ಆಸ್ಪತ್ರೆಯಲ್ಲಿ ಶಾಂತಿಯಿಂದಿರಲು ಹೇಳಿದ್ದಕ್ಕೆ ವೈದ್ಯರನ್ನೇ ಚಾಕುವಿನಿಂದ ಚುಚ್ಚಲು ಹೊರಟ ವ್ಯಕ್ತಿ
ವೈದ್ಯ ಆಸ್ಪತ್ರೆಯಲ್ಲಿ ಶಾಂತಿಯಿಂದಿರಲು ಹೇಳಿದ್ದಕ್ಕೆ ವೈದ್ಯರನ್ನೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮುಂಬೈ: ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ವ್ಯಕ್ತಿಯನ್ನು ಮಹಾರಾಷ್ಟ್ರದ ನಂದೇಡ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೋ ಮೂಲಕ ಆರೋಪಿಯನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭೌಸಾಹೇಬ್ ಗೇಕ್ವಾಡ್ ಅವರು ಏಪ್ರಿಲ್ 20ರಂದು ನಂದೇಡ್ನ ಜಿಲ್ಲಾ ಆಸ್ಪತ್ರೆಯ ಕೊವಿಡ್ ವಾರ್ಡ್ನಲ್ಲಿ ದಾಖಲಾದ ತಮ್ಮ ಸಂಬಂಧಿಯನ್ನು ನೋಡಲೆಂದು ಹೋಗಿದ್ದರು. ಆಸ್ಪತ್ರೆಯಲ್ಲಿದ್ದಾಗ ಅವರು ಜೋರಾಗಿ ಮಾತನಾಡಲು ಪ್ರಾರಂಭಿಸಿದರು. ಇದರಿಂದಾಗಿ ಇತರ ರೋಗಿಗಳ ಕುಟುಂಬಸ್ಥರು ಈ ಕುರಿತಂತೆ ಆಕ್ಷೇಪಿಸಿದರು. ಇದರಿಂದಾಗಿ ಗೇಕ್ವಾಡ್ ಅವರು ವೈದ್ಯರ ಬಳಿ ಈ ಕುರಿತಂತೆ ಜೋರಾಗಿ ಮಾತನಾಡುತ್ತಾ, ಉಳಿದ ರೋಗಿಗಳ ಸಂಬಂಧಿಕರ ಬಳಿ ಜಗಳವಾಡಲು ಪ್ರಾರಂಭಿಸಿದರು.
ಗೇಕ್ವಾಡ್, ಚಾಕುವನ್ನು ಹಿಡಿದು ವೈದ್ಯರ ಮೇಲೆ ಹಲ್ಲೆ ಮಾಡಲು ಮುಂದಾದರು. ತಕ್ಷಣವೇ ಅಸ್ಪತ್ರೆಯ ಸಿಬ್ಬಂದಿ ಆರೋಪಿಯನ್ನು ತಡೆ ಹಿಡಿದಿದ್ದಾರೆ. ಹಗರಣದಲ್ಲಿ ವೈದ್ಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬುದು ತಿಳಿದು ಬಂದಿದೆ. ನಂತರ ವೈದ್ಯರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತಂತೆ ಕೊಲೆ ಯತ್ನ ಮಾಡಿರುವ ಗೇಕ್ವಾಡ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಇತರ ಜಿಲ್ಲೆಗಳಂತೆಯೇ ನಾಂದೇಡ್ ಜಿಲ್ಲೆ ಕೂಡಾ ಕೊವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅತಿ ಹೆಚ್ಚು ಹಾನಿಗೊಳಗಾದ ಮಹಾರಾಷ್ಟ್ರವು ಶೇ.16.36ರಷ್ಟು ಪಾಸಿಟಿವ್ ಪ್ರಕರಣಗಳನ್ನು ವರದಿ ಮಾಡಿದೆ. ಪ್ರಸ್ತುತದಲ್ಲಿ ಒಟ್ಟು 40,27,827 ಪ್ರಕರಣಗಳು ವರದಿಯಾಗಿದೆ.
ಇದನ್ನೂ ಓದಿ: ಕೊವಿಡ್ ಲಸಿಕೆ ಕೊರತೆ: ಮಹಾರಾಷ್ಟ್ರಕ್ಕೆ 17 ಲಕ್ಷ ಡೋಸ್ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧಾರ