AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ: ರಸ್ತೆಬದಿಯಲ್ಲಿ ಮಹಿಳೆಯ ರಕ್ತಸಿಕ್ತ ದೇಹ ಪತ್ತೆ, ಪಾದಗಳಲ್ಲಿತ್ತು ಹತ್ತಾರು ಮೊಳೆ

ಬಿಹಾರದ ನಳಂದ ಜಿಲ್ಲೆಯ ಚಾಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಒಬ್ಬ ಮಹಿಳೆಯನ್ನು ಕ್ರೂರವಾಗಿ ಕೊಲೆ ಮಾಡಿ, ಆಕೆಯ ದೇಹವನ್ನು ರಸ್ತೆಬದಿಯ ಹೊಲದಲ್ಲಿ ಎಸೆಯಲಾಯಿತು. ಕೊಲೆಯ ಕ್ರೌರ್ಯ ಎಷ್ಟಿತ್ತೆಂದರೆ, ಆ ಮಹಿಳೆಯ ಎರಡೂ ಪಾದಗಳಿಗೆ ಮೊಳೆಗಳನ್ನು ಹೊಡೆಯಲಾಗಿತ್ತು.

ಬಿಹಾರ: ರಸ್ತೆಬದಿಯಲ್ಲಿ ಮಹಿಳೆಯ ರಕ್ತಸಿಕ್ತ ದೇಹ ಪತ್ತೆ, ಪಾದಗಳಲ್ಲಿತ್ತು ಹತ್ತಾರು ಮೊಳೆ
ಕ್ರೈಂ
ನಯನಾ ರಾಜೀವ್
|

Updated on: Mar 07, 2025 | 8:03 AM

Share

ಪಾಟ್ನಾ, ಮಾರ್ಚ್​ 07: ಬಿಹಾರದ ನಳಂದ ಜಿಲ್ಲೆಯ ರಸ್ತೆಬದಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಚಾಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಹದ್ದೂರ್‌ಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಶವವನ್ನು ಕಂಡ ನಿವಾಸಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ನೈಟ್ ಡ್ರೆಸ್ ಧರಿಸಿರುವುದು ಕಂಡುಬಂದಿದೆ. ಆಕೆಯ ದೇಹದಲ್ಲಿ ಹಲವು ಗಾಯಗಳಾಗಿದ್ದು, ಎರಡೂ ಪಾದಗಳಿಗೆ ಮೊಳೆಗಳನ್ನು ಚುಚ್ಚಲಾಗಿತ್ತು.

ಪೊಲೀಸರು ಮೃತದೇಹವನ್ನು ಬಿಹಾರ ಷರೀಫ್ ಸದರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಗುರುತು ಸಿಕ್ಕಿಲ್ಲವಾದ್ದರಿಂದ ಶವಾಗಾರದಲ್ಲಿ ಇರಿಸಿದ್ದಾರೆ. ಕೊಲೆಯ ಹಿಂದಿನ ಉದ್ದೇಶವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ವೈಯಕ್ತಿಕ ದ್ವೇಷವಿರಬಹುದು, ಇಲ್ಲವೇ ಅಪರಿಚಿತರು ಕೊಲೆ ಮಾಡಿರಬಹುದು ಎಲ್ಲಾ ಸಂಭಾವ್ಯ ಕೋನಗಳ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮರಣೋತ್ತರ ವರದಿ ಮತ್ತು ಶವದ ಗುರುತಿಸುವಿಕೆ ಪ್ರಕರಣವನ್ನು ಭೇದಿಸಲು ಈ ಎಲ್ಲಾ ಅಂಶಗಳು ಸಹಾಯ ಮಾಡುತ್ತವೆ. ಈ ಘಟನೆಯು ನಿವಾಸಿಗಳನ್ನು ಆತಂಕಕ್ಕೆ ದೂಡಿದೆ. ಗ್ರಾಮಸ್ಥರು ಇಂತಹ ಪ್ರಕರಣವನ್ನು ಈ ಹಿಂದೆ ನೋಡಿರಲಿಲ್ಲ ಎಂದು ಹೇಳಿದ್ದಾರೆ. ಮಹಿಳೆಯನ್ನು ಗುರುತಿಸಲು ಮತ್ತು ಅದಕ್ಕೆ ಕಾರಣರಾದವರನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಪೊಲೀಸರು ಸಾರ್ವಜನಿಕರನ್ನು ಕೋರಿದ್ದಾರೆ.

ಇದನ್ನೂ ಓದಿ
Image
ತಮಿಳುನಾಡಿನಿಂದ ಕೊಯಮತ್ತೂರಿಗೆ ಹೋಗಿ ಹೆಂಡತಿಯನ್ನು ಕೊಂದ ಗಂಡ!
Image
ಮದುವೆಯಾದ ಎರಡೇ ದಿನಕ್ಕೆ ಮಗುವನ್ನು ಹೆತ್ತ ಯುವತಿ!
Image
ಹೆತ್ತವರು, ಸಹೋದರಿಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದ ಯುವಕ
Image
ಯುವತಿ ಜತೆಗಿದ್ದ ಸ್ನೇಹಿತನಿಂದಲೇ ಅತ್ಯಾಚಾರ ಮಾಡಿಸಿ, ದರೋಡೆ ಮಾಡಿ ಪರಾರಿ

ಮತ್ತಷ್ಟು ಓದಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೈಯಲ್ಲಿದ್ದ ‘ಓಂ’ ಟ್ಯಾಟೂವನ್ನು ಆ್ಯಸಿಡ್ ಹಾಕಿ ಸುಟ್ಟ ಕಾಮುಕರು

ಪ್ರಕರಣವನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಮತ್ತು ಭಾಗಿಯಾಗಿರುವವರನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಗುರುವಾರ ಬೆಳಗ್ಗೆ, ಬಹದ್ದೂರ್‌ಪುರ ಗ್ರಾಮದ ಜನರು ರಸ್ತೆಬದಿಯ ಹೊಲದಲ್ಲಿ ಮಹಿಳೆಯ ಶವ ಬಿದ್ದಿರುವುದನ್ನು ನೋಡಿದರು. ಮೃತ ದೇಹವನ್ನು ನೋಡಿ ಗ್ರಾಮಸ್ಥರು ಆಘಾತಕ್ಕೊಳಗಾದರು. ಮಹಿಳೆ ನೈಟಿ ಧರಿಸಿದ್ದರು, ಇದು ಕೊಲ್ಲುವ ಮೊದಲು ಆಕೆಗೆ ಚಿತ್ರಹಿಂಸೆ ನೀಡಲಾಗಿದೆ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಇಂತಹ ಭೀಕರ ಘಟನೆಯನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕರೆ, ತಕ್ಷಣ ಪೊಲೀಸರಿಗೆ ತಿಳಿಸಬೇಕೆಂದು ಪೊಲೀಸರು ಸ್ಥಳೀಯ ಜನರಲ್ಲಿ ಮನವಿ ಮಾಡಿದ್ದಾರೆ.

ಮುಂಬೈ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ರೈಲ್ವೆ ನಿಲ್ದಾಣದಲ್ಲಿ ಎಸೆದು ಹೋದ ಪಾಪಿಗಳು

ಬಾಲಕಿ ಮೇಲೆ ಐವರು ಪುರುಷರು ಸಾಮೂಹಿಕ ಅತ್ಯಾಚಾರವೆಸಗಿ ರೈಲ್ವೆ ನಿಲ್ದಾಣದಲ್ಲಿ ಎಸೆದು ಹೋದ ಘಟನೆ ಮುಂಬೈನಲ್ಲಿ ನಡೆದಿದೆ. ದಾದರ್ ರೈಲ್ವೆ ನಿಲ್ದಾಣದಲ್ಲಿ ಬಾಲಕಿಯನ್ನು ಎಸೆದಿದ್ದರು.ಫೆಬ್ರವರಿ 26 ರಂದು ಜೋಗೇಶ್ವರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜಯನಗರ ಪ್ರದೇಶದಲ್ಲಿ ಈ ಭಯಾನಕ ಘಟನೆ ಸಂಭವಿಸಿದೆ.

ಆರೋಪಿಗಳಲ್ಲಿ ಒಬ್ಬ ಬಾಲಕಿಯನ್ನು ಕೋಣೆಯೊಳಗೆ ಕರೆದೊಯ್ದಿದ್ದ, ಆಗಲೇ ಅಲ್ಲಿ ನಾಲ್ವರು ಇದ್ದರು. ಐವರು ಪುರುಷರು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ದಾದರ್ ರೈಲ್ವೆ ನಿಲ್ದಾಣದ ಬಳಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಮರುದಿನ, ಫೆಬ್ರವರಿ 27 ರಂದು, ದಾದರ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 12 ರಲ್ಲಿ ರೈಲ್ವೇ ಪೊಲೀಸ್ ಸಿಬ್ಬಂದಿ ಸಂತ್ರಸ್ತೆಯನ್ನು ನೋಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ