ಕರ್ನಾಟಕದ ಒಬ್ಬರು ಸೇರಿದಂತೆ 34 ಜನರಿಗೆ ಸಚಿವ ಸ್ಥಾನದಿಂದ ಕೊಕ್? ಇಲ್ಲಿದೆ ಪಟ್ಟಿ

List of sitting ministries losing in Modi 3.0 govt: ಮೋದಿ 2.0 ಸರ್ಕಾರದಲ್ಲಿ ಸಚಿವರಾಗಿದ್ದವರ ಪೈಕಿ 34 ಜನರಿಗೆ ಮೋದಿ 3.0 ಸರ್ಕಾರದಲ್ಲಿ ಕೊಕ್ ಸಿಗುವ ಸಾಧ್ಯತೆ ಇದೆ. ಇವರಲ್ಲಿ ಪ್ರಮುಖವಾಗಿರುವವರು ರಾಜೀವ್ ಚಂದ್ರಶೇಖರ್, ಸ್ಮೃತಿ ಇರಾನಿ, ಅರ್ಜುನ್ ಮುಂಡಾ, ಅನುರಾಗ್ ಠಾಕೂರ್ ಮೊದಲಾದವರಿದ್ದಾರೆ. ಕರ್ನಾಟಕದ ಚಿತ್ರದುರ್ಗದಿಂದ ಸಂಸದರಾಗಿದ್ದ ಎ ನಾರಾಯಣಸ್ವಾಮಿ ಅವರೂ ಸಂಪುಟದಿಂದ ಹೊರಗುಳಿಯಲಿದ್ದಾರೆ.

ಕರ್ನಾಟಕದ ಒಬ್ಬರು ಸೇರಿದಂತೆ 34 ಜನರಿಗೆ ಸಚಿವ ಸ್ಥಾನದಿಂದ ಕೊಕ್? ಇಲ್ಲಿದೆ ಪಟ್ಟಿ
ರಾಜೀವ್ ಚಂದ್ರಶೇಖರ್, ಸ್ಮೃತಿ ಇರಾನಿ
Follow us
|

Updated on: Jun 09, 2024 | 5:54 PM

ನವದೆಹಲಿ, ಜೂನ್ 9: ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಸರ್ಕಾರ (Modi 3.0 Govt) ರಚಿಸುತ್ತಿದೆ. ಇಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಲವು ಸಂಸದರು ಇಂದು ಸಚಿವರಾಗಿ ಪ್ರಮಾಣ ವಚನ ಪಡೆಯಲಿದ್ದಾರೆ. ಹೊಸ ಸಂಪುಟ ಬಹುತೇಕ ಅಂತಿಮವಾಗಿದೆ. ಮಾಧ್ಯಮಗಳಲ್ಲಿ ಕೆಲ ಪಟ್ಟಿಗಳು ಚಾಲನೆಯಲ್ಲಿವೆ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಹಲವರನ್ನು ಈ ಬಾರಿ ಕೈಬಿಡಲಾಗುತ್ತಿದೆ. ಚುನಾವಣೆಯಲ್ಲಿ ಸೋಲು, ಹೊಸ ಮಿತ್ರಪಕ್ಷಗಳಿಗೆ ಸ್ಥಾನ ಕಲ್ಪಿಸುವುದು ಇತ್ಯಾದಿ ಕಾರಣಗಳಿಂದ ಹಲವರಿಗೆ ಸಚಿವ ಸ್ಥಾನ ಈ ಬಾರಿ ವಂಚಿತವಾಗುತ್ತಿದೆ. ಸ್ಮೃತಿ ಇರಾನಿ, ರಾಜೀವ್ ಚಂದ್ರಶೇಖರ್ ಮೊದಲಾದವರು ಈ ಬಾರಿ ಸಂಪುಟದಲ್ಲಿ ಸ್ಥಾನ ಪಡೆಯದೇ ಹೋಗುವ ಪ್ರಮುಖರಾಗಿದ್ದಾರೆ. ವರದಿ ಪ್ರಕಾರ 34 ಮಂದಿ ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ. ಕರ್ನಾಟಕದಿಂದ ಎ ನಾರಾಯಣಸ್ವಾಮಿ ಅವರಿಗೆ ಈ ಬಾರಿ ಕೊಕ್ ಸಿಗಲಿದೆ. ನಾರಾಯಣಸ್ವಾಮಿ ಅವರು ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು.

ಮೋದಿ 3.0 ಸರ್ಕಾರದಲ್ಲಿ ಸಚಿವ ಸ್ಥಾನ ಕಳೆದುಕೊಳ್ಳುವವರಿವರು…

  1. ಅರ್ಜುನ್ ಮುಂಡಾ, ಬುಡಕಟ್ಟು ವ್ಯವಹಾರ ಸಚಿವ
  2. ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ
  3. ಅನುರಾಗ್ ಠಾಕೂರ್: ಮಾಹಿತಿ ಮತ್ತು ಪ್ರಸರಣ; ಯುವಜನ ಮತ್ತು ಕ್ರೀಡೆ ಸಚಿವ
  4. ನಾರಾಯಣ್ ತಾಟು ರಾಣೆ: ಎಸ್​ಎಂಇ ಸಚಿವ
  5. ರಾಜಕುಮಾರ್ ಸಿಂಗ್: ವಿದ್ಯುತ್, ಮರುಬಳಕೆ ಇಂಧನ ಸಚಿವ
  6. ಮಹೇಂದ್ರನಾಥ್ ಪಾಂಡೆ: ಬೃಹತ್ ಕೈಗಾರಿಕೆಗಳ ಸಚಿವ
  7. ಪುರುಷೋತ್ತಮ್ ರೂಪಾಲ: ಮೀನುಗಾರಿಕೆ, ಪಶುಸಂಗೋಪನೆ ಸಚಿವ
  8. ಫಗ್ಗನ್ ಸಿಂಗ್ ಕುಲಸ್ತೆ: ಉಕ್ಕು ಖಾತೆ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ
  9. ಅಶ್ವಿನಿ ಕುಮಾರ್ ಚೌಬೆ: ಗ್ರಾಹಕ ವ್ಯವಹಾರಗಳು, ಸಾರ್ವಜನಿಕ ವಿತರಣೆ, ಪರಿಸರ ಖಾತೆ ರಾಜ್ಯ ಸಚಿವ
  10. ವಿ.ಕೆ. ಸಿಂಗ್: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಪರಿಸರ ಖಾತೆ ರಾಜ್ಯ ಸಚಿವ
  11. ದಾನ್ವೆ ರಾವಸಾಹೇಬ್: ರೈಲ್ವೆ ಖಾತೆ ರಾಜ್ಯ ಸಚಿವ
  12. ನಿರಂಜನ್ ಜ್ಯೋತಿ: ಗ್ರಾಹಕ ವ್ಯವಹಾರಗಳ ಖಾತೆ ರಾಜ್ಯ ಸಚಿವ
  13. ಸಂಜೀವ್ ಕುಮಾರ್ ಬಾಲ್ಯಾನ್: ಮೀನುಗಾರಿಕೆ, ಪಶುಸಂಗೋಪನೆ ಖಾತೆ ರಾಜ್ಯ ಸಚಿವ.
  14. ರಾಜೀವ್ ಚಂದ್ರಶೇಖರ್: ಕೌಶಲ್ಯ ಅಭಿವೃದ್ಧಿ ಖಾತೆ ರಾಜ್ಯ ಸಚಿವ.
  15. ಭಾನುಪ್ರತಾಪ್ ಸಿಂಗ್: ಎಂಎಸ್​ಎಂಇ ಖಾತೆ ರಾಜ್ಯ ಸಚಿವ
  16. ದರ್ಶನ ಹರ್ದೋಷ್: ಜವಳಿ ಖಾತೆ ರಾಜ್ಯ ಸಚಿವ
  17. ವಿ ಮುರಳೀಧರನ್: ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ
  18. ಮೀನಾಕ್ಷಿ ಲೇಖಿ: ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ
  19. ಸೋಮ್ ಪ್ರಕಾಶ್: ವಾಣಿಜ್ಯ ಮತ್ತು ಉದ್ಯಮ ಖಾತೆ ರಾಜ್ಯ ಸಚಿವ
  20. ಕೈಲಾಷ್ ಚೌಧರಿ: ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ
  21. ರಾಮೇಶ್ವರ್ ತೇಲಿ: ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ
  22. ಎ ನಾರಾಯಣಸ್ವಾಮಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ
  23. ಕೌಶಲ್ ಕಿಶೋರ್: ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ
  24. ಅಜಯ್ ಉಮಾರ್: ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ
  25. ಕಪಿಲ್ ಪಾಟೀಲ್: ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವ
  26. ಸುಭಾಷ್ ಸರ್ಕಾರ್: ಶಿಕ್ಷಣ ಖಾತೆ ರಾಜ್ಯ ಸಚಿವ
  27. ಪ್ರತಿಮಾ ಭೌಮಿಕ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ
  28. ಭಗವತ್ ಕರಾಡ್: ಹಣಕಾಸು ಖಾತೆ ರಾಜ್ಯ ಸಚಿವ
  29. ರಾಜಕುಮಾರ್ ರಂಜನ್ ಸಿಂಗ್: ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ
  30. ಭಾರತಿ ಪವಾರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ
  31. ಬಿಶ್ವೇಶ್ವರ್ ತುಡು: ಬುಡಕಟ್ಟು ವ್ಯವಹಾರಗಳು, ಜಲಶಕ್ತಿ ಖಾತೆ ರಾಜ್ಯ ಸಚಿವ
  32. ಡಾ. ಮುಂಜಪಾರ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರು.
  33. ಜಾನ್ ಬಾರ್ಲಾ: ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ
  34. ನಿಸಿತ್ ಪ್ರಾಮಾಣಿಕ್: ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ.

ಇದನ್ನೂ ಓದಿ: ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಚಾಮರಾಜನಗರದ ಯುವತಿಗೆ ಆಹ್ವಾನ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್
MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್
ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ