Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹೋದರ ಹಾಗೂ ಅತ್ತಿಗೆಯ ಆತ್ಮಹತ್ಯೆಯ ಕುರಿತ ತನಿಖೆ ವಿಳಂಬವಾಗಿದ್ದಕ್ಕೆ ಬೆರಳು ಕತ್ತರಿಸಿಕೊಂಡ ವ್ಯಕ್ತಿ

ತನ್ನ ಸಹೋದರ ಹಾಗೂ ಅತ್ತಿಗೆಯ ಆತ್ಮಹತ್ಯೆ ಕುರಿತ ತನಿಖೆ ವಿಳಂಬವಾಗಿದ್ದಕ್ಕೆ ವ್ಯಕ್ತಿಯೊಬ್ಬ ಬೆರಳು ಕತ್ತರಿಸಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 43 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಕ್ಯಾಮೆರಾದೆದುರು ಬೆರಳು ಕತ್ತರಿಸಿಕೊಂಡಿದ್ದಾರೆ.

ಸಹೋದರ ಹಾಗೂ ಅತ್ತಿಗೆಯ ಆತ್ಮಹತ್ಯೆಯ ಕುರಿತ ತನಿಖೆ ವಿಳಂಬವಾಗಿದ್ದಕ್ಕೆ ಬೆರಳು ಕತ್ತರಿಸಿಕೊಂಡ ವ್ಯಕ್ತಿ
Crime scene
Follow us
ನಯನಾ ರಾಜೀವ್
|

Updated on: Aug 19, 2023 | 12:30 PM

ತನ್ನ ಸಹೋದರ ಹಾಗೂ ಅತ್ತಿಗೆಯ ಆತ್ಮಹತ್ಯೆ ಕುರಿತ ತನಿಖೆ ವಿಳಂಬವಾಗಿದ್ದಕ್ಕೆ ವ್ಯಕ್ತಿಯೊಬ್ಬ ಬೆರಳು ಕತ್ತರಿಸಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 43 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಕ್ಯಾಮೆರಾದೆದುರು ಬೆರಳು ಕತ್ತರಿಸಿಕೊಂಡಿದ್ದಾರೆ.

ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ವಾರಕ್ಕೊಮ್ಮೆ ದೇಹದ ಭಾಗವನ್ನು ಕತ್ತರಿಸುತ್ತೇನೆ ಎಂದು ಸಂತ್ರಸ್ತ ಧನಂಜಯ್ ನಾನಾವರೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಫಲ್ತಾನ್ ಪಟ್ಟಣದ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫಲ್ತಾನ್ ಪಟ್ಟಣದ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನನ್ನ ಅಣ್ಣ ಹಾಗೂ ಅತ್ತಿಗೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಅದು ಕೊಲೆ, ಈ ಕೊಲೆಯಲ್ಲಿ ಸಚಿವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತನಗೆ ನ್ಯಾಯ ಸಿಗುವವರೆಗೆ ಪ್ರತಿವಾರ ದೇಹದ ಅಂಗಾಂಗ ಕತ್ತರಿಸಿ ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದು ಕಠಾರಿಯಿಂದ ಬೆರಳನ್ನು ಕತ್ತರಿಸಲು ಮುಂದಾದರು.

ಮತ್ತಷ್ಟು ಓದಿ: ಅಪ್ರಾಪ್ತ ಮಗಳಿಗೆ ಮದುವೆ ಮಾಡಿಸಲು ಒಲ್ಲೆ ಎಂದ ಗಂಡ, ಆತ್ಮಹತ್ಯೆ ಮಾಡಿಕೊಂಡ ಪತ್ನಿ

ನಂತರ, ಫಾಲ್ತಾನ್ ನಗರ ಪೊಲೀಸ್ ಠಾಣೆಗೆ ಬಂದಿಳಿದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆತನನ್ನು ಈಗ ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ