6 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಯುವಕ ಆತ್ಮಹತ್ಯೆ: ಪತ್ನಿ ಕಿರುಕುಳ ಆರೋಪ
ಕಳೆದ ಆರು ತಿಂಗಳು ಹಿಂದೆ ಅಷ್ಟೇ ಮದುವೆಯಾಗಿದ್ದ ನವವಿವಾಹಿತ ಯುವಕ ಸಾವನ್ನಪ್ಪಿದ್ದಾನೆ. ಹಲವು ಕನಸುಗಳೊಂದಿಗೆ ಮದುವೆಯಾಗಿದ್ದ ಯುವಕ ಕೇವಲ ಆರೇ ತಿಂಗಳಲ್ಲಿ ದುರಂತ ಅಂತ್ಯಕಂಡಿದ್ದು, ಈ ಸಾವಿನ ಹಿಂದೆ ಪತ್ನಿಯ ಕಿರುಕುಳ ಆರೋಪ ಕೇಳಿಬಂದಿದೆ. ಹಾಗಾದ್ರೆ, ಆತ್ಮಹತ್ಯೆಗೆ ಕಾರಣವೇನು? ಯುವಕನ ಕುಟುಂಬಸ್ಥರು ಮಾಡಿರುವ ಆರೋಪವೇನು ಎನ್ನುವ ವಿವರ ಇಲ್ಲಿದೆ.

ಕಲಬುರಗಿ, (ಮಾರ್ಚ್ 03): ಪತ್ನಿಯ (Wife) ಕಿರುಕುಳಕ್ಕೆ ಬೇಸತ್ತು ಪತಿ (Husband) ನೇಣಿಗೆ ಶರಣಾದ ಘಟನೆ ಕಲಬುರಗಿಯ (Kalaburagi) ಮಹಾದೇವ ನಗರದಲ್ಲಿ ನಡೆದಿದೆ. ಕಲಬುರಗಿಯ ಮಹದೇವನಗರದಲ್ಲಿ ರಾಕೇಶ್(30) ಆತ್ಮಹತ್ಯೆಗೆ ಶರಣಾದ ಯುವಕ. ಕಳೆದ 6 ತಿಂಗಳ ಹಿಂದೆ ಅಷ್ಟೇ ರಾಕೇಶ್ ಮೇಘಾ ಎನ್ನುವಾಕೆಯನ್ನು ಮದುವೆಯಾಗಿದ್ದ. ಬಳಿಕ ರಾಕೇಶ್‌ಗೆ ಮನೆಗೆಲಸ ಸೇರಿ ಇತರೆ ವಿಷಯಗಳಿಗೆ ಪತ್ನಿ ಕಿರುಕುಳ ಕೊಡಲಾರಂಭಿಸಿದ್ದಾಳೆ. ಅಲ್ಲದೇ ನನ್ನ ಮಾತು ಕೇಳದಿದ್ರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಳು. ಇದರಿಂದ ಬೇಸತ್ತು ಪತಿ ರಾಕೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳೆದ 6 ತಿಂಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ರಾಕೇಶ್ ಮದುವೆಯಾಗಿತ್ತು. ಆದರೆ ಮದುವೆ ಬಳಿಕ ಮನೆ ಕೆಲಸ ಸೇರಿ ಇತರೆ ವಿಷಯಗಳಿಗೆ ರಾಕೇಶ್‌ಗೆ ಪತ್ನಿ ನಿತ್ಯ ಕಿರುಕುಳ ಕೊಡುತ್ತಿದ್ದಳು. ಒಂದು ವೇಳೆ ಮಾತು ಕೇಳದೇ ಇದ್ದರೆ ಪೊಲೀಸರಿಗೆ ದೂರು ಕೊಡುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಳು. ಇದೇ ಕಾರಣಕ್ಕೆ ಕಿರುಕುಳ ತಾಳಲಾರದೇ ನೇಣು ಬಿಗಿದುಕೊಂಡ ರಾಕೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಪತ್ನಿ ಮೇಘಾ ಸೇರಿ ಹಲವರ ವಿರುದ್ಧ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ಲೈಂಗಿಕವಾಗಿ ಬಳಸಿಕೊಂಡು ಮಹಿಳಾ ಅಧಿಕಾರಿ ಮೋಸ: ಮಂಗಳೂರಿನಲ್ಲಿ ಯುವಕ ಆತ್ಮಹತ್ಯೆ
ರಾಕೇಶ್ನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ರಾಕೇಶ್ ಆತ್ಮಹತ್ಯೆಗೆ ನಿಖರ ಕಾರಣವೇನು ಎನ್ನುವುದನ್ನು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಬೇಕಿದೆ. ಏನೇ ಹೇಳಿ ಮದುವೆಯಾದ ಆರೇ ತಿಂಗಳಿಗೆ ಯುವಕ ಸಾವಿನ ಹಾದಿ ತುಳಿದಿರುವುದು ದುರಂತ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:27 pm, Mon, 3 March 25



