AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mumbai: ಪತ್ನಿ ಹೆಸರು ಬರೆದಿಟ್ಟು ಹೋಟೆಲ್​ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾದ ನಿಶಾಂತ್

ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಹೆಸರು ಬರೆದಿಟ್ಟು ಹೋಟೆಲ್​ನ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೃತ ವ್ಯಕ್ತಿಯನ್ನು ನಿಶಾಂತ್ ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಅವರು ಅನಿಮೇಷನ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 28 ರಂದು ವಿಲೇ ಪಾರ್ಲೆಯ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ತ್ರಿಪಾಠಿ ತಮ್ಮ ಕಂಪನಿಯ ವೆಬ್‌ಸೈಟ್‌ನಲ್ಲಿ ವಿದಾಯ ಸಂದೇಶವನ್ನು ಅಪ್‌ಲೋಡ್ ಮಾಡಿದ್ದರು.

Mumbai: ಪತ್ನಿ ಹೆಸರು ಬರೆದಿಟ್ಟು ಹೋಟೆಲ್​ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾದ ನಿಶಾಂತ್
ನಿಶಾಂತ್ Image Credit source: India TV
ನಯನಾ ರಾಜೀವ್
|

Updated on: Mar 07, 2025 | 9:54 AM

Share

ಮುಂಬೈ, ಮಾರ್ಚ್​ 07: ಮುಂಬೈನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 41 ವರ್ಷದ ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಹೆಸರು ಬರೆದಿಟ್ಟು ಹೋಟೆಲ್​ನ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೃತ ವ್ಯಕ್ತಿಯನ್ನು ನಿಶಾಂತ್ ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಅವರು ಅನಿಮೇಷನ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 28 ರಂದು ವಿಲೇ ಪಾರ್ಲೆಯ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ತ್ರಿಪಾಠಿ ತಮ್ಮ ಕಂಪನಿಯ ವೆಬ್‌ಸೈಟ್‌ನಲ್ಲಿ ವಿದಾಯ ಸಂದೇಶವನ್ನು ಅಪ್‌ಲೋಡ್ ಮಾಡಿದ್ದರು.

ಮುಂಬೈನ ವಿರಾರ್ ಪ್ರದೇಶದವರಾದ ತ್ರಿಪಾಠಿ ಅವರು ತಮ್ಮ ಪತ್ನಿ ಅಪೂರ್ವ ಪಾರಿಖ್ ಮತ್ತು ಆಕೆಯ ಚಿಕ್ಕಮ್ಮ ಪ್ರಾರ್ಥನಾ ಮಿಶ್ರಾ ಅವರಿಂದ ಕಿರುಕುಳ ಎದುರಿಸುತ್ತಿದ್ದರು ಎಂದು ವರದಿಯಾಗಿದೆ. ಹಿಂದಿನ ದಿನ ಅವರು ಮುಂಬೈನ ಹೋಟೆಲ್‌ಗೆ ಬಂದಿದ್ದರು. ಪೊಲೀಸರ ಪ್ರಕಾರ, ಅವರು ಆತ್ಮಹತ್ಯೆಗೆ ಮೂರು ದಿನಗಳ ಮೊದಲು ಕೊಠಡಿ ಕಾಯ್ದಿರಿಸಿದ್ದರು ಮತ್ತು ಘಟನೆಯ ದಿನದಂದು ಅವರ ಬಾಗಿಲಿನ ಮೇಲೆ ಡಿಸ್ಟರ್ಬ್ ಮಾಡಬೇಡಿ ಎಂಬ ಫಲಕವನ್ನು ಸಹ ಹಾಕಿದ್ದರು.

ತನ್ನ ಕೊನೆಯ ಸಂದೇಶದಲ್ಲಿ, ಈ ನಿಲುವಿಗೆ ತನ್ನ ಹೆಂಡತಿ ಮತ್ತು ಅವಳ ಚಿಕ್ಕಮ್ಮ ಕಾರಣ ಎಂದು ಆರೋಪಿಸಿದ ಅವರು, ತಾನು ಇನ್ನು ಮುಂದೆ ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದನು.

ಇದನ್ನೂ ಓದಿ
Image
6 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಯುವಕ ಆತ್ಮಹತ್ಯೆ: ಪತ್ನಿ ಕಿರುಕುಳ ಆರೋಪ
Image
ಪತ್ನಿ ಕಿರುಕುಳ ತಾಳಲಾರದೆ ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ
Image
ಪತಿ ಸಾವಿನ ಬೆನ್ನಲ್ಲೇ ಗೃಹ ಸಚಿವರಿಗೆ ಮಾಂಗಲ್ಯ ಸರ ಕಳುಹಿಸಿದ ಪತ್ನಿ
Image
ಒಂದಾಗಿ ಬಾಳೋಣಾ ಎಂದು ಕರೆಯಲು ಹೋಗಿ ಹೆಂಡ್ತಿ ಮನೆಯಲ್ಲೇ ಪತಿ ಆತ್ಮಹತ್ಯೆ

ಮತ್ತಷ್ಟು ಓದಿ: ಅತುಲ್​ ಸುಭಾಷ್​ ಆತ್ಮಹತ್ಯೆ: ಪೊಲೀಸರು ಸೃಷ್ಟಿಸಿದ್ದ ವ್ಯೂಹಕ್ಕೆ ಆರೋಪಿಗಳು ಬಿದ್ದಿದ್ದು ಹೀಗೆ

‘‘ಹಾಯ್ ಬೇಬ್ ನೀನು ಇದನ್ನು ಓದುವ ಹೊತ್ತಿಗೆ, ನಾನು ಹೋಗಿರುತ್ತೇನೆ ನನ್ನ ಕೊನೆಯ ಕ್ಷಣಗಳಲ್ಲಿ, ನಡೆದ ಎಲ್ಲದಕ್ಕೂ ನಾನು ನಿನ್ನನ್ನು ದ್ವೇಷಿಸಬಹುದಿತ್ತು, ಆದರೆ ನಾನು ದ್ವೇಷಿಸುವುದಿಲ್ಲ. ಈ ಕ್ಷಣಕ್ಕೆ, ನಾನು ಪ್ರೀತಿಯನ್ನು ಆರಿಸಿಕೊಳ್ಳುತ್ತೇನೆ. ಆಗ ನಾನು ನಿನ್ನನ್ನು ಪ್ರೀತಿಸುತ್ತಿದ್ದೆ. ಈಗ ನಾನು ನಿನ್ನನ್ನು ಪ್ರೀತಿಸುತ್ತೇನೆ.

ಎಂದಿಗೂ ನಿನ್ನ ಮೇಲಿರುವ ಪ್ರೀತಿ ಮಾಸುವುದಿಲ್ಲ ಎಂದು ಬರೆದಿದ್ದಾರೆ. ನೀನು ಮತ್ತೆ ಚಿಕ್ಕಮ್ಮ ನನ್ನ ಸಾವಿಗೆ ಕಾರಣ ಎಂದು ನನ್ನ ತಾಯಿಗೆ ತಿಳಿದಿದೆ. ಆದ್ದರಿಂದ, ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ಈಗ ನನ್ನ ತಾಯಿಯ ಬಳಿಗೆ ಹೋಗಬೇಡಿ ಆಕೆ ತುಂಬಾ ಕುಗ್ಗಿದ್ದಾಳೆ, ಶಾಂತಿಯಿಂದ ದುಃಖಿಸಲಿ’’ ಎಂದು ಬರೆದಿದ್ದಾನೆ.

ಬೆಂಗಳೂರಿನಲ್ಲೂ ನಡೆದಿತ್ತು ಇಂಥದ್ದೇ ಪ್ರಕರಣ ಟೆಕ್ಕಿ ಸುಭಾಷ್ ಪತ್ನಿಯ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ, ಸುಮಾರು 45 ನಿಮಿಷಗಳ ವಿಡಿಯೋ ಮಾಡಿ ಅಪ್​ಲೋಡ್ ಮಾಡಿದ್ದ. ಅದರಲ್ಲಿ ಪತ್ನಿ ತನಗೆ ಹೇಗೆಲ್ಲಾ ಚಿತ್ರಹಿಂಸೆ ಕೊಟ್ಟಳು ಎಂಬುದನ್ನು ವಿವರಿಸಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್