AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು ಎಂದು ಇಂದಿರಾ ಒಪ್ಪಿಕೊಂಡಿದ್ದರು, ಬಿಜೆಪಿ ಹಿಂದಿನದನ್ನು ಮರೆಯಬೇಕು: ಚಿದಂಬರಂ

ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು ಎಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಒಪ್ಪಿಕೊಂಡಿದ್ದರು, ಬಿಜೆಪಿ ಹಿಂದಿನದನ್ನು ಮರೆಯಬೇಕು ಎಂದು ಕಾಂಗ್ರೆಸ್​ನ ಹಿರಿಯ ನಾಯಕ, ರಾಜ್ಯಸಭಾ ಸಂಸದ ಪಿ ಚಿದಂಬರಂ ಹೇಳಿದ್ದಾರೆ. ಕೇಂದ್ರ ಸರ್ಕಾರವು ತುರ್ತು ಪರಿಸ್ಥಿತಿ ಹೇರಿದ್ದ ದಿನವನ್ನು ಸಂವಿಧಾನ ಹತ್ಯಾ ದಿನ ಎಂದು ಘೋಷಿಸಿದ ಬಳಿಕ ಚಿದಂಬರಂ ಈ ಹೇಳಿಕೆ ನೀಡಿದ್ದಾರೆ.

ಪಿ ಚಿದಂಬರಂ
ನಯನಾ ರಾಜೀವ್
|

Updated on: Jul 15, 2024 | 8:34 AM

Share

ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು ಎಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಒಪ್ಪಿಕೊಂಡಿದ್ದರು, ಬಿಜೆಪಿ ಹಿಂದಿನದನ್ನು ಮರೆಯಬೇಕು ಎಂದು ಕಾಂಗ್ರೆಸ್​ನ ಹಿರಿಯ ನಾಯಕ, ರಾಜ್ಯಸಭಾ ಸಂಸದ ಪಿ ಚಿದಂಬರಂ ಹೇಳಿದ್ದಾರೆ. ಕೇಂದ್ರ ಸರ್ಕಾರವು ತುರ್ತು ಪರಿಸ್ಥಿತಿ ಹೇರಿದ್ದ ದಿನವನ್ನು ಸಂವಿಧಾನ ಹತ್ಯಾ ದಿನ ಎಂದು ಘೋಷಿಸಿದ ಬಳಿಕ ಚಿದಂಬರಂ ಈ ಹೇಳಿಕೆ ನೀಡಿದ್ದಾರೆ.

ಇಂದು ದೇಶದಲ್ಲಿ ವಾಸಿಸುತ್ತಿರುವ ಶೇ.75ರಷ್ಟು ಜನರು 1975ಕರ ಬಳಿಕ ಹುಟ್ಟಿದವರು. ತುರ್ತು ಪರಿಸ್ಥಿತಿಯನ್ನು ಇಂದಿರಾ ಗಾಂಧಿ ಅವರು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ನಾವು ಸಂವಿಧಾನವನ್ನು ತಿದ್ದುಪಡಿ ಮಾಡಿದ್ದೇವೆ. ತುರ್ತು ಪರಿಸ್ಥಿತಿಯನ್ನು ಅಷ್ಟು ಸುಲಭವಾಗಿ ಹೇರಲು ಸಾಧ್ಯವಿಲ್ಲ ಎಂದರು.

50 ವರ್ಷಗಳ ನಂತರ ತುರ್ತು ಪರಿಸ್ಥಿತಿಯ ಹಕ್ಕುಗಳು ಮತ್ತು ತಪ್ಪುಗಳ ಬಗ್ಗೆ ಚರ್ಚಿಸುವುದರಲ್ಲಿ ಏನು ಪ್ರಯೋಜನ ಎಂದು ಅವರು ಕೇಳಿದರು. ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಎನ್​ಡಿಎ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ಪ್ರತಿ ದಿನ ಸಂವಿಧಾನ ಹತ್ಯೆ ದಿನವನ್ನು ಆಚರಿಸುತ್ತಿದೆ.

ಮತ್ತಷ್ಟು ಓದಿ: ಉಪಚುನಾವಣೆಯಲ್ಲಿ ಇಂಡಿಯಾ ಬಣಕ್ಕೆ ಭರ್ಜರಿ ಗೆಲುವು; ಬಿಜೆಪಿಯ ಭಯದ ಜಾಲ ತುಂಡಾಗಿದೆ: ರಾಹುಲ್ ಗಾಂಧಿ

ನೀವು ಪ್ರತಿಯೊಬ್ಬ ಬಡ ಹಾಗೂ ವಂಚಿತ ವರ್ಗಗಳ ಸ್ವಾಭಿಮಾನವನ್ನು ಕಿತ್ತುಕೊಂಡಿದ್ದೀರಿ ಎಂದು ದೂರಿದರು.

ಕೇಂದ್ರದ ಘೋಷಣೆಗೆ ಪ್ರತಿಕ್ರಿಯಿಸಿದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಾಯಕ ಕುನಾಲ್ ಘೋಷ್, ಬಿಜೆಪಿ ತನ್ನ ಜನವಿರೋಧಿ ನೀತಿಯಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದರು. ಭಾರತದಲ್ಲಿ 1975 ರ ತುರ್ತು ಪರಿಸ್ಥಿತಿಯು ರಾಷ್ಟ್ರದ ಇತಿಹಾಸದಲ್ಲಿ ಒಂದು ಕಟುವಾದ ಅಧ್ಯಾಯವಾಗಿ ನಿಂತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ

ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ

ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ

ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ

ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು

ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ

ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು

ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ

ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ