AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಾಂಕಾ ಗಾಂಧಿ ವಾರಾಣಸಿಯಿಂದ ಸ್ಪರ್ಧಿಸಿದರೆ, ಗೆಲುವು ಅವರದ್ದೇ: ಸಂಸದೆ ಪ್ರಿಯಾಂಕಾ ಚತುರ್ವೇದಿ ವಿಶ್ವಾಸ

ವಾರಾಣಸಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಪ್ರಿಯಾಂಕಾ ಗಾಂಧಿ ನಿರ್ಧರಿಸಿದರೆ ವಿರೋಧ ಪಕ್ಷಗಳ ಒಕ್ಕೂಟವು ಅವರನ್ನು ಬೆಂಬಲಿಸುತ್ತದೆ ಎಂದು ಶಿವಸೇನಾ (ಯುಬಿಟಿ) ನಾಯಕಿ ಮತ್ತು ಸಂಸದೆ ಪ್ರಿಯಾಂಕಾ ಚತುರ್ವೇದಿ ಶನಿವಾರ ಹೇಳಿದ್ದಾರೆ, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಪ್ರಿಯಾಂಕಾ ಗಾಂಧಿ ಅವರು ವಾರಾಣಸಿಯಿಂದ ಸ್ಪರ್ಧಿಸಲು ಬಯಸಿದರೆ ಮತ್ತು ವಿರೋಧ ಪಕ್ಷಗಳು ಅದನ್ನು ಒಪ್ಪಿದರೆ ಮೈತ್ರಿಯು ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತದೆ ಎಂದು ಚತುರ್ವೇದಿ ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ವಾರಾಣಸಿಯಿಂದ ಸ್ಪರ್ಧಿಸಿದರೆ, ಗೆಲುವು ಅವರದ್ದೇ:  ಸಂಸದೆ ಪ್ರಿಯಾಂಕಾ ಚತುರ್ವೇದಿ ವಿಶ್ವಾಸ
ಪ್ರಿಯಾಂಕಾ ಗಾಂಧಿImage Credit source: NDTV
ನಯನಾ ರಾಜೀವ್
|

Updated on: Aug 19, 2023 | 2:05 PM

Share

ವಾರಾಣಸಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಪ್ರಿಯಾಂಕಾ ಗಾಂಧಿ(Priyanka Gandhi) ನಿರ್ಧರಿಸಿದರೆ ವಿರೋಧ ಪಕ್ಷಗಳ ಒಕ್ಕೂಟವು ಅವರನ್ನು ಬೆಂಬಲಿಸುತ್ತದೆ ಎಂದು ಶಿವಸೇನಾ (ಯುಬಿಟಿ) ನಾಯಕಿ ಮತ್ತು ಸಂಸದೆ ಪ್ರಿಯಾಂಕಾ ಚತುರ್ವೇದಿ ಶನಿವಾರ ಹೇಳಿದ್ದಾರೆ, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಪ್ರಿಯಾಂಕಾ ಗಾಂಧಿ ಅವರು ವಾರಾಣಸಿಯಿಂದ ಸ್ಪರ್ಧಿಸಲು ಬಯಸಿದರೆ ಮತ್ತು ವಿರೋಧ ಪಕ್ಷಗಳು ಅದನ್ನು ಒಪ್ಪಿದರೆ ಮೈತ್ರಿಯು ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತದೆ ಎಂದು ಚತುರ್ವೇದಿ ತಿಳಿಸಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ಕ್ಷೇತ್ರದಿಂದ ಗೆದ್ದಿದ್ದರು. ಲೋಕಸಭೆ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬುದರ ಕುರಿತು ಮಾತನಾಡಿದ ಚತುರ್ವೇದಿ, ಎಲ್ಲ ವಿರೋಧ ಪಕ್ಷದ ನಾಯಕರೊಂದಿಗಿನ ಸಭೆಯಲ್ಲಿ, ಯಾವ ಸ್ಥಾನಕ್ಕೆ ಯಾರು ಸೂಕ್ತರು ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದರು.

ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಅಜಯ್ ರೈ ಅವರ ಪ್ರಕಾರ, ರಾಹುಲ್ ಗಾಂಧಿ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಸುಮಾರು 55,000 ಮತಗಳ ಅಂತರದಿಂದ ರಾಹುಲ್ ಗಾಂಧಿಯನ್ನು ಸೋಲಿಸಿದ್ದರು.

ಮತ್ತಷ್ಟು ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಶುರು; ಡಿಕೆ ಶಿವಕುಮಾರ್ ಪಟ್ಟಿಯಲ್ಲಿ ಯಾರಿಗೆಲ್ಲ ಸ್ಥಾನ? ಇಲ್ಲಿದೆ ವಿವರ

2024 ರ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ದೆಹಲಿ ಕಾಂಗ್ರೆಸ್ ನಾಯಕರು ಪಕ್ಷದ ಉನ್ನತ ನಾಯಕತ್ವದೊಂದಿಗೆ ಬುಧವಾರ ಸಭೆ ನಡೆಸಿ ದೆಹಲಿ ಘಟಕದ ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಾಲ್ಯದಲ್ಲಿ ಪಟ್ಟ ಕಷ್ಟಗಳ ನೆನಪಿಸಿಕೊಂಡ ದುನಿಯಾ ವಿಜಿ: ವಿಡಿಯೋ
ಬಾಲ್ಯದಲ್ಲಿ ಪಟ್ಟ ಕಷ್ಟಗಳ ನೆನಪಿಸಿಕೊಂಡ ದುನಿಯಾ ವಿಜಿ: ವಿಡಿಯೋ
ನನ್ನ 32 ವರ್ಷದ ಗಳಿಕೆಯನ್ನೆಲ್ಲ ದೋಚಿಬಿಟ್ಟರು ಸರ್​​, ಮನೆ ಮಾಲೀಕ ಭಾವುಕ
ನನ್ನ 32 ವರ್ಷದ ಗಳಿಕೆಯನ್ನೆಲ್ಲ ದೋಚಿಬಿಟ್ಟರು ಸರ್​​, ಮನೆ ಮಾಲೀಕ ಭಾವುಕ
ಆಂಜನೇಯನ ದೇವಸ್ಥಾನದಲ್ಲಿ ಭಕ್ತರಿಗೆ ವಿಶೇಷ ದರ್ಶನ ಕೊಟ್ಟ ವಾನರ!
ಆಂಜನೇಯನ ದೇವಸ್ಥಾನದಲ್ಲಿ ಭಕ್ತರಿಗೆ ವಿಶೇಷ ದರ್ಶನ ಕೊಟ್ಟ ವಾನರ!
ಅಜಿತ್ ಪವಾರ್ ನಿಧನಕ್ಕೆ ಕರ್ನಾಟಕ ವಿಧಾನಸಭೆಯಲ್ಲಿ ಸಂತಾಪ
ಅಜಿತ್ ಪವಾರ್ ನಿಧನಕ್ಕೆ ಕರ್ನಾಟಕ ವಿಧಾನಸಭೆಯಲ್ಲಿ ಸಂತಾಪ
ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ
ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ
ಡಿಸಿಎಂ ಅಜಿತ್ ಪವಾರ್ ಸಾವು: ವಿಮಾನ ಪತನವಾದ ಸ್ಥಳ ಹೇಗಿದೆ ನೋಡಿ
ಡಿಸಿಎಂ ಅಜಿತ್ ಪವಾರ್ ಸಾವು: ವಿಮಾನ ಪತನವಾದ ಸ್ಥಳ ಹೇಗಿದೆ ನೋಡಿ
ಜಾತ್ರೆಯ ರಥಕ್ಕೇ ಹೋಗಿ ಡಿಕ್ಕಿ ಹೊಡೆಯಿತು ಎತ್ತಿನಗಾಡಿ!
ಜಾತ್ರೆಯ ರಥಕ್ಕೇ ಹೋಗಿ ಡಿಕ್ಕಿ ಹೊಡೆಯಿತು ಎತ್ತಿನಗಾಡಿ!
VIDEO: ಎರಡನೇ ಬಾರಿ 6 ಎಸೆತಗಳಲ್ಲಿ ಪಂದ್ಯ ಗೆಲ್ಲಿಸಿದ ಸೋಫಿ ಡಿವೈನ್
VIDEO: ಎರಡನೇ ಬಾರಿ 6 ಎಸೆತಗಳಲ್ಲಿ ಪಂದ್ಯ ಗೆಲ್ಲಿಸಿದ ಸೋಫಿ ಡಿವೈನ್
‘ಅವಳು ನನ್ನ ಮಗಳಾಗಿದ್ದಕ್ಕೆ ಸಾರ್ಥಕವಾಯ್ತು’; ರಿತನ್ಯಾ ಬಗ್ಗೆ ದುನಿಯಾ ವಿಜಯ
‘ಅವಳು ನನ್ನ ಮಗಳಾಗಿದ್ದಕ್ಕೆ ಸಾರ್ಥಕವಾಯ್ತು’; ರಿತನ್ಯಾ ಬಗ್ಗೆ ದುನಿಯಾ ವಿಜಯ
ಹಿಂದೂ ವ್ಯಕ್ತಿ ಮನೆಗೆ ಬೆಂಕಿ ಹಚ್ಚಿದ ಮುಸ್ಲಿಂ ಯುವಕ: ಬಿಗುವಿನ ವಾತಾವರಣ
ಹಿಂದೂ ವ್ಯಕ್ತಿ ಮನೆಗೆ ಬೆಂಕಿ ಹಚ್ಚಿದ ಮುಸ್ಲಿಂ ಯುವಕ: ಬಿಗುವಿನ ವಾತಾವರಣ