ಮೇಘಾಲಯದಲ್ಲಿ ಕಾಂಗ್ರೆಸ್​ಗೆ ಇನ್ನೊಂದು ಆಘಾತ; ದೋಷ ಹೇಳಿದರೆ ನಿಂದಿಸುತ್ತಾರೆಂದು ಪಕ್ಷ ತೊರೆದ ಯುವ ಘಟಕ ಅಧ್ಯಕ್ಷ

ಕಾಂಗ್ರೆಸ್​ನ ಕಾರ್ಯವೈಖರಿಯಿಂದ ಹಲವು ದಿನಗಳಿಂದಲೂ ನಾನು ಅಸಮಾಧಾನ ಹೊಂದಿದ್ದೇನೆ. ಈ ಪಕ್ಷದಲ್ಲಿ ರಚನಾತ್ಮಕ ದೋಷವಿದೆ ಎಂದು ಮರಕ್​ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೇಘಾಲಯದಲ್ಲಿ ಕಾಂಗ್ರೆಸ್​ಗೆ ಇನ್ನೊಂದು ಆಘಾತ; ದೋಷ ಹೇಳಿದರೆ ನಿಂದಿಸುತ್ತಾರೆಂದು ಪಕ್ಷ ತೊರೆದ ಯುವ ಘಟಕ ಅಧ್ಯಕ್ಷ
ರಿಚರ್ಡ್​ ಎಂ. ಮರಕ್​

ಶಿಲ್ಲೋಂಗ್​: ಇತ್ತೀಚೆಗಷ್ಟೇ ಮೇಘಾಲಯದಲ್ಲಿ ಕಾಂಗ್ರೆಸ್​​ನ ಮುಕುಲ್​ ಸಂಗ್ಮಾ ಸೇರಿ 11 ಶಾಸಕರು ತೃಣಮೂಲ ಕಾಂಗ್ರೆಸ್​ ಸೇರ್ಪಡೆಯಾಗಿ, ಈ ಮೂಲಕ ಪಕ್ಷಕ್ಕೆ ಬಹುದೊಡ್ಡ ಆಘಾತ ನೀಡಿದ್ದರು.  ಇದೀಗ ಇನ್ನೊಂದು ಶಾಕ್​ ಆಗಿದೆ. ಮುಕುಲ್​ ಸಂಗ್ಮಾ ಆಪ್ತರಾಗಿದ್ದ ಮೇಘಾಲಯ ಕಾಂಗ್ರೆಸ್​ ಯುವ ಘಟಕದ ಅಧ್ಯಕ್ಷ ರಿಚರ್ಡ್ ಎಂ ಮರಕ್​ ಕೂಡ ಪಕ್ಷವನ್ನು ತೊರೆದಿದ್ದಾರೆ. ಕಾಂಗ್ರೆಸ್​​ನಲ್ಲಿ ರಚನಾತ್ಮಕ ದೋಷವಿದೆ ಎಂದು ಆರೋಪಿಸಿದ್ದಾರೆ.  ಮರಕ್​ ಅವರು ತಮ್ಮ ರಾಜೀನಾಮೆ ಪತ್ರವನ್ನು, ಭಾರತೀಯ ಯವ ಕಾಂಗ್ರೆಸ್​ ಅಧ್ಯಕ್ಷ ಶ್ರೀನಿವಾಸ್​ ಬಿವಿ ಅವರಿಗೆ ಸಲ್ಲಿಸಿದ್ದಾರೆ.

ಕಾಂಗ್ರೆಸ್​ನ ಕಾರ್ಯವೈಖರಿಯಿಂದ ಹಲವು ದಿನಗಳಿಂದಲೂ ನಾನು ಅಸಮಾಧಾನ ಹೊಂದಿದ್ದೇನೆ. ಈ ಪಕ್ಷದಲ್ಲಿ ರಚನಾತ್ಮಕ ದೋಷವಿದೆ ಎಂದು ಮರಕ್​ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಾನು ಪಕ್ಷದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಈ ಹಿಂದೆ ಹಲವು ಬಾರಿ ಸಂಬಂಧಪಟ್ಟವರಿಗೆ ಹೇಳಿದ್ದೇನೆ. ಆದರೆ ಅದನ್ನು ಸರಿಪಡಿಸುವ ಪ್ರಯತ್ನಗಳು ಎಲ್ಲಿಂದಲೂ ಆಗಲಿಲ್ಲ. ಅದರ ಬದಲು ದೋಷ ಹೇಳಿದವರನ್ನೇ ನಿಂದಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಇಡೀ ಮೇಘಾಲಯದಾದ್ಯಂತ ಸುಮಾರು 500 ಕಾಂಗ್ರೆಸ್ ಕಾರ್ಯಕರ್ತರು ಪಕ್ಷವನ್ನು ಬಿಟ್ಟಿದ್ದಾರೆ ಎಂದೂ ಪ್ರತಿಪಾದಿಸಿದ್ದಾರೆ.

ಅಂದಹಾಗೆ ಮೇಘಾಲಯದಲ್ಲಿ ಇಂಥದ್ದೊಂದು ಬೆಳವಣಿಗೆ ಶುರುವಾಗಿದ್ದು, ಶಿಲ್ಲಾಂಗ್​ ಸಂಸದ ವಿನ್ಸೆಂಟ್​ ಎಚ್​.ಪಾಲಾರನ್ನು ಕಾಂಗ್ರೆಸ್​ ರಾಜ್ಯಾಧ್ಯಕ್ಷನನ್ನಾಗಿ ನೇಮಕ ಮಾಡಿದ ಬಳಿಕ.  ಇತ್ತೀಚೆಗೆ 11 ಶಾಸಕರು ಪಕ್ಷ ಬಿಡಲೂ ಕೂಡ ಅದೇ ಕಾರಣವಾಗಿದ್ದು, ಈಗ ರಿಚರ್ಡ್​ ಸಹ, ವಿನ್ಸೆಂಟ್​ ನೇಮಕಾತಿಯ ಬಗ್ಗೆಯೇ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Konijeti Rosaiah Death: ಆಂಧ್ರಪ್ರದೇಶದ ಮಾಜಿ ಸಿಎಂ ಕೋನಿಜೇಟಿ ರೋಸಯ್ಯ ಇಂದು ನಿಧನ; ಕರ್ನಾಟಕದ ಮಾಜಿ ರಾಜ್ಯಪಾಲರು ಇವರು

Published On - 9:40 am, Sat, 4 December 21

Click on your DTH Provider to Add TV9 Kannada