ಕೆಲಸ ಕೊಡಿ ಮೋದಿ ಎಂದು ಟ್ವಿಟರ್​ನಲ್ಲಿ ಅಭಿಯಾನ ಶುರು ಮಾಡಿದ ವಿದ್ಯಾರ್ಥಿ ಸಮೂಹ
Modi Job Do: ಬಿಜೆಪಿ 2013ರಲ್ಲಿ ಅಧಿಕಾರಕ್ಕೇರುವ ಸಂದರ್ಭದಲ್ಲಿ ಯುಪಿಎ ಸರ್ಕಾರ ನಿರುದ್ಯೋಗ ಸಮಸ್ಯೆ ನೀಗಿಸುವಲ್ಲಿ ವಿಫಲವಾಗಿದೆ ಎಂಬುದನ್ನೇ ಬಹುದೊಡ್ಡ ಅಸ್ತ್ರವಾಗಿರಿಸಿಕೊಂಡು ಯುವಕರನ್ನು ಸೆಳೆದಿತ್ತು. ಆದರೆ, ಇದೀಗ ಎನ್​ಡಿಎ ಸರ್ಕಾರ ಎರಡನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬಂದಿದ್ದರೂ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವಲ್ಲಿ ಏನೇನೂ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಯುವ ಸಮೂಹದ ಆರೋಪ.
ಕೆಲಸ ಕೊಡಿ ಮೋದಿ ಎಂದು ಟ್ವಿಟರ್​ನಲ್ಲಿ ಅಭಿಯಾನ ಶುರು ಮಾಡಿದ ವಿದ್ಯಾರ್ಥಿ ಸಮೂಹ
ಸಂಗ್ರಹ ಚಿತ್ರ
Follow us
Skanda
Updated on: Feb 26, 2021 | 1:35 PM
ಕಳೆದ ನಾಲ್ಕೈದು ದಿನಗಳಿಂದ ಟ್ವಿಟರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಅಭಿಯಾನವೊಂದು ಭಾರೀ ಸದ್ದು ಮಾಡುತ್ತಿದೆ. #Modi_Job_Do (ಮೋದಿ ಜಾಬ್​ ದೋ) ಮತ್ತು #Modi_Rojgar_Do (ಮೋದಿ ರೋಜ್​ಗಾರ್ ದೋ) ಹ್ಯಾಶ್​ಟ್ಯಾಗ್​ಗಳು ಟ್ರೆಂಡ್​ ಆಗಿದ್ದು, ಸಂಚಲನ ಮೂಡಿಸಿವೆ. SSC ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ಹ್ಯಾಶ್​ಟ್ಯಾಗ್​ಗಳನ್ನು ಟ್ರೆಂಡ್​ ಮಾಡಿದ್ದು, ಯುವಕರನ್ನು ಅದರಲ್ಲೂ ಬಹುಮುಖ್ಯವಾಗಿ ವಿದ್ಯಾರ್ಥಿ ವಲಯವನ್ನು ಸೆಳೆದು ಅಧಿಕಾರಕ್ಕೇರಿದ್ದ ಬಿಜೆಪಿ ಪಕ್ಷಕ್ಕೆ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳೇ ದೊಡ್ಡ ಮಟ್ಟದಲ್ಲಿ ಬಿಸಿ ಮುಟ್ಟಿಸಿದ್ದಾರೆ.
ಹಿನ್ನಲೆ ಏನು? ಭಾರತ ಸರ್ಕಾರದ ಅಂಗಸಂಸ್ಥೆಯಾದ SSC (Staff Selection Commission) ಪ್ರತಿವರ್ಷವೂ ಸರ್ಕಾರದ ವಿವಿಧ ಸಚಿವಾಲಯಗಳಿಗೆ, ಸಂಸ್ಥೆಗಳಲ್ಲಿ ಬಿ ಮತ್ತು ಸಿ ದರ್ಜೆ ಉದ್ಯೋಗಿಗಳನ್ನು ನೇಮಿಸಲು ಪರೀಕ್ಷೆ ನಡೆಸುತ್ತದೆ. ಅಂತೆಯೇ ಈ ಬಾರಿಯೂ ಕಳೆದ ನವೆಂಬರ್​ನಲ್ಲಿ Tier 2 ಪರೀಕ್ಷೆಯನ್ನು 3 ಹಂತಗಳಲ್ಲಿ ನಡೆಸಿತ್ತು. ನವೆಂಬರ್​ 15, 16 ಮತ್ತು 18 ನಡೆದ ಪರೀಕ್ಷೆಗಳಲ್ಲಿ ಸಾವಿರಾರು ಜನ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಯ ಫಲಿತಾಂಶವು ಕಳೆದ ಶುಕ್ರವಾರ ಅಂದರೆ ಫೆಬ್ರವರಿ 19 ರಂದು ಪ್ರಕಟವಾಗಿದೆ. ಆದರೆ, ಫಲಿತಾಂಶದಲ್ಲಿ ಊಹೆಗೂ ನಿಲುಕದಂತಹ ಪ್ರಮಾದವನ್ನು ಸರ್ಕಾರ ಮಾಡಿರುವುದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಕಾರಣವಾಗಿದೆ.
ಸರ್ಕಾರ ಮಾಡಿದ ಪ್ರಮಾದವೇನು? ಕೇಂದ್ರ ಸರ್ಕಾರ ಫೆಬ್ರವರಿ 19ರಂದು ಪ್ರಕಟಿಸಿದ SSC Tier 2 ಪರೀಕ್ಷೆ ಫಲಿತಾಂಶದಲ್ಲಿ ಅನ್ಯಾಯವಾಗಿದೆ ಎನ್ನುವುದು ವಿದ್ಯಾರ್ಥಿಗಳ ಆರೋಪ. ಇದಕ್ಕೆ ಕಾರಣವೆಂದರೆ, ನವೆಂಬರ್​ 15, 16 ಮತ್ತು 18ರಂದು ನಡೆದ 3 ಹಂತದ ಪರೀಕ್ಷೆಯಲ್ಲಿ ಮೂರನೇ ದಿನ ಪರೀಕ್ಷೆ ಸುಲಭವಾಗಿತ್ತು ಎಂದು ತೀರ್ಮಾನಿಸಿದ ಸರ್ಕಾರ 18ನೇ ತಾರೀಖಿನಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುಮಾರು 100 ಅಂಕ ಕಡಿತಗೊಳಿಸಿದೆ. ಜೊತೆಗೆ, 15ಮತ್ತು 16ನೇ ತಾರೀಖು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಕಠಿಣವಾಗಿತ್ತು ಎಂಬ ಕಾರಣಕ್ಕೆ ಹೆಚ್ಚುವರಿಯಾಗಿ 70ರಿಂದ 80 ಅಂಕ ನೀಡಿದೆ. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ವಿದ್ಯಾರ್ಥಿಯೋರ್ವ ಎನ್​ಬಿಟಿ ಆನ್​ಲೈನ್​ಗೆ ತಿಳಿಸಿದ್ದಾರೆ.
ಅಭಿಯಾನ ಟ್ರೆಂಡ್​ ಆಗಿದ್ದು ಹೇಗೆ? ಸರ್ಕಾರ SSC ಪರೀಕ್ಷಾರ್ಥಿಗಳಿಗೆ ಅನ್ಯಾಯವೆಸಗಿದೆ ಎಂಬ ಕಾರಣಕ್ಕೆ ಸಿಟ್ಟಾದ ವಿದ್ಯಾರ್ಥಿಗಳು ಕೇಂದ್ರದ ಈ ನಡೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಮ್​ ಮೋಹನ್​ ಮಿಶ್ರಾ ಎಂಬ ಅಧ್ಯಾಪಕರೊಬ್ಬರು ಈ ಅಭಿಯಾನದ ರೂಪುರೇಷೆ ನೀಡಿದ್ದು ಯಾವ ದಿನ, ಯಾವ ಸಮಯದಲ್ಲಿ, ಹೇಗೆ ಟ್ರೆಂಡ್​ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಇದನ್ನು ಪರಿಗಣಿಸಿದ ವಿದ್ಯಾರ್ಥಿಗಳು ಏಕಕಾಲಕ್ಕೆ #Modi_Job_Do, #Modi_Rojgar_Do ಎಂದು ಟ್ವೀಟ್​ ಮಾಡುವ ಮೂಲಕ ಅದು ಟ್ರೆಂಡ್​ ಆಗಿದೆ.
#Modi_Job_Do, #Modi_Rojgar_Do ಏಕೆ ಬಂತು? ಬಿಜೆಪಿ 2013ರಲ್ಲಿ ಅಧಿಕಾರಕ್ಕೇರುವ ಸಂದರ್ಭದಲ್ಲಿ ಯುಪಿಎ ಸರ್ಕಾರ ನಿರುದ್ಯೋಗ ಸಮಸ್ಯೆ ನೀಗಿಸುವಲ್ಲಿ ವಿಫಲವಾಗಿದೆ ಎಂಬುದನ್ನೇ ಬಹುದೊಡ್ಡ ಅಸ್ತ್ರವಾಗಿರಿಸಿಕೊಂಡು ಯುವಕರನ್ನು ಸೆಳೆದಿತ್ತು. ಆದರೆ, ಇದೀಗ ಎನ್​ಡಿಎ ಸರ್ಕಾರ ಎರಡನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬಂದಿದ್ದರೂ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವಲ್ಲಿ ಏನೇನೂ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಯುವ ಸಮೂಹದ ಆರೋಪ. 2012ರಲ್ಲಿ SSCಯಲ್ಲಿ 16,119ರಷ್ಟು ಉದ್ಯೋಗಗಳು ಲಭ್ಯವಿದ್ದರೆ, ಪ್ರಸ್ತುತ ಆ ಸಂಖ್ಯೆ 2020ರಲ್ಲಿ ಸುಮಾರು 6,506ಕ್ಕೆ ಇಳಿದಿದೆ. ಹಾಗಂತ ಅದು ನಿರುದ್ಯೋಗಿಗಳ ಸಂಖ್ಯೆ ಇಳಿಕೆಯಾಗಿದೆ ಎಂದರ್ಥವಲ್ಲ ಬದಲಿಗೆ ಉದ್ಯೋಗ ಸೃಷ್ಠಿಯೇ ಕುಂಠಿತವಾಗಿದೆ ಎಂದು ಆರೋಪಿಸಿ ‘ಮೋದಿ ಕೆಲಸ ಕೊಡಿ’ ಎಂಬರ್ಥದಲ್ಲಿ ಹ್ಯಾಶ್​ಟ್ಯಾಗ್ ಶುರು ಮಾಡಿದ್ದಾರೆ.
ಇದುವರೆಗೆ ವಿರೋಧ ಪಕ್ಷಗಳಿಂದ, ಸೈದ್ಧಾಂತಿಕ ವಿರೋಧಿಗಳಿಂದ ವಿರೋಧ ಎದುರಿಸುತ್ತಿದ್ದ ಮೋದಿ ಸರ್ಕಾರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ಎದುರು ಹಾಕಿಕೊಂಡಿದೆ. ಸಾಧಾರಣವಾಗಿ ಐಟಿ ಸೆಲ್​ ಸಹಾಯದೊಂದಿಗೆ ಹ್ಯಾಶ್​ಟ್ಯಾಗ್​ ಟ್ರೆಂಡ್​ ಮಾಡುವ ವಿಧಾನ ಪ್ರಚಲಿತದಲ್ಲಿದೆಯಾದರೂ ಈ ವಿಚಾರದಲ್ಲಿ ವಿದ್ಯಾರ್ಥಿಗಳೇ ಸ್ವಯಂ ಪ್ರೇರಿತರಾಗಿ ಅತಿ ದೊಡ್ಡ ಸಂಖ್ಯೆಯಲ್ಲಿ ಟ್ವೀಟ್​ ಮಾಡಿರುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ಹೊಡೆತವನ್ನೇ ನೀಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಸದ್ಯ ರಾಮ್​ ಮೋಹನ್​ ಮಿಶ್ರಾ ತಿಳಿಸುರುವಂತೆ #Modi_Job_Do ಹ್ಯಾಶ್​ಟ್ಯಾಗ್​ ಒಂದು ಕೋಟಿಗೂ ಅಧಿಕ ಬಾರಿ ಟ್ವೀಟ್​ ಆಗಿದೆಯಂತೆ.
It was indeed 10M+ tweets. 1 करोड़ ट्वीट्स बच्चों की पीड़ा और संवेदनाएँ है, इन्हें ज़रूर सुना जाना चाहिए ? ignore करके क्या message दिया जा रहा है ? All is Well ? It's absolutely not. #modi_job_do pic.twitter.com/anOm2wsvlJ
— RaMo (@RaMoSirOfficial) February 26, 2021
It's no more just a tag but a war cry — against rising unemployment in India!
— Gaurav Pandhi (@GauravPandhi) February 26, 2021
ಇದನ್ನೂ ಓದಿ: ಬಾಲಾಕೋಟ್ ದಾಳಿಗೆ 2 ವರ್ಷ: ಭಾರತ-ಪಾಕ್ ನಡುವೆ ಹೊಸ ಕದನವಿರಾಮ ಒಪ್ಪಂದ; ಬದ್ಧವಾಗಿರುವುದೇ ಪಾಕ್?
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ