ಕೊವಿಡ್​ 19 ಲಸಿಕೆ ಅಭಿಯಾನದಲ್ಲಿ ಭಾರತದ ಇನ್ನೊಂದು ಸಾಧನೆ; ಶೇ.50ಕ್ಕೂ ಹೆಚ್ಚು ಅರ್ಹರಿಗೆ 2ಡೋಸ್ ಪೂರ್ಣ, ಪ್ರಧಾನಿ ಮೋದಿ ಟ್ವೀಟ್​​

ಭಾರತದಲ್ಲಿ ಜನವರಿ 16ರಿಂದ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಮೇ ತಿಂಗಳಲ್ಲಿ ಸರಾಸರಿ ಒಂದು ದಿನಕ್ಕೆ 16.69 ಲಕ್ಷ ಡೋಸ್ ನೀಡಲಾಗುತ್ತಿತ್ತು. ಅದು ನವೆಂಬರ್​ ಹೊತ್ತಿಗೆ ಒಂದು ದಿನಕ್ಕೆ ಸರಾಸರಿ 59.32 ಲಕ್ಷ ಡೋಸ್​ ಕೊಡಲಾಗುತ್ತಿದೆ. 

ಕೊವಿಡ್​ 19 ಲಸಿಕೆ ಅಭಿಯಾನದಲ್ಲಿ ಭಾರತದ ಇನ್ನೊಂದು ಸಾಧನೆ; ಶೇ.50ಕ್ಕೂ ಹೆಚ್ಚು ಅರ್ಹರಿಗೆ 2ಡೋಸ್ ಪೂರ್ಣ, ಪ್ರಧಾನಿ ಮೋದಿ ಟ್ವೀಟ್​​
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Dec 06, 2021 | 10:13 AM

ವಿಶ್ವದ ಎಲ್ಲ ರಾಷ್ಟ್ರಗಳಿಂಗಿಂತಲೂ ಮೊದಲು ಕೊರೊನಾ ಲಸಿಕೆ ನೀಡಲು ಶುರು ಮಾಡಿದ ಭಾರತ ಇದೀಗ ಕೊವಿಡ್​ 19 ಲಸಿಕಾ ಅಭಿಯಾನ (Covid 19 Vaccination Drive)ದಲ್ಲಿ ಇನ್ನೊಂದು ಮೈಲುಗಲ್ಲು ಸ್ಥಾಪಿಸಿದೆ. ದೇಶದಲ್ಲಿ ಶೇ.50ಕ್ಕಿಂತಲೂ ಹೆಚ್ಚು ಅರ್ಹ ವಯಸ್ಕರು ಸಂಪೂರ್ಣವಾಗಿ ಕೊವಿಡ್​ 19 ಲಸಿಕೆ ಪಡೆದಿದ್ದಾರೆ. ಅಂದರೆ ಭಾರತದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರಿಗೆ ಎರಡೂ ಡೋಸ್ ಕೊರೊನಾ ಲಸಿಕೆ ಪೂರ್ಣಗೊಂಡಿದೆ.  ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ, ಸಂತೋಷ ವ್ಯಕ್ತಪಡಿಸಿದ್ದಾರೆ. ಕೊವಿಡ್​ 19 ವಿರುದ್ಧ ಹೋರಾಟದಲ್ಲಿ ಹೀಗೆ ಎಲ್ಲರೂ ಒಟ್ಟಾಗಿ ಸಾಗೋಣ ಎಂಬ ಸಂದೇಶ ನೀಡಿದ್ದಾರೆ. 

ನಿನ್ನೆ ಈ ಬಗ್ಗೆ ಟ್ವೀಟ್​ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ, ಕೊವಿಡ್​ 19 ವಿರುದ್ಧ ಹೋರಾಟದಲ್ಲಿ ನಾವು ಯಶಸ್ವಿಯಾಗುತ್ತೇವೆ. ಅಭಿನಂದನೆಗಳು ಭಾರತ..ದೇಶದಲ್ಲಿ ಶೇ.50ರಷ್ಟು ವಯಸ್ಕರು ಸಂಪೂರ್ಣವಾಗಿ ಲಸಿಕೆ ಪಡೆದಿದ್ದು ಹೆಮ್ಮೆಯ ಕ್ಷಣ ಎಂದು ಹೇಳಿದ್ದರು. ಹಾಗೇ, ಈ ಟ್ವೀಟ್​​ನ್ನು ಇಂದು ಪ್ರಧಾನಿ ಮೋದಿ ರೀಟ್ವೀಟ್ ಮಾಡಿಕೊಂಡಿದ್ದು, ಭಾರತದ ಲಸಿಕೆ ಅಭಿಯಾನ ಇನ್ನೊಂದು ಮೈಲಿಗಲ್ಲು ದಾಟಿದೆ. ಕೊವಿಡ್​ 19 ವಿರುದ್ಧ ಹೋರಾಟವನ್ನು ಬಲಪಡಿಸಿಕೊಳ್ಳಲು ಈ ವೇಗವನ್ನು ಕಾಯ್ದುಕೊಳ್ಳಬೇಕು. ಹಾಗೇ, ಕೊರೊನಾ ವಿರುದ್ಧದ ನಿಯಂತ್ರಣ ಕ್ರಮಗಳಾದ ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

ದೇಶದಲ್ಲಿ ಒಟ್ಟಾರೆ 127.61 ಕೋಟಿ ಡೋಸ್​ ಕೊವಿಡ್​ 19 ಲಸಿಕೆ ನೀಡಲಾಗಿದೆ. ಅದರಲ್ಲಿ 79.90 ಕೋಟಿ ವಯಸ್ಕರಿಗೆ ಒಂದು ಡೋಸ್​ ಮಾತ್ರ ಆಗಿದ್ದು, ಶೇ.47.71ಕೋಟಿ ಜನರಿಗೆ ಎರಡೂ ಡೋಸ್​ ಸಂಪೂರ್ಣಗೊಂಡಿದೆ ಎಂದು ಶುಕ್ರವಾರ ಕೇಂದ್ರ ಆರೋಗ್ಯ ಇಲಾಖೆ ಹೇಳಿತ್ತು. ಆದರೆ ಶನಿವಾರ ಒಂದೇ ದಿನ ದೇಶಾದ್ಯಂ ಒಟ್ಟೂ 1.04 ಕೋಟಿ ಡೋಸ್​ ಲಸಿಕೆ ನೀಡಲಾಗಿದ್ದು, ಅದರಲ್ಲಿ 75.12 ಕೋಟಿ ಲಕ್ಷ ಮಂದಿ ಎರಡನೇ ಡೋಸ್​ ತೆಗೆದುಕೊಂಡವರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಎರಡೂ ಡೋಸ್​ ಪೂರ್ಣಗೊಳಿಸಿದ ಅರ್ಹ ವಯಸ್ಕರ ಪ್ರಮಾಣ ಶೇ.50ಕ್ಕೂ ಹೆಚ್ಚಾಗಿದೆ. ಸದ್ಯ ದೇಶದಲ್ಲಿ ಶೇ.84.8ರಷ್ಟು ಮಂದಿಗೆ ಒಂದೇ ಡೋಸ್​ ಲಸಿಕೆಯಾಗಿದೆ.

ಭಾರತದಲ್ಲಿ ಜನವರಿ 16ರಿಂದ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಮೇ ತಿಂಗಳಲ್ಲಿ ಸರಾಸರಿ ಒಂದು ದಿನಕ್ಕೆ 16.69 ಲಕ್ಷ ಡೋಸ್ ನೀಡಲಾಗುತ್ತಿತ್ತು. ಅದು ನವೆಂಬರ್​ ಹೊತ್ತಿಗೆ ಒಂದು ದಿನಕ್ಕೆ ಸರಾಸರಿ 59.32 ಲಕ್ಷ ಡೋಸ್​ ಕೊಡಲಾಗುತ್ತಿದೆ.  ಭಾರತದಲ್ಲಿ ಫೆಬ್ರವರಿ 19ರ ಹೊತ್ತಿಗೆ 1 ಕೋಟಿ ಡೋಸ್​, ಏಪ್ರಿಲ್ 10ರಂದು 10 ಕೋಟಿ ಡೋಸ್​ ಲಸಿಕೆ ನೀಡಲಾಗಿತ್ತು. ನಂತರ ಅಕ್ಟೋಬರ್​ 21ಕ್ಕೆ 100 ಕೋಟಿ ಡೋಸ್​ ಲಸಿಕೆ ನೀಡಿಕೆ ಪೂರ್ಣಗೊಳಿಸುವ ಮೂಲಕ ಒಂದು ಮೈಲಿಗಲ್ಲು ಸ್ಥಾಪಿಸಲಾಗಿತ್ತು. ಅಂತೆಯೇ ಒಂದು ದಿನಕ್ಕೆ ಒಂದು ಕೋಟಿ ಡೋಸ್​ ನೀಡಿರುವ ದಾಖಲೆಗೂ ಭಾರತ ಸಾಕ್ಷಿಯಾಗಿದ್ದು, ಒಟ್ಟು 5 ಬಾರಿ ಈ ಸಾಧನೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು (ಸೆ.17) ದೇಶಾದ್ಯಂತ ಲಸಿಕೆ ಅಭಿಯಾನ ಮಾಡಿ, 2.5 ಕೋಟಿ ಡೋಸ್ ನೀಡಲಾಗಿತ್ತು. ಈಗಂತೂ ಒಮಿಕ್ರಾನ್​ ಸೋಂಕು ಶುರುವಾಗಿರುವ ಹಿನ್ನೆಲೆಯಲ್ಲಿ ಜನರೂ ಲಸಿಕೆ ತೆಗೆದುಕೊಳ್ಳಲು ಮುಂದೆ ಬರುತ್ತಿದ್ದಾರೆ.

ಇದನ್ನೂ ಓದಿ: ಶೋಪಿಯಾನ್​​ನಲ್ಲಿ ಇಬ್ಬರು ಎಲ್​ಇಟಿ ಉಗ್ರರ ಬಂಧನ; ಅವರ ಬಳಿಯಿದ್ದ ಚೈನೀಸ್​ ಪಿಸ್ತೂಲ್, ಗ್ರೆನೇಡ್​ ವಶ​

Published On - 9:58 am, Mon, 6 December 21

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ