Shimla Landslide ಶಿಮ್ಲಾದಲ್ಲಿ ಭೂಕುಸಿತದಿಂದಾಗಿ ಬಹುಮಹಡಿ ಕಟ್ಟಡ ಕುಸಿತ; ವಿಡಿಯೊ ವೈರಲ್
ಸಂಜೆ 5.45 ಕ್ಕೆ ಶಿಮ್ಲಾದ ಹಾಲಿ ಪ್ಯಾಲೇಸ್ ಬಳಿಯ ಘೋಡಾ ಚೌಕಿಯಲ್ಲಿ ಈ ಘಟನೆ ನಡೆದಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ
ಶಿಮ್ಲಾ: ಶಿಮ್ಲಾದಲ್ಲಿ ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು ಬಹುಮಹಡಿ ಕಟ್ಟಡ ಕುಸಿದಿದೆ. ಸಂಜೆ 5.45 ಕ್ಕೆ ಶಿಮ್ಲಾದ ಹಾಲಿ ಪ್ಯಾಲೇಸ್ ಬಳಿಯ ಘೋಡಾ ಚೌಕಿಯಲ್ಲಿ ಈ ಘಟನೆ ನಡೆದಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡ ಕುಸಿತದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದಾಗ್ಯೂ, ಘಟನೆಯ ಬಗ್ಗೆ ತನಿಖೆ ನಡೆಸಲು ಸರ್ಕಾರದಿಂದ ಆದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್ ಭಾರದ್ವಾಜ್ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಎಂಟು ಅಂತಸ್ತಿನ ಕಟ್ಟಡದ ಭಾಗಗಳು ಎರಡು ಎರಡು ಅಂತಸ್ತಿನ ಕಟ್ಟಡಗಳಿಗೆ ತಗುಲಿ ಹಾನಿಗೊಳಗಾದವು, ಹೋಟೆಲ್ ಸೇರಿದಂತೆ ಎರಡು ಪಕ್ಕದ ಕಟ್ಟಡಗಳು ಕೂಡ ಅಪಾಯದಲ್ಲಿದೆ ಎಂದು ಅವರು ಹೇಳಿದರು. ಜಿಲ್ಲಾಡಳಿತವು ಕಟ್ಟಡಗಳ ಪ್ರತಿ ನಿವಾಸಿಗಳಿಗೆ ತಕ್ಷಣದ ಹಣಕಾಸಿನ ಸಹಾಯವಾಗಿ 10,000 ರೂಗಳನ್ನು ಒದಗಿಸಿದೆ ಎಂದು ಮೊಖ್ತಾ ಹೇಳಿದರು.
ಮುಂಗಾರು ಮಳೆ ಹಿಮಾಚಲ ಪ್ರದೇಶದಾದ್ಯಂತ ಹಲವಾರು ಭೂಕುಸಿತಗಳಿಗೆ ಕಾರಣವಾಗಿದೆ. ಇತ್ತೀಚೆಗೆ, ಶಿಮ್ಲಾ ಜಿಲ್ಲೆಯ ರೋಹ್ರುವಿನಲ್ಲಿ ಭಾರೀ ಮಳೆಯಿಂದ ಸೇತುವೆ ಕುಸಿದಿದೆ. ರೋಹ್ರು ಉಪವಿಭಾಗದ ಜಂಗ್ಲಿಕ್ ಸೇತುವೆಗೆ ಹೋಗುವ ಎಲ್ಲಾ ರಸ್ತೆಗಳು ಭಾರೀ ಮಳೆಯಿಂದಾಗಿ ಕುಸಿದ ನಂತರ ಮುಚ್ಚಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ತಿಳಿಸಿದ್ದಾರೆ.
ಕಿನ್ನೌರ್ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ಹಲವಾರು ಭೂಕುಸಿತದಿಂದಾಗಿ, ಕಿನ್ನೌರ್ ಜಿಲ್ಲೆಯ ಪುವಾರಿಯಿಂದ ಕಾಜಾದವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಹಿರಿಯ ಅಧಿಕಾರಿಯ ಪ್ರಕಾರ ಬಿಲಾಸ್ಪುರದ ನೈನಾ ದೇವಿ 180.6 ಮಿಮೀ ಮಳೆಯಾಗಿದ್ದು, ಸೋಲಾನ್‌ನಲ್ಲಿ ಕಂದಘಾಟ್ 65.2 ಮಿಮೀ ಮಳೆಯಾಗಿದೆ. ಶಿಮ್ಲಾದಲ್ಲಿ ಶುಕ್ರವಾರ ಬೆಳಿಗ್ಗೆ 9.30 ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 54.6 ಮಿ.ಮೀ. ಮಳೆಯಾಗಿದೆ.
#WATCH | A multi-storey building collapsed at Kachi Ghati area of Himachal Pradesh’s Shimla district on Thursday evening, no loss of life was reported.
A probe has been ordered by the government to look into the incident, said Urban development minister Suresh Bhardwaj. pic.twitter.com/IoNHk3yXmF
— ANI (@ANI) September 30, 2021
2021 ರಲ್ಲಿ ಹಿಮಾಚಲ ಪ್ರದೇಶದಲ್ಲಿ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 432 ಕ್ಕೆ ಏರಿತು, ಇದು ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಶಿಮ್ಲಾ-ರಾಜಧಾನಿ ನಗರ ಮತ್ತು ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ತಾಪಮಾನವು ಗಣನೀಯವಾಗಿ ಕಡಿಮೆಯಾಗಿದ್ದರೂ ಸಹ, ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದ ಭೂಕುಸಿತಗಳು, ಪ್ರಮುಖ ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಸ್ತವ್ಯಸ್ತತೆಯು ವ್ಯಾಪಕವಾದ ಮಳೆ ಮತ್ತು ಹಿಮಪಾತದಿಂದಾಗಿ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿತು.
ಇದನ್ನೂ ಓದಿ: Himachal Pradesh Landslide: ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ; ಕುಲು ರಾಷ್ಟ್ರೀಯ ಹೆದ್ದಾರಿ ಬಂದ್