಗಿ ಹೊರಗಿನಿಂದ ಮಕ್ಕಳನ್ನು ಕರೆತಂದಿಲ್ಲ, ಅವರೆಲ್ಲರೂ ಶಾಲೆಯ ನಿಯಮಿತ ವಿದ್ಯಾರ್ಥಿಗಳು ಎಂದು ಸ್ಪಷ್ಟಪಡಿಸಿದ್ದಾರೆ.

ಪೋಸ್ಟ್​

ಮಕ್ಕಳು ಎಂದಿನಂತೆ ಶಾಲೆಯ ತಟ್ಟೆಗಳಲ್ಲೇ ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಾರೆ ಎಂದು ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ, ಸುರಕ್ಷತೆ, ಮಧ್ಯಾಹ್ನದ ಊಟ, ಶೌಚಾಲಯ ನಿರ್ವಹಣೆ, ಕುಡಿಯುವ ನೀರು ಹಾಗೂ ಸಾರಿಗೆ ಸೌಲಭ್ಯಗಳನ್ನು ಪರಿಶೀಲಿಸಲು ಸಿಜೆಪಿ 10 ಅಂಶಗಳ ಆಡಿಟ್ ಮಾದರಿಯನ್ನು ರೂಪಿಸಿದೆ.

8 ದಿನಗಳ ಡೆಡ್‌ಲೈನ್: ನಿರ್ಲಕ್ಷ್ಯ ವಹಿಸಿರುವ ಬ್ಲಾಕ್ ಶಿಕ್ಷಣ ಅಧಿಕಾರಿಗಳನ್ನು (BEO) 8 ದಿನಗಳಲ್ಲಿ ಅಮಾನತು ಮಾಡಬೇಕು ಮತ್ತು ಸರ್ಕಾರಿ ಶಾಲೆಗಳ ಸೋರುವ ಛಾವಣಿ ಹಾಗೂ ಬೆಂಚುಗಳ ಕೊರತೆಯನ್ನು ತಕ್ಷಣವೇ ಸರಿಪಡಿಸಬೇಕು ಎಂದು ಸರ್ಕಾರಕ್ಕೆ ಗಡುವು ನೀಡಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us