ಮಹಾರಾಷ್ಟ್ರ: ಮಂಗ ಇರುವುದು ಕಂಡು ಟ್ರಾನ್ಸ್‌ಫಾರ್ಮರ್‌ ಹತ್ತಿದ ಚಿರತೆ, ವಿದ್ಯುತ್ ಸ್ಪರ್ಶಿಸಿ ಸಾವು

ಟ್ರಾನ್ಸ್‌ಫಾರ್ಮರ್​ ಮೇಲೆ ಹತ್ತಿದ್ದ ಚಿರತೆಯೊಂದು ಬಳಿಕ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ. ಮಂಗ ಕುಳಿತಿರುವುದನ್ನು ಕಂಡ ಚಿರತೆ ಟ್ರಾನ್ಸ್‌ಫಾರ್ಮರ್‌ಗೆ ಹತ್ತಿದೆ ಎನ್ನಲಾಗಿದೆ. ಕೋತಿಯನ್ನು ಬೇಟೆಯಾಡಲು ಯತ್ನಿಸಿದ್ದು, ವಿದ್ಯುತ್ ಸ್ಪರ್ಶದಿಂದ ಇಬ್ಬರೂ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರ: ಮಂಗ ಇರುವುದು ಕಂಡು ಟ್ರಾನ್ಸ್‌ಫಾರ್ಮರ್‌ ಹತ್ತಿದ ಚಿರತೆ, ವಿದ್ಯುತ್ ಸ್ಪರ್ಶಿಸಿ ಸಾವು
ಚಿರತೆ
Image Credit source: India Today

Updated on: Nov 05, 2023 | 10:00 AM

ಟ್ರಾನ್ಸ್‌ಫಾರ್ಮರ್​ ಮೇಲೆ ಹತ್ತಿದ್ದ ಚಿರತೆಯೊಂದು ಬಳಿಕ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.
ಮಂಗ ಕುಳಿತಿರುವುದನ್ನು ಕಂಡ ಚಿರತೆ ಟ್ರಾನ್ಸ್‌ಫಾರ್ಮರ್‌ಗೆ ಹತ್ತಿದೆ ಎನ್ನಲಾಗಿದೆ. ಕೋತಿಯನ್ನು ಬೇಟೆಯಾಡಲು ಯತ್ನಿಸಿದ್ದು, ವಿದ್ಯುತ್ ಸ್ಪರ್ಶದಿಂದ ಇಬ್ಬರೂ ಸಾವನ್ನಪ್ಪಿದ್ದಾರೆ.

ಸಿಂಧೇವಾಹಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಯ ತಂಡಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸ್ಪರ್ಶದಿಂದ ಪ್ರಾಣಿಗಳು ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದಾರೆ. ಚಿರತೆಯನ್ನು ಅಧಿಕಾರಿಗಳು ಟ್ರಾನ್ಸ್‌ಫಾರ್ಮರ್‌ನಿಂದ ಕೆಳಗಿಳಿಸಿದರು.

ಮತ್ತಷ್ಟು ಓದಿ: ಬೆಂಗಳೂರು ಚಿರತೆ ಸಾವು ಪ್ರಕರಣ: ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ, ಪ್ರಶ್ನೆಗಳ ಸುರಿಮಳೆ

ಬೆಂಗಳೂರಿನಲ್ಲಿ ಸೆರೆಸಿಕ್ಕ ಚಿರತೆ ಸಾವು
ಬೆಂಗಳೂರಿನ ಬೊಮ್ಮನಹಳ್ಳಿ ಭಾಗದ ಹೊಸೂರು ರಸ್ತೆ ಕೂಡ್ಲುಗೇಟ್ ಬಳಿಯ ಎಇಸಿಎಸ್‌( AECS) ಲೇಔಟ್ ನಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು.

ಸತತ 72 ಗಂಟೆ ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ವಿವಿಧ ತಂಡಗಳು ಕೊನೆಗೂ ಚಿರತೆಯನ್ನು ಪಾಳುಬಿದ್ದ ಕಟ್ಟಡದಲ್ಲಿಯೇ ಜೀವಂತವಾಗಿ ಹಿಡಿದಿವೆ. ಗಂಡು ಚಿರತೆ ಹತ್ತು ವರ್ಷವಾಗಿದ್ದು, ತೀವ್ರವಾಗಿ ಗಾಯಗೊಂಡಿತ್ತು. ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ಹತ್ತು ವರ್ಷದ ಗಂಡು ಚಿರತೆ. ಬನ್ನೇರುಘಟ್ಟ ಜೈವಿಕ ಉದ್ಯಾನದ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದಲ್ಲಿ ಮೃತಪಟ್ಟಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us