ರಸಗೊಬ್ಬರಗಳ ಪೋಷಕಾಂಶ ಆಧಾರಿತ ಸಬ್ಸಿಡಿಗೆ ಸಂಪುಟ ಅನುಮೋದನೆ; ಸಚಿವ ಕಿಶನ್ ರೆಡ್ಡಿ ಹೇಳಿದ್ದೇನು?
ರೈತರಿಗೆ ರಸಗೊಬ್ಬರಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 37,952 ಕೋಟಿ ರೂ. ಮೌಲ್ಯದ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್) ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಸಬ್ಸಿಡಿಯೊಂದಿಗೆ ರೈತರು ಕಡಿಮೆ ದರದಲ್ಲಿ ರಸಗೊಬ್ಬರಗಳನ್ನು ಪಡೆಯಬಹುದು.

ನವದೆಹಲಿ, ಅಕ್ಟೋಬರ್ 28: ದೇಶದ ರೈತರಿಗೆ ಪ್ರಧಾನಿ ಮೋದಿ (PM Modi) ನೇತೃತ್ವದ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳ ಮೇಲಿನ 2025-26ರ ಹಿಂಗಾರು ಋತುವಿಗೆ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್) ದರಗಳನ್ನು ನಿಗದಿಪಡಿಸುವ ರಸಗೊಬ್ಬರ ಇಲಾಖೆಯ ಪ್ರಸ್ತಾವನೆಯನ್ನು ಇಂದು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ರಸಗೊಬ್ಬರ ತಯಾರಿಕಾ ಕಂಪನಿಗಳಿಗೆ ರೂ. 37,952 ಕೋಟಿ ಪೌಷ್ಟಿಕ-ಆಧಾರಿತ ಸಬ್ಸಿಡಿ (NBS) ಮಂಜೂರಾತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಬ್ಸಿಡಿ 2026ರ ಮಾರ್ಚ್ 31ರವರೆಗೆ ಜಾರಿಗೆ ಬರಲಿದೆ.
2025-26ರ ಹಿಂಗಾರು ಋತುವಿಗೆ ತಾತ್ಕಾಲಿಕ ಬಜೆಟ್ ಅವಶ್ಯಕತೆ ಸುಮಾರು 37,952.29 ಕೋಟಿ ರೂ.ಗಳಾಗಿದ್ದು, ಈ ಮೊತ್ತವು 2025ರ ಖಾರಿಫ್ ಋತುವಿನ ಅಂದಾಜು ಸಬ್ಸಿಡಿಗಿಂತ ಸುಮಾರು 736 ಕೋಟಿ ರೂ.ಗಳಷ್ಟು ಹೆಚ್ಚಾಗಲಿದೆ. ಈ ಸಬ್ಸಿಡಿ ಆಧಾರಿತ ರಸಗೊಬ್ಬರಗಳಲ್ಲಿ ಡೈ ಅಮೋನಿಯಂ ಫಾಸ್ಫೇಟ್ (ಡಿಎಪಿ) ಮತ್ತು ಎನ್‌ಪಿಕೆಎಸ್ (ಸಾರಜನಕ, ರಂಜಕ, ಪೊಟ್ಯಾಶ್, ಸಲ್ಫರ್) ಶ್ರೇಣಿಗಳು ಸೇರಿವೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಡಬಲ್ ಖುಷಿ; ಟರ್ಮ್ಸ್ ಆಫ್ ರೆಫರೆನ್ಸ್ ಜಾರಿ, ಗ್ರಾಚುಟಿ ಮಿತಿ ಹೆಚ್ಚಳ
ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ, “ರೈತರ ಕಲ್ಯಾಣವನ್ನೇ ಗುರಿಯಾಗಿಟ್ಟುಕೊಂಡು ಮುನ್ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೊಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ರಸಗೊಬ್ಬರಗಳ ಮೇಲಿನ ಸಬ್ಸಿಡಿಯ ಈ ನಿರ್ಧಾರದಿಂದ ರಸಗೊಬ್ಬರ ಬೆಲೆಗಳನ್ನು ಹೆಚ್ಚಿಸುವ ಹೊರೆಯನ್ನು ರೈತರ ಮೇಲೆ ಬೀಳದಂತೆ ಸರ್ಕಾರ ಭರಿಸಲಿದೆ” ಎಂದಿದ್ದಾರೆ.
𝐄𝐧𝐬𝐮𝐫𝐢𝐧𝐠 𝐀𝐟𝐟𝐨𝐫𝐝𝐚𝐛𝐥𝐞 𝐅𝐞𝐫𝐭𝐢𝐥𝐢𝐬𝐞𝐫𝐬 𝐓𝐨 𝐎𝐮𝐫 𝐀𝐧𝐧𝐚𝐝𝐚𝐭𝐚𝐬
The Union Cabinet, chaired by Hon’ble PM Shri @narendramodi ji, has approved the proposal to fix Nutrient Based Subsidy (NBS) rates for Phosphatic and Potassic (P&K) fertilisers for the… pic.twitter.com/LWCvEvh8eo
— G Kishan Reddy (@kishanreddybjp) October 28, 2025
“ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟವು ನಮ್ಮ ಆಹಾರ ಉತ್ಪಾದಕರಿಗೆ ರಸಗೊಬ್ಬರಗಳನ್ನು ಕೈಗೆಟುಕುವಂತೆ ಮಾಡಲು ಮತ್ತೊಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಮುಂಬರುವ ರಾಬಿ ಋತುವಿಗೆ (2025-26) 37,952 ಕೋಟಿ ರೂ.ಗಳ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (NBS) ದರಗಳನ್ನು ನಿಗದಿಪಡಿಸಿದೆ. ಈ ನಿರ್ಧಾರವು ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರಗಳು ಲಭ್ಯವಾಗುವಂತೆ ಮಾಡುತ್ತದೆ. ಇದು ರಸಗೊಬ್ಬರಗಳ ಸಮತೋಲಿತ ಬಳಕೆಯ ಮೂಲಕ ಸುಸ್ಥಿರ ಕೃಷಿಯನ್ನು ಉತ್ತೇಜಿಸುತ್ತದೆ. ಇದು ಕೃಷಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ರೈತರನ್ನು ಸಬಲಗೊಳಿಸುತ್ತದೆ. ನಮ್ಮ ಆಹಾರ ಉತ್ಪಾದಕರ ಕಲ್ಯಾಣಕ್ಕಾಗಿ ಪ್ರಧಾನಿಯವರ ಪ್ರಯತ್ನಗಳಿಗಾಗಿ ನಾನು ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ” ಎಂದು ಕಿಶನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.
గౌరవ ప్రధానమంత్రి శ్రీ @narendramodi గారి అధ్యక్షతన జరిగిన కేంద్ర కేబినెట్ సమావేశంలో రైతులపై ఎరువుల ధరల భారం పడకుండా… ఫాస్ఫాటిక్, పొటాష్ (P&K) ఎరువులకు సంబంధించిన న్యూట్రియంట్ బేస్డ్ సబ్సిడీ (NBS) రేట్లను.. 2025–26 రబీ సీజన్ (అక్టోబర్ 1, 2025 – మార్చి 31, 2026 ) లో అమలు… pic.twitter.com/HHlkUV88Sb
— G Kishan Reddy (@kishanreddybjp) October 28, 2025
ಇದನ್ನೂ ಓದಿ: Modi Kannada: ಮನ್ ಕೀ ಬಾತ್ನಲ್ಲಿ ಮೋದಿಯ ಕನ್ನಡ ಧ್ವನಿ; ಅಚ್ಚರಿ ಹುಟ್ಟಿಸಿದೆ ಎಐ ಸೃಷ್ಟಿ
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 2025-26 ರಾಬಿ ಋತುವಿನಲ್ಲಿ ಈ NBS ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಯಿತು. ಈ ಯೋಜನೆಯಡಿ ಸುಮಾರು 28 ವಿಧದ ರಸಗೊಬ್ಬರಗಳನ್ನು ಒಳಗೊಳ್ಳಲಾಗುವುದು. ಇವುಗಳಲ್ಲಿ ಡೈಅಮೋನಿಯಂ ಫಾಸ್ಫೇಟ್ (DAP), ಮೊನೊಅಮೋನಿಯಂ ಫಾಸ್ಫೇಟ್ (MAP), ಮ್ಯೂರಿಯೇಟ್ ಆಫ್ ಪೊಟ್ಯಾಶ್ (MOP), ಟ್ರಿಪಲ್ ಸೂಪರ್ ಫಾಸ್ಫೇಟ್ (TSP), ಸಿಂಗಲ್ ಸೂಪರ್ ಫಾಸ್ಫೇಟ್ (SSP), ಮೊಲಾಸಸ್‌ನಿಂದ ಪಡೆದ ಪೊಟ್ಯಾಶ್ (PDM), ಅಮೋನಿಯಂ ಸಲ್ಫೇಟ್ (AS) ಇತ್ಯಾದಿ ಸೇರಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




