ಹಿಟ್​ ಆ್ಯಂಡ್​ ರನ್: ಸಿಸಿಟಿವಿ ದೃಶ್ಯಗಳನ್ನು ನೀಡಲು ಬಾರ್ ವಿಫಲ, ಪರವಾನಗಿ ತಾತ್ಕಾಲಿಕ ರದ್ದು

ವರ್ಲಿಯಲ್ಲಿ ನಡೆದ ಹಿಟ್​ ಆ್ಯಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳನ್ನು ನೀಡಲು ವಿಫಲವಾದ ಬಾರ್​ನ ಪರವಾನಗಿಯನ್ನು ಅಬಕಾರಿ ಇಲಾಖೆಯು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಮಿಹಿರ್ ಶಾ ಎಂಬಾತ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದರು

ಹಿಟ್​ ಆ್ಯಂಡ್​ ರನ್: ಸಿಸಿಟಿವಿ ದೃಶ್ಯಗಳನ್ನು ನೀಡಲು ಬಾರ್ ವಿಫಲ, ಪರವಾನಗಿ ತಾತ್ಕಾಲಿಕ ರದ್ದು
ಬಾರ್
Image Credit source: Free Press Journal

Updated on: Jul 15, 2024 | 10:13 AM

ಮುಂಬೈನ ವರ್ಲಿಯಲ್ಲಿ ನಡೆದ ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದ ತನಿಖೆ ಮುಂದುವರೆದಿದೆ. ಸಿಸಿಟಿವಿ ದೃಶ್ಯಗಳನ್ನು ನೀಡಲು ವಿಫಲವಾದ ಸಾಯಿ ಪ್ರಸಾದ್ ಬಾರ್​ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಪ್ರಮುಖ ಆರೋಪಿ ಮಿಹಿರ್ ಶಾ ಶಿವಸೇನಾ ನಾಯಕನ ಪುತ್ರನಾಗಿದ್ದಾನೆ. ದ್ಯ ಸೇವಿಸಿ ತನ್ನ ಐಷಾರಾಮಿ ಕಾರನ್ನು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದರು. ಕಳೆದ ಭಾನುವಾರ ಬೆಳಗಿನ ಜಾವ ವರ್ಲಿಯಲ್ಲಿ ಮಿಹಿರ್ ಶಾ ಚಲಾಯಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಹೊಡೆದಿತ್ತು ಪರಿಣಾಮ ಕಾವೇರಿ ನಖ್ವಾ ಎಂಬುವವರು ಸಾವನ್ನಪ್ಪಿದ್ದಾರೆ, ಅವರ ಪತಿ ಪ್ರದೀಪ್ ಗಾಯಗೊಂಡಿದ್ದಾರೆ.

ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಕಾರಿನ ಬಾನೆಟ್​ ಮೇಲೆ ಬಿದ್ದಿದ್ದರು ಆಕೆ ಪತಿ ಹೇಗೋ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ, ಆದರೆ ಮಹಿಳೆಯನ್ನು 1.5 ಕಿ.ಮೀವರೆಗೆ ಎಳೆದುಕೊಂಡು ಹೋಗಿದ್ದಾರೆ.

ಮತ್ತಷ್ಟು ಓದಿ: BMW Hit and Run Case: ತಾನೇ ಕಾರು ಓಡಿಸುತ್ತಿದ್ದುದಾಗಿ ಒಪ್ಪಿಕೊಂಡ ಆರೋಪಿ ಮಿಹಿರ್​

ಅಪಘಾತದ ಸಮಯದಲ್ಲಿ ಅವರು ಮದ್ಯದ ಅಮಲಿನಲ್ಲಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಇದೀಗ ಮಿಹಿರ್ ಶಾ ಹೋಗಿದ್ದ ಬಾರ್​ ಮಾಲೀಕ ಸಿಸಿಟಿವಿ ದೃಶ್ಯಗಳನ್ನು ಕೊಡಲು ವಿಫಲರಾಗಿದ್ದು, ಅಬಕಾರಿ ಇಲಾಖೆಯು ಮಲಾಡ್​ನಲ್ಲಿರುವ ಬಾರ್​ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಜುಹುವಿನಲ್ಲಿರುವ ವೈಸ್-ಗ್ಲೋಬಲ್ ತಪಸ್​ ಬಾರ್​ನ ಒಂದು ಭಾಗವನ್ನು ಕೆಡವಿದ್ದರು.

ಇತ್ತೀಚೆಗಷ್ಟೇ ಪುಣೆಯಲ್ಲೂ ಇಂಥದ್ದೇ ಘಟನೆ ನಡೆದಿತ್ತು
ಅಪ್ರಾಪ್ತ ಬಾಲಕ ವೇದಾಂತ್​ ಅಗರ್ವಾಲ್ ಎಂಬಾತ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ