ಗುಂಡು ಗುರುತು: ಬುಲೆಟ್ ಮೇಲೆ QR ಕೋಡ್ ನಮೂದಿಸಲು ಖಾಕಿ ಸೂಪರ್ ಐಡಿಯಾ!
ಭೋಪಾಲ್: ಕರ್ನಾಟಕ ರಾಜ್ಯದಲ್ಲಿ ಅಪರಾಧಗಳ ಇತಿಹಾಸದಲ್ಲೇ ಅತ್ಯಂತ ಕ್ಲಿಷ್ಟಕರ ಹಾಗು ರೋಚಕ ಪ್ರಕರಣಗಳಲ್ಲಿ ಒಂದೆಂದರೆ ಅದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಎಂದು ಹೇಳಿದರು ಅದು ತಪ್ಪಾಗಲಾರದು. 2017ರ ಸೆಪ್ಟಂಬರ್ 5ರಂದು ಸಂಜೆ ವೇಳೆ ತಮ್ಮ ನಿವಾಸದ ಬಳಿಯಿದ್ದ ಪತ್ರಕರ್ತೆಯನ್ನು ಅಪರಿಚಿತ ಹಂತಕರು ಪಿಸ್ತೂಲ್ನಿಂದ ಗುಂಡಿಕ್ಕಿ ಕೊಲೆಗೈದಿದ್ದರು. ಗೌರಿ ಲಂಕೇಶ್ರ ಮೃತದೇಹದಲ್ಲಿದ್ದ ಗುಂಡು ಮತ್ತು ಅವರ ನಿವಾಸದ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳು ಬಿಟ್ಟರೇ ಬೇಱವ ಸುಳಿವು ಖಾಕಿ ಪಡೆಗೆ ಸಿಕ್ಕಿರಲಿಲ್ಲ. ಸರಿಸುಮಾರು 2 ವರ್ಷಗಳ […]
ಭೋಪಾಲ್: ಕರ್ನಾಟಕ ರಾಜ್ಯದಲ್ಲಿ ಅಪರಾಧಗಳ ಇತಿಹಾಸದಲ್ಲೇ ಅತ್ಯಂತ ಕ್ಲಿಷ್ಟಕರ ಹಾಗು ರೋಚಕ ಪ್ರಕರಣಗಳಲ್ಲಿ ಒಂದೆಂದರೆ ಅದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಎಂದು ಹೇಳಿದರು ಅದು ತಪ್ಪಾಗಲಾರದು. 2017ರ ಸೆಪ್ಟಂಬರ್ 5ರಂದು ಸಂಜೆ ವೇಳೆ ತಮ್ಮ ನಿವಾಸದ ಬಳಿಯಿದ್ದ ಪತ್ರಕರ್ತೆಯನ್ನು ಅಪರಿಚಿತ ಹಂತಕರು ಪಿಸ್ತೂಲ್ನಿಂದ ಗುಂಡಿಕ್ಕಿ ಕೊಲೆಗೈದಿದ್ದರು. ಗೌರಿ ಲಂಕೇಶ್ರ ಮೃತದೇಹದಲ್ಲಿದ್ದ ಗುಂಡು ಮತ್ತು ಅವರ ನಿವಾಸದ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳು ಬಿಟ್ಟರೇ ಬೇಱವ ಸುಳಿವು ಖಾಕಿ ಪಡೆಗೆ ಸಿಕ್ಕಿರಲಿಲ್ಲ.
ಸರಿಸುಮಾರು 2 ವರ್ಷಗಳ ಸತತ ತನಿಖೆಯ ಬಳಿಕ ಬಳಿಕ SIT ಅಧಿಕಾರಿಗಳಿಗೆ ಹಂತಕರ ಜಾಡನ್ನು ಪತ್ತೆಹಚ್ಚಲು ಸಾಧ್ಯವಾಗಿತ್ತು. ಆದರೆ, ಒಂದು ವೇಳೆ ಪತ್ರಕರ್ತೆ ಗೌರಿ ಲಂಕೇಶ್ರ ದೇಹವನ್ನು ಹೊಕ್ಕ ಗುಂಡಿನ ಮೇಲೆ ಯಾವುದೇ ಗುರುತು ಅಥವಾ ಐಡೆಂಟಿಫಿಕೇಷನ್ ಸಾಧನಗಳಿದಿದ್ದರೆ ತನಿಖಾಧಿಕಾರಿಗಳ ಕೆಲಸ ಮತ್ತಷ್ಟು ಸುಲಭವಾಗುತ್ತಿತ್ತು.
ಇದೀಗ, ಮಧ್ಯಪ್ರದೇಶದ ಖಾಕಿ ಪಡೆ ಅಂಥದ್ದೇ ಯೋಚನೆಗೆ ಮುಂದಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಮಧ್ಯಪ್ರದೇಶದ ಭಿಂಡ್ ಪೊಲೀಸರು ಪ್ರತಿ ಗುಂಡು ಅಥವಾ ಬುಲೆಟ್ನ ಮೇಲೆ QR ಕೋಡ್ ನಮೂದಿಸಲು ಮುಂದಾಗಿದೆ. ಇದರಿಂದ, ಭಿಂಡ್ನಲ್ಲಿ ಎಲ್ಲೇ ಅಪರಾಧ ಚಟುವಟಿಕೆಗಳಲ್ಲಿ ಬಂದೂಕು ಬಳಸಿದರೂ ಅದರಿಂದ ಫೈರ್ ಆದ ಗುಂಡಿನ ಮೇಲಿರುವ QR ಕೋಡ್ ಮುಖಾಂತರ ಅಪರಾಧಿಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದಲ್ಲದೆ, ರಾಜ್ಯದಲ್ಲಿ ಕೆಲ ದಿನಗಳಲ್ಲಿ ಉಪಚುನಾವಣೆ ನಡೆಯಲಿದ್ದು ಈ ವೇಳೆ ಗನ್ ಬಳಕೆಯನ್ನು ಕಂಡುಹಿಡಿಯಲು ನೆರವಾಗಲಿದೆ. ಭಿಂಡ್ನಲ್ಲಿ ಕಳೆದ 5 ವರ್ಷಗಳಲ್ಲಿ ಬಂದೂಕುಗಳನ್ನು ಬಳಸಿ ಸುಮಾರು 150 ಕೊಲೆ ಪ್ರಕರಣಗಳು ದಾಖಲಾಗಿದ್ದು, ಪೊಲೀಸರ ಈ ನೂತನ ಯೋಜನೆ ಅಪರಾಧಿಗಳನ್ನು ಮಟ್ಟಹಾಕಲು ಸಹಾಯ ಮಾಡಲಿದೆ.
Published On - 5:56 pm, Sat, 17 October 20