ಇಂಡಿಗೋ ವಿಮಾನದಲ್ಲಿ ನಿಂತುಕೊಂಡೇ ಪ್ರಯಾಣಿಸಲು ಮುಂದಾಗಿದ್ದ ಪ್ರಯಾಣಿಕ
ಪ್ರಯಾಣಿಕರೊಬ್ಬರು ಇಂಡಿಗೋ ವಿಮಾನದಲ್ಲಿ ನಿಂತುಕೊಂಡೇ ಪ್ರಯಾಣಿಸಲು ಮುಂದಾಗಿದ್ದ ಘಟನೆ ನಡೆದಿದೆ. ವಿಮಾನ ಟೇಕ್ ಆಫ್ ಆಗಿತ್ತು ನಿಂತಿದ್ದ ಪ್ರಯಾಣಿಕನನ್ನು ನೋಡಿ ಮತ್ತೆ ವಿಮಾನ ನಿಲ್ದಾಣಕ್ಕೆ ಇಳಿಸಲಾಯಿತು. ಮುಂಬೈಯಿಂದ ವಾರಣಾಸಿಗೆ ತೆರಳುವ 6ಇ 6543 ವಿಮಾನದ ಪ್ರಯಾಣಿಕರ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ದೋಷ ಸಂಭವಿಸಿದೆ. ವಿಮಾನದಲ್ಲಿ ನಿಂತಿದ್ದ ಪ್ರಯಾಣಿಕನಿಗೆ ಮೊದಲೇ ಬೇರೋಬ್ಬರು ಕಾಯ್ದಿರಿಸಿದ ಆಸನವನ್ನು ನಿಗದಿಪಡಿಸಿದ್ದು ಎಡವಟ್ಟಿಗೆ ಕಾರಣವಾಗಿದೆ.
ವಿಮಾನ(Flight)ದಲ್ಲಿ ಪ್ರಯಾಣಿಕರು ಶೌಚಾಲಯಕ್ಕೆ ತೆರಳುವುದು ಸೇರಿದಂತೆ ತುರ್ತು ಸಂದರ್ಭದಲ್ಲಿ ಮಾತ್ರ ತಮ್ಮ ಸೀಟು ಬಿಟ್ಟು ಹೋಗಬಹುದು ಇಲ್ಲವಾದಲ್ಲಿ ಸೀಟ್ ಬೆಲ್ಟ್ ಧರಿಸಿ ಕುಳಿತಲ್ಲೇ ಕುಳಿತಿರಬೇಕು ಇದು ನಿಯಮ. ಆದರೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ನಿಂತುಕೊಂಡು ಪ್ರಯಾಣಿಸಲು ಮುಂದಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಭಾರತೀಯ ರೈಲುಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬುವುದು ಸಾಮಾನ್ಯ ಆದರೆ ವಿಮಾನ ಹಾಗಲ್ಲ ಎಷ್ಟು ಆಸನಗಳಿರುತ್ತವೆಯೋ ಅಷ್ಟು ಮಾತ್ರ ಜನರು ಸಂಚರಿಸಲು ಸಾಧ್ಯ.
ಮೇ 21ರಂದು ಮುಂಬೈನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ನಿಂತುಕೊಂಡಿದ್ದ ದೃಶ್ಯ ಕಂಡುಬಂತು. ವಿಮಾನ ಟೇಕ್ ಆಫ್ ಆಗಿತ್ತು ನಿಂತಿದ್ದ ಪ್ರಯಾಣಿಕನನ್ನು ನೋಡಿ ಮತ್ತೆ ವಿಮಾನ ನಿಲ್ದಾಣಕ್ಕೆ ಇಳಿಸಲಾಯಿತು.
ಮುಂಬೈಯಿಂದ ವಾರಣಾಸಿಗೆ ತೆರಳುವ 6ಇ 6543 ವಿಮಾನದ ಪ್ರಯಾಣಿಕರ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ದೋಷ ಸಂಭವಿಸಿದೆ. ವಿಮಾನದಲ್ಲಿ ನಿಂತಿದ್ದ ಪ್ರಯಾಣಿಕನಿಗೆ ಮೊದಲೇ ಬೇರೋಬ್ಬರು ಕಾಯ್ದಿರಿಸಿದ ಆಸನವನ್ನು ನಿಗದಿಪಡಿಸಿದ್ದು ಎಡವಟ್ಟಿಗೆ ಕಾರಣವಾಗಿದೆ.
ಮತ್ತಷ್ಟು ಓದಿ: ಆಗಸದಲ್ಲಿ ತೀವ್ರವಾಗಿ ಅಲುಗಾಡಿದ ವಿಮಾನ : ಓರ್ವ ಪ್ರಯಾಣಿಕ ಸಾವು, 30 ಮಂದಿಗೆ ಗಾಯ
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಈ ಘಟನೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಮುಂಬೈನಿಂದ ವಾರಣಾಸಿಗೆ ಇಂಡಿಗೋ ವಿಮಾನದಲ್ಲಿ, ವಿಮಾನದ ಕೊನೆಯಲ್ಲಿ ವ್ಯಕ್ತಿಯೊಬ್ಬರು ನಿಂತಿರುವುದನ್ನು ಸಿಬ್ಬಂದಿ ನೋಡಿದ್ದಾರೆ. ಅಷ್ಟು ಹೊತ್ತಿಗೆ ವಿಮಾನ ಟೇಕಾಫ್ ಆಗುವ ಹಂತದಲ್ಲಿತ್ತು.
ಸೀಟು ಖಾಲಿ ಇರುವುದನ್ನು ತಪ್ಪಿಸಲು ಕೆಲವೊಮ್ಮೆ ವಿಮಾನಯಾನ ಸಂಸ್ಥೆಗಳು ಓವರ್ ಬುಕ್ ಮಾಡುತ್ತವೆ. ಹೀಗೆ ಟಿಕೆಟ್ ಓವರ್ ಬುಕ್ ಮಾಡಿದ್ದರಿಂದ ಈ ಎಡವಟ್ಟು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕೊನೆಗೆ ಈ ವಿಮಾನ 8.41ಕ್ಕೆ ನಿಲ್ದಾಣದಿಂದ ಹೊರಟಿದೆ.
ಇದಾದ ಬಳಿಕ ವಿಮಾನವನ್ನು ಮತ್ತೆ ಟರ್ಮಿನಲ್‌ಗೆ ತರಲಾಯಿತು, ಆದರೆ, ಈ ಬಗ್ಗೆ ವಿಮಾನಯಾನ ಸಂಸ್ಥೆಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವಿಮಾನವು ಟರ್ಮಿನಲ್‌ಗೆ ಹಿಂತಿರುಗಿದ ನಂತರ ವ್ಯಕ್ತಿಯನ್ನು ಡಿಬೋರ್ಡಿಂಗ್ ಮಾಡಲಾಗಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
🔷IndiGo flight 6E6543 from Mumbai to Varanasi had to return to the aerobridge after the cabin crew noticed a passenger standing in the back, unable to find a seat due to overbooking.
🔷The aircraft was taxiing out when this happened. The cabin crew alerted the pilots, and the… pic.twitter.com/DdaERuqfCV
— JetArena (@ArenaJet) May 21, 2024
ವಿಮಾನಯಾನ ಸಂಸ್ಥೆಗಳು ಪ್ರತಿಯೊಬ್ಬರ ಕ್ಯಾಬಿನ್ ಸಾಮಾನು ಸರಂಜಾಮುಗಳನ್ನು ಪರಿಶೀಲಿಸಿದ್ದು, ವಿಮಾನ ಟೇಕ್ ಆಫ್ ಆಗುವುದು ಸುಮಾರು ಒಂದು ಗಂಟೆ ತಡವಾಯಿತು ಎಂದು ಅವರು ಹೇಳಿದರು.
2016 ರಲ್ಲಿ ಡಿಜಿಸಿಎಂ ಹೊರಡಿಸಿದ ನಿಯಮಗಳ ಪ್ರಕಾರ, ವಿಮಾನ ಟೇಕ್ ಆಫ್ ಆದ ಒಂದು ಗಂಟೆಯೊಳಗೆ ವಿಮಾನಯಾನ ಕಂಪನಿಯು ಪ್ರಯಾಣಿಕರಿಗೆ ಮತ್ತೊಂದು ವಿಮಾನವನ್ನು ಒದಗಿಸಿದರೆ, ಅದು ಪ್ರಯಾಣಿಕರಿಗೆ ಯಾವುದೇ ಪರಿಹಾರವನ್ನು ಪಾವತಿಸಬೇಕಾಗಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ