ಜೀವಂತ ಶವ: ಸೊಸೆಯ ಕಾಟದಿಂದ ಮಗ ಆತ್ಮಹತ್ಯೆ, ನೊಂದ ತಾಯಿಯ ಭಾವುಕ ಪೋಸ್ಟ್
ಸೊಸೆಯ ಕಾಟದಿಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಇಲ್ಲಿ ನಾನು ಬದುಕಿದ್ದೂ ಸತ್ತಂತೆ ಜೀವಂತ ಶವವಾಗಿದ್ದೀನಿ ಎಂದು ಮೃತರ ತಾಯಿ ಭಾವುಕ ಪೋಸ್ಟ್ ಮಾಡಿದ್ದಾರೆ. ಇದೇ ವಾರ ಮುಂಬೈನ ವಿಲ್ಲೆ ಪಾರ್ಲೆಯಲ್ಲಿ ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ‘‘ಇಂದು ನಾನು ಜೀವಂತ ಶವವಾಗಿರುವಂತೆ ಭಾಸವಾಗುತ್ತಿದೆ.

ಮುಂಬೈ, ಮಾರ್ಚ್ 08: ಸೊಸೆಯ ಕಾಟದಿಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಇಲ್ಲಿ ನಾನು ಬದುಕಿದ್ದೂ ಸತ್ತಂತೆ ಜೀವಂತ ಶವವಾಗಿದ್ದೀನಿ ಎಂದು ಮೃತರ ತಾಯಿ ಭಾವುಕ ಪೋಸ್ಟ್ ಮಾಡಿದ್ದಾರೆ. ಇದೇ ವಾರ ಮುಂಬೈನ ವಿಲ್ಲೆ ಪಾರ್ಲೆಯಲ್ಲಿ ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ‘‘ಇಂದು ನಾನು ಜೀವಂತ ಶವವಾಗಿರುವಂತೆ ಭಾಸವಾಗುತ್ತಿದೆ. ನಿಮ್ಮ ಕಣ್ಣಿಗೆ ನಾನು ಬದುಕಿರುವಂತೆ ಕಾಣುತ್ತಿರಬಹುದು ಆದರೆ ಸತ್ಯವೇನೆಂದರೆ ಮಗ ಸತ್ತಾಗ ನಾನೂ ಕೂಡ ಸತ್ತಿದ್ದೇನೆ’’ ಎಂದು ಬರೆದಿದ್ದಾರೆ. ನನ್ನ ಮಗ ನನ್ನನ್ನು ಬಿಟ್ಟು ಹೋದ. ನಾನು ಈಗ ಜೀವಂತ ಶವವಾಗಿದ್ದೇನೆ. ಅವನು ನನ್ನ ಅಂತ್ಯಕ್ರಿಯೆಯನ್ನು ಮಾಡಬೇಕಿತ್ತು ಆದರೆ ನಾನು ಅಂತ್ಯಕ್ರಿಯೆ ಮಾಡುವ ಹಾಗಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಾಯಿ ತನ್ನನ್ನು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಎಂದು ಪರಿಚಯಿಸಿಕೊಂಡು ತನ್ನ ಪ್ರಯಾಣವನ್ನು ಹಂಚಿಕೊಂಡರು. ಸಖಿ ಕೇಂದ್ರ ಮತ್ತು ಇತರ ವಿಧಾನಗಳ ಮೂಲಕ, ನಾನು 46,000 ಕ್ಕೂ ಹೆಚ್ಚು ಮಹಿಳೆಯರಿಗೆ ಅವರ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡಿದ್ದೇನೆ. 37,000 ಕ್ಕೂ ಹೆಚ್ಚು ಮಹಿಳೆಯರಿಗೆ ನ್ಯಾಯ ದೊರಕಿಸಿಕೊಟ್ಟಿದ್ದೇನೆ ಮತ್ತು ಸಾವಿರಾರು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಅವರಿಗೆ ಉದ್ಯೋಗ ಮತ್ತು ತರಬೇತಿಯನ್ನು ನೀಡಿದ್ದೇನೆ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
ನಾನು ಯಾವುದೇ ಸಂಪತ್ತು ಗಳಿಸಿಲ್ಲ, ತಮ್ಮ ಇಬ್ಬರು ಮಕ್ಕಳನ್ನು ಯಾವುದೇ ಕೊರತೆ ಇರದಂತೆ ಬೆಳೆಸಿದೆ. ನಾನು ಎಂದೂ ನನ್ನ ಪರಿಸ್ಥಿತಿಗಾಗಿ ದೇವರನ್ನು ದೂಷಿಸಿಲ್ಲ. ನನ್ನ ಮಗ ನನ್ನ ಎಲ್ಲವೂ ಆಗಿದ್ದ, ಇಬ್ಬರೂ ಮಕ್ಕಳು ತುಂಬಾ ಪ್ರೀತಿಸುತ್ತಿದ್ದರು. ನನ್ನ ಮಗ ನನ್ನ ಸ್ನೇಹಿತ, ಒಡನಾಡಿ ಮ್ತತು ಸಹಾನುಭೂತಿಯುಳ್ಳ ವ್ಯಕ್ತಿಯಾಗಿದ್ದ. ಅವನು ನನ್ನ ಶಕ್ತಿ, ನನಗೆ ಬದುಕಲು ಮತ್ತು ಕೆಲಸ ಮಾಡಲು ಶಕ್ತಿಯನ್ನು ನೀಡಿದವನು ಎಂದು ಬರೆದಿದ್ದಾರೆ.
ಆದರೆ ಅವನು ತನ್ನ ಜೀವನವನ್ನು ಕೊನೆಗೊಳಿಸಲಿದ್ದೇನೆ ಎಂದು ಯಾರಿಗೂ ಹೇಳಲಿಲ್ಲ. ತಾಯಿ ತನ್ನ ಸೊಸೆ ಮತ್ತು ಇನ್ನೊಬ್ಬ ಸಂಬಂಧಿಯ ವಿರುದ್ಧ ದೂರು ದಾಖಲಿಸಿದ್ದು, ಅವರ ಮಗ ಬರೆದಿದ್ದ ಆತ್ಮಹತ್ಯೆ ಪತ್ರದಲ್ಲಿ ಅವರ ಹೆಸರಿದೆ. ಅವರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಲಾಗಿದೆ. ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಮಾರ್ಚ್ 3 ರಂದು ವಿಲೇ ಪಾರ್ಲೆ (ಪೂರ್ವ) ದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ 41 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಮುಂಬೈ ಪೊಲೀಸರು ಆತನ ಪತ್ನಿ ಮತ್ತು ಆಕೆಯ ಚಿಕ್ಕಮ್ಮನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
Mumbai: ಪತ್ನಿ ಹೆಸರು ಬರೆದಿಟ್ಟು ಹೋಟೆಲ್ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾದ ನಿಶಾಂತ್
ಆ ವ್ಯಕ್ತಿ ಉತ್ತರ ಪ್ರದೇಶದ ಕಾನ್ಪುರದವರಾಗಿದ್ದು , ಸಮಾಜ ಸೇವಕರಾಗಿ ಕೆಲಸ ಮಾಡುತ್ತಿದ್ದರು. ಮುಂಬೈಗೆ ಬಂದು ವಿಲೇ ಪಾರ್ಲೆಯಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಎರಡು ದಿನಗಳ ಕಾಲ ತಂಗಿದ್ದರು, ಮಾರ್ಚ್ 3 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮೃತರು ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರು ಮತ್ತು ಕೌಟುಂಬಿಕ ಕಲಹವನ್ನು ಎದುರಿಸುತ್ತಿದ್ದರು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಮೃತರ ತಾಯಿ ನೀಡಿದ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 108 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:20 am, Sat, 8 March 25