AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೊರಗುಂಟೆಪಾಳ್ಯ, ನಾಗಸಂದ್ರ ಫ್ಲೈ ಓವರ್ ಸುರಕ್ಷಿತವಾಗಿಲ್ಲ; ತಪಾಸಣೆಯ ಅಗತ್ಯವಿದೆ- ರಾಜ್ಯಸಭೆಯಲ್ಲಿ ರಾಮಮೂರ್ತಿ ಆಗ್ರಹ

ರಾಜ್ಯಸಭೆಯ ಕಲಾಪದ ವೇಳೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಕೆ.ಸಿ ರಾಮಮೂರ್ತಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಫ್ಲೈ ಓವರ್ಗಳ ಸುರಕ್ಷತೆ ಬಗ್ಗೆ ಆತಂಕ ಶುರುವಾಗಿದೆ. ಅದರಲ್ಲೂ ಬೆಂಗಳೂರಿನ ದೊಡ್ಡ ಫ್ಲೈಓವರ್ ಆಗಿರುವ ಗೊರಗುಂಟೆಪಾಳ್ಯ, ನಾಗಸಂದ್ರ ಫ್ಲೈ ಓವರ್ ಸುರಕ್ಷಿತವಾಗಿಲ್ಲ.

ಗೊರಗುಂಟೆಪಾಳ್ಯ, ನಾಗಸಂದ್ರ ಫ್ಲೈ ಓವರ್ ಸುರಕ್ಷಿತವಾಗಿಲ್ಲ; ತಪಾಸಣೆಯ ಅಗತ್ಯವಿದೆ- ರಾಜ್ಯಸಭೆಯಲ್ಲಿ ರಾಮಮೂರ್ತಿ ಆಗ್ರಹ
ಕೆ.ಸಿ ರಾಮಮೂರ್ತಿ
TV9 Web
| Edited By: |

Updated on:Mar 25, 2022 | 4:05 PM

Share

ನವದೆಹಲಿ: ರಾಜ್ಯದ ಪ್ಲೈಓವರ್ಗಳ ಸುರಕ್ಷತೆ ಬಗ್ಗೆ ಸೂಕ್ತ ಪರಿಶೀಲನೆ ಅಗತ್ಯವಿದೆ ಕೂಡಲೇ ಕೇಂದ್ರದ ತಜ್ಞರ ತಂಡವನ್ನು ರಾಜ್ಯ ಕಳುಹಿಸಬೇಕು ಎಂದು ಮೇಲ್ಮನೆ ಸದಸ್ಯ, ಬಿಜೆಪಿ ಪಕ್ಷದ ಕೆ.ಸಿ. ರಾಮಮೂರ್ತಿ (KC Ramamurthy) ರಾಜ್ಯಸಭೆಯಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯಸಭೆಯ ಕಲಾಪದ ವೇಳೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಕೆ.ಸಿ ರಾಮಮೂರ್ತಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಫ್ಲೈ ಓವರ್ಗಳ ಸುರಕ್ಷತೆ ಬಗ್ಗೆ ಆತಂಕ ಶುರುವಾಗಿದೆ. ಅದರಲ್ಲೂ ಬೆಂಗಳೂರಿನ ದೊಡ್ಡ ಫ್ಲೈಓವರ್ ಆಗಿರುವ ಗೊರಗುಂಟೆಪಾಳ್ಯ, ನಾಗಸಂದ್ರ ಫ್ಲೈ ಓವರ್ ಸುರಕ್ಷಿತವಾಗಿಲ್ಲ. ಫ್ಲೈಓವರ್ ಕಳೆದ 12 ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಜನರ ತೆರಿಗೆ ಹಣದಿಂದ ಹೆಚ್ಚು ಹಣ ಖರ್ಚು ಮಾಡಿ ನಿರ್ಮಿಸಲಾಗಿತ್ತು. ಈಗ ಫ್ಲೈ ಓವರ್ ಸುರಕ್ಷಿತವಾಗಿಲ್ಲ, ಸುರಕ್ಷಿತವಾಗಿಲ್ಲದಿರುವುದು ಆಘಾತಕಾರಿ ವಿಚಾರವಾಗಿದೆ. ಫ್ಲೈ ಓವರ್ ನಿರ್ಮಾಣದ ವೇಳೆ ಏಜೆನ್ಸಿ ಮತ್ತು ಗುತ್ತಿಗೆದಾರರು ಗುಣಮಟ್ಟ ಒತ್ತು ನೀಡಿಲ್ಲ. ದೇಶಾಧ್ಯಂತ ಫ್ಲೈಓವರ್ ದುರಂತಗಳು ಸಂಭವಿಸುತ್ತಿವೆ.

ಆಗಾಗ ಕಾಮಗಾರಿಗಾಗಿ ಫ್ಲೈ ಓವರ್ ಬಂದ್ ಮಾಡಲಾಗುತ್ತಿದೆ. ಜನರಿಗೆ ಸಮಸ್ಯೆ ಆಗುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೂ ಹೊಡೆತ ಬೀಳುತ್ತೆ. ಹಿಂದೆ ಕಟ್ಟುತ್ತಿದ್ದಂತಹ ಫ್ಲೈಓವರ್ ಗಳು ಹೆಚ್ಚು ಗುಣಮಟ್ಟದಿಂದ ಇರುತ್ತಿದ್ದವು. ಧೀರ್ಘ ಕಾಲ ಬಳಕೆ ಮಾಡಿರುವ ಉದಾಹರಣೆಗಳು ಇವೆ. ಆದರೆ ಇತ್ತೀಚಿಗೆ ನಿರ್ಮಾಣ ಮಾಡಿರುವ ಫ್ಲೈ ಓವರ್ ಗಳ ಗುಣಮಟ್ಟ ಕಾಪಾಡಿಕೊಂಡಿಲ್ಲ, ದೀರ್ಘ ಬಾಳಿಕೆ‌ ಬರುತ್ತಿಲ್ಲ. ಹೀಗಾಗಿ ಕೇಂದ್ರ ಸರಕಾರ ಈ ಬಗ್ಗೆ ಗಮನಹರಿಸಬೇಕು. ಶೀಘ್ರದಲ್ಲೇ ರಾಜ್ಯಕ್ಕೆ ಕೇಂದ್ರ ಸರಕಾರ ತಜ್ಞರ ತಂಡ ಕಳುಹಿಸಿ ಎಲ್ಲಾ ಫ್ಲೈಓವರ್ ಗಳ ಪರಿಶೀಲನೆ ಮಾಡಿ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: RRR: ರಾಜಮೌಳಿ ಕಲೆಗಾರಿಕೆ ಹೇಗಿದೆ? ಟಿವಿ9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ..

ನಾಗಸಂದ್ರ-ಗೊರಗುಂಟೆಪಾಳ್ಯ ಮೇಲ್ಸೇತುವೆಯಲ್ಲಿ ಲೋಡ್ ಟೆಸ್ಟ್; ಸರ್ವಿಸ್ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ

Published On - 3:44 pm, Fri, 25 March 22

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?