ರೆಮಲ್ ಚಂಡಮಾರುತ(Remal Cyclone) ಪರಿಣಾಮ ನೈಋತ್ಯ ಮುಂಗಾರು ಸ್ವಲ್ಪ ವೇಗವಾಗಿ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ನೈಋತ್ಯ ಮುಂಗಾರು ಇಂದು ಕೇರಳ ಪ್ರವೇಶಿಸಲಿದ್ದು, ಅರುಣಾಚಲಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನದಲ್ಲಿ ಸಾಮಾನ್ಯವಾಗಿ ಜೂನ್ 5ರಂದು ಮುಂಗಾರು ಪ್ರವೇಶಿಸುತ್ತಿತ್ತು. ಆದರೆ ಈ ಬಾರಿ ಬಹುಬೇಗವೇ ಮಳೆ ಶುರುವಾಗಲಿದೆ.
ಏಕಕಾಲಕ್ಕೆ ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಮುಂಗಾರು ಪ್ರವೇಶಿಸಲಿದೆ. 2017ರಲ್ಲಿ ಈ ವಿದ್ಯಾಮಾನ ನಡೆದಿತ್ತು ಮೋರಾ ಚಂಡಮಾರುತದ ಕಾರಣದಿಂದ ಪೂರ್ವ ಕೇಂದ್ರ ಬಂಗಾಳಕೊಲ್ಲಿಯಲ್ಲಿ ಮುಂಗಾರು ಮಾರುತ ರೂಪುಗೊಂಡಿತ್ತು. ಈ ಬಾರಿ ರೆಮಲ್ ಚಂಡಮಾರುತದಿಂದಾಗಿ ಏಕಕಾಲಕ್ಕೆ ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಮಳೆಯಾಗಲಿದೆ.
ಕಳೆದ ಒಂದು ವಾರದಿಂದ, ದೇಶದ ಪ್ರಮುಖ ಭಾಗಗಳು ತೀವ್ರ ಶಾಖದ ಅಲೆಯಿಂದ ತತ್ತರಿಸುತ್ತಿವೆ. ಉತ್ತರ ಮತ್ತು ಮಧ್ಯ ಭಾರತದ ದೊಡ್ಡ ಭಾಗಗಳು ಮೇ 29 ರಂದು ರಾಜಸ್ಥಾನದ ಚುರು ಮತ್ತು ಹರಿಯಾಣದ ಸಿರ್ಸಾದಲ್ಲಿ 50 ಡಿಗ್ರಿ ಸೆಲ್ಸಿಯಸ್ ಅನ್ನು ದಾಟಿತ್ತು ಮತ್ತು ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು.
ಕೃಷಿ ಪ್ರದೇಶದ 52 ಪ್ರತಿಶತವು ಮುಂಗಾರಿನ ಮೇಲೆ ಅವಲಂಬಿತವಾಗಿದೆ,ದೇಶಾದ್ಯಂತ ವಿದ್ಯುತ್ ಉತ್ಪಾದನೆಯ ಹೊರತಾಗಿ ಕುಡಿಯುವ ನೀರಿಗೆ ನಿರ್ಣಾಯಕವಾದ ಜಲಾಶಯಗಳನ್ನು ಮರುಪೂರಣಗೊಳಿಸಲು ಇದು ನಿರ್ಣಾಯಕವಾಗಿದೆ. ಜೂನ್ ಮತ್ತು ಜುಲೈ ಅನ್ನು ಕೃಷಿಗೆ ಪ್ರಮುಖ ಮಾನ್ಸೂನ್ ತಿಂಗಳುಗಳೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಖಾರಿಫ್ ಬೆಳೆಗೆ ಹೆಚ್ಚಿನ ಬಿತ್ತನೆಯು ಈ ಅವಧಿಯಲ್ಲಿ ನಡೆಯುತ್ತದೆ.
ಮತ್ತಷ್ಟು ಓದಿ: Mansoon Rain: ರೈತರಿಗೆ ಗುಡ್ನ್ಯೂಸ್: ಕರ್ನಾಟಕದಲ್ಲಿ ಮೇ 31ರಿಂದ ಶುರುವಾಗಲಿದೆ ಮುಂಗಾರು ಮಳೆ!
ಪಶ್ಚಿಮ ಬಂಗಾಳ ಹಾಗೂಬಾಂಗ್ಲಾದೇಶದ ಮೂಲಕ ಸಾಗಿದ ರೆಮಲ್ ಚಂಡಮಾರುತ ಮುಂಗಾರು ಹರಿವನ್ನು ಬಂಗಾಳಕೊಲ್ಲಿಗೆ ಎಳೆದಿದೆ, ಇದರ ಪರಿಣಾಮ ಈಶಾನ್ಯ ರಾಜ್ಯಗಳಲ್ಲಿ ಮುಂಗಾರು 5 ದಿನ ಮುಂಚಿತವಾಗಿಯೇ ಪ್ರವೇಶ ಪಡೆಯಲಿದೆ.
ಮುಂದಿನ 24 ಗಂಟೆಗಳಲ್ಲಿ ಕೇರಳಕ್ಕೆ ಹಾಗೂ ಈಶಾನ್ಯ ರಾಜ್ಯಗಳ ಕೆಲ ಪ್ರದೇಶಗಳಿಗೆ ಮುಂಗಾರು ಪ್ರವೇಶಿಸಲು ಮತ್ತು ಮುನ್ನಡೆಯಲು ಅನುಕೂಲಕರ ವಾತಾವರಣ ಇದೆ. ಕಳೆದ ವರ್ಷ ಒಂದು ವಾರ ವಿಳಂಬವಾಗಿ ಮುಂಗಾರು ಕೇರಳ ಪ್ರವೇಶಿಸಿತ್ತು.
ಕರ್ನಾಟಕದಲ್ಲಿದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಮೇ 31ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ನೈರುತ್ಯ ಮುಂಗಾರು ಮಳೆ ಕೇರಳದ ಮೂಲಕ ರಾಜ್ಯ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದು, ಈ ಬಾರಿ ಉತ್ತಮವಾದ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮುಂಗಾರು ಮಳೆ ಕೃಷಿ ಚಟುವಟಿಕೆಗಳನ್ನು ನಿರ್ಧರಿಸುವುದರಿಂದ ಸಹಜವಾಗಿಯೇ ರೈತರಲ್ಲಿ ಸಂತಸ ಮನೆ ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:43 am, Thu, 30 May 24